Police Bhavan Kalaburagi

Police Bhavan Kalaburagi

Sunday, July 17, 2011

GULBARGA DIST REPORTED CRIMES

ಜೂಜಾಟ ಪ್ರಕರಣ :
ಚಿತ್ತಾಪುರ ಠಾಣೆ:
ದಿನಾಂಕ 17/07/11 ರಂದು ಚಿತ್ತಾಫೂರದ ಆಶ್ರಯ ಕಾಲನಿಯಲ್ಲಿ ಸಾರ್ವಜನಿಕ ಸ್ಥೃಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅದೃಷ್ಟ ಅವಲಂಬಿತ ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿಯ ಮೇರೆಗೆ ಚಿತ್ತಾಪೂರ ಠಾಣೆಯ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ
ಸುನಿಲ ತಂದೆ ಪ್ರಕಾಶ ಕಲ್ಲಕ, ಶಾಮ ತಂದೆ ವಿಜಯಕುಮಾರ ಬಸುದೆ, ಬಾಲರಾಜ ತಂದೆ ಸುರೆಶ ಗುತ್ತೆದಾರ, ಶ್ರೀಧರ ತಂದೆ ಈರಣ್ಣ ಚೌಧರಿ, ಜಗನ್ನಾತ ತಂದೆ ಚಂದಯ್ಯಾ ಗುತ್ತೇದಾರ, ಶಿವರಾಜ ತಂದೆ ಅಶೋಕ ಕಲ್ಲಕ, ವಿಜಯ ತಂದೆ ಪ್ರಕಾಶ ಕಲ್ಲಕ, ಕಿರಣ ತಂದೆ ಅಶೋಕ ಈಳಗೇರ, ಸಂತೋಷ ತಂದೆ ನಾಗಣ್ಣ ರಾಮತೀರ್ಥ, ಶರಣು ತಂದೆ ವೀರಭದ್ರಪ್ಪ ಹಳ್ಳಿ, ಸುರೆಶ ತಂದೆ ಮರೆಪ್ಪ ನರಿಬೋಳಿ, ಚಂದ್ರು ತಂದೆ ಮಲಕಣ್ಣ ಭಜಂತ್ರಿ. ಸಾ| ಎಲ್ಲರೂ ಚಿತ್ತಾಫೂರ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 4250/-ರೂ, 6 ಮೊಬೈಲುಗಳು ಅಕಿ: 1800/-ರೂ, 52 ಇಸ್ಪೇಟ ಎಲೆಗಳು ಅಕಿ: 00, ಮತ್ತು ಒಂದು ಪ್ಲಾಸ್ಟಿಕ ಚಾಪೆ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ .

ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ :
ರಾಧಿಕಾ ಗಂಡ ಆನಂದ ಮೋರೆ ಸಾಃ ಜೀವಣಗಿ ರವರು ನಾನು ಕಿರಾಣಿ ಅಂಗಡಿಗೆ ಸಾಮಾನುಗಳನ್ನು ತರಲು ಹೋಗುತ್ತಿರುವಾಗ ನನ್ನ ಚಿಕ್ಕಪ್ಪ ಸದನ ಇತನ ಹೆಂಡತಿಯಾದ ರೇಖಾ, ಇವಳ ಮಗನಾದ ಶೇಖರ ಮತ್ತು ಇತನ ಹೆಂಡತಿ ಸಂಗೀತ ಇವರು ತಮ್ಮ ಮನೆಯ ಮುಂದೆ ನಿಂತು ನನಗೆ ಅವಾಚ್ಯವಾಗಿ ಬಯದು ನೀನು ಬೇರೆ ಜಾತಿಯವಳುನ ಸಂಗಡ ಮದುವೆ ಹೇಗೆ ಆಗಿದ್ದಿಯಾ ಅಂತಾ ನಿನ್ನ ತಂದೆ ಆಸ್ತಿಯಲ್ಲಿ ನಿನಗೆ ಪಾಲು ಕೊಡುವುದಿಲ್ಲಾ ಅಂತಾ ಅನ್ನುತ್ತಿದ್ದಾಗ, ನಾನು ನನ್ನ ತಂದೆಯ ಆಸ್ತಿಗೆ ಹೇಗೆ ತೋಗಬೇಕೋ ನನಗೆ ಗೊತ್ತಿದೆ ಅಂತಾ ಅನ್ನುತ್ತಾ ಮುಂದೆ ಹೋಗುತ್ತಿರುವಾಗ ನನ್ನ ಚಿಕ್ಕಮ್ಮ ರೇಖಾ ಸೊಸೆ ಸಂಗೀತಾ ಇವರು ಬಡಿಗೆಯಿಂದ ಹೊಡೆದು ರಕ್ತಗಾಯ ಗುಪ್ತಗಾಯ ಪಡಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಕಮಲಾಪೂರ ಠಾಣೆ : ಪವನ ತಂದೆ ಪ್ರಕಾಶ ಬಮ್ಮಳಗಿ ಸಾಃ ಮರ್ಜಾಪೂರ ತಾಃಜಿಃ ಬೀದರ ಹಾಃವಃ ಕೆ.ಇ.ಬಿ ರೋಡ ಮೋಹನ ಮಾರ್ಕೇಟ ಬೀದರ ರವರು ನಾನು ಮತ್ತು ನನ್ನ ತಂದೆ ಪ್ರಕಾಶ, ನನ್ನ ತಮ್ಮಂದಿರಾದ ಪ್ರದೀಪ, ಪ್ರವೀಣ ಮತ್ತು ನಮ್ಮ ಮಾವನಾದ ಸಂದೀಪ ಪಾಟೀಲ ಎಲ್ಲರೂ ಕೂಡಿಕೊಂಡು ಇಂಡಿಕಾ ಕಾರ ನಂ. ಎಂಹೆಚ್:03, ಎಸ್:4762 ನೇದ್ದರಲ್ಲಿ ತಮ್ಮನಾದ ಪ್ರದೀಪ ಇತನ ಬಿಇ ಕೌನ್ಸಲಿಂಗ ಗುಲಬರ್ಗಾದಲ್ಲಿ ಇದ್ದ ಪ್ರಯುಕ್ತ ಕೌನ್ಸಲಿಂಗ್ ಮುಗಿಸಿಕೊಂಡು ಮರಳಿ ಬೀದರಕ್ಕೆ ಹೊರಟಿದ್ದು ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ನಂ. 218 ನೇದ್ದರ ರೋಡಿನ ಕಿಣ್ಣಿ ಸಡಕ ಗ್ರಾಮದ ವಿಶ್ವನಾಥ ಒಣಕೇರಿ ಇವರ ಹೊಲ ಹತ್ತಿರ ಹೋಗುತ್ತಿರುವಾಗ ಎದುರುಗಡೆಯಿಂದ ಟ್ರ್ಯಾಕ್ಟರ ನಂ. ಕೆಎ: 32, ಟಿಎ:1185-86 ನೇದ್ದರ ಚಾಲಕನಾದ ವೀರಭದ್ರೇಶ ತಂದೆ ಕಲ್ಯಾಣರಾವ ಸಾಃ ಮರಗುತ್ತಿ ಇತನು ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ರೋಡಿನ ತುಂಬಾ ಅಡ್ಡಾತಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ನಮ್ಮ ಕಾರಿನ ಮುಂದಿನ ಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ, ನನಗೆ ರಕ್ತಗಾಯವಾಗಿದ್ದು ಮತ್ತು ನನ್ನ ತಮ್ಮಂದಿರಾದ ಪ್ರದೀಪ, ಪ್ರವೀಣ ಮತ್ತು ನನ್ನ ತಂದೆಗೆ ಭಾರಿ ರಕ್ತಗಾಯಗಳಾಗಿದ್ದು ಉಪಚಾರ ಕುರಿತು ಆಸ್ಪತ್ರಗೆ ಸೇರಿಯಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ;

