Police Bhavan Kalaburagi

Police Bhavan Kalaburagi

Monday, July 18, 2011

GULBARGA DIST REPORTED CRIMES

ದರೋಡೆ ಪ್ರಕರಣ:

ಬ್ರಹ್ಮಪೂರ ಠಾಣೆ: ಶ್ರೀ ವಿಜಯ ಕುಮಾರ ತಂದೆ ದ್ವಾರಕದಾಸ ಸೇವಲಾನಿ ಸಾ: ಶರಣನಗರ ಗುಲಬರ್ಗಾ ರವರು ನಾನು ನನ್ನ ಮಕ್ಕಳು ಹೆಂಡತಿಯೊಂದಿಗೆ ಮನೆಯಲ್ಲಿ ಇದ್ದಾಗ ದಿನಾಂಕ 17/07/2011 ರಂದು ಸಾಯಂಕಾಲ ಸುಮಾರಿಗೆ 8 ಜನರು ಅಪರಿಚಿತರು ಕೈಯಲ್ಲಿ ಲಾಂಗು. ಮಚ್ಚು ಹಿಡಿದುಕೊಂಡು ಬಂದು ನಮ್ಮ ಮನೆಯಲ್ಲಿ ಬಂದು ಮನೆಯಲ್ಲಿರುವ ಒಡವೆ ಬಂಗಾರ ಹಣ ಎಲ್ಲವು ಕೊಡಬೇಕು ಅಂತಾ ಹೆದರಿಸುತ್ತಿದ್ದು ಆಗ ನಾನು ನೀವು ಯಾರು ಎಂದು ಕೇಳಿದಾಗ ನನಗೆ ಮಚ್ಚಿನಿಂದ ತೆಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿ ಕೊರಳಲ್ಲಿದ್ದ ಬಂಗಾರದ ಲಾಕೇಟ ಕಿತ್ತುಕೊಂಡು ಹೊಗಲು ಪ್ರಯತ್ನಿಸಿದ್ದು ಅಲ್ಲದೇ ನಮಗೆ ಮನೆಯಿಂದ ಹೊರೆಗೆ ಹೊಗದಂತೆ ಹೆದರಿಸುತ್ತಿರುವಾಗ ನಾವು ಚಿರಾಡುವದನ್ನು ನೋಡಿ ಆಜು ಬಾಜು ಜನರು ಬಂದಾಗ ಓಡಿ ಹೊಗಿರುತ್ತಾರೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ

ಬ್ರಹ್ಮಪೂರ ಠಾಣೆ: ಶ್ರೀ ಕಿರಣ ತಂದೆ ರಾಮು ಜಾದವ ಸಾ|| ಒಡ್ಡರ ಗಲ್ಲಿ ಭಗತಸಿಂಗ ಚೌಕ ಗುಲಬರ್ಗಾ ರವರು ನಾನು ದಿನಾಂಕ 17/07/2011 ರಂದು ಸಾಯಂಕಾಲ ಪೇಟ್ರೋಲ ತಗೆದುಕೊಂಡು ಮೋರೆ ಆಸ್ಪತ್ರೆ ಹತ್ತಿರ ಬರುತ್ತಿರುವಾಗ ನಮ್ಮ ಮಾವನ ಮಗ ರತನ ಇತನ ಜೋತೆಗೆ ಜಗಳ ಮಾಡುತ್ತಿದ್ದು ನಾನು ಹತ್ತಿರ ಹೊದಾಗ ಅಲ್ಲಿದ್ದ 7-8 ಜನರು ನನ್