ಮಳಖೇಡ ಠಾಣೆ: ಶ್ರೀ ಗುರುದೇವಿ ತಂದೆ ಸಂತೋಷಕುಮಾರ ರವರು ನಾನು ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವಾಗ ಅನುಸುಯಾ ಗಂಡ ದೇವಪ್ಪಾ ಬೆಣ್ಣುರ ಇವಳು ನನ್ನಗೆ ಅವಾಚ್ಚವಾಗಿ ಬೈಯುತ್ತಾ ಸಾರ್ವಜನಿಕರ ಮಧ್ಯದಲ್ಲಿ ಅವಮಾನ ಮಾಡಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೈಪುಗಳ ಕಳ್ಳ ಸಾಗಾಣಿಕೆ 4 ಜನರ ಬಂದನ

ಆಳಂದ ಠಾಣೆ : ನಾನು ಪಿ..ಎಸ.ಐ ಆಳಂದ ದಿನಾಂಕ 15/07/2011 ರಂದು ರಾತ್ರಿ ಗಸ್ತು ಚಕಿಂಗ ಮತ್ತು ರೋಡ ಪೆಟ್ರೋಲಿಂಗ ಕರ್ತವ್ಯದಲ್ಲಿರುವಾಗ ಮಧ್ಯರಾತ್ರಿ ಸುಮಾರಿಗೆ ಆಳಂದ ಆರ್.ಟಿ.ಓ ಚಕ್ ಪೊಸ್ಟ ಹತ್ತಿರ ಆಳಂದ ಗುಲಬರ್ಗಾ ರೋಡಿನಲ್ಲಿ ಹನಿ ನೀರಾವರಿಗೆ ಬಳಸುವ ಪೈಪಗಳು ಅ.ಕಿ.5000/-ರೂ ನೆದ್ದವುಗಳನ್ನು ಟಂ.ಟಂ.ನಂ.ಕೆಎ-39 3166 ನೆದ್ದರಲ್ಲಿ ಸಂಜಯ ತಂದೆ ದಶರಥ ಕಸಬೆ ಸಂಗಡ 3 ಜನರು ಸಾ: ಎಲ್ಲರೂ ಆಳಂದ ರವರು ತುಂಬಿಕೊಂಡು ಬರುತ್ತಿರುವಾಗ ಸಂಶಯದ ಮೇಲೆ ಹಿಡಿದು ವಿಚಾರಿಸಲಾಗಿ ಸದರ ಪೈಪಗಳ ಬಗ್ಗೆ ಸಮರ್ಪಕ ಉತ್ತರ ಕೊಡದೆ ಇರುವುದರಿಂದ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.


 

No comments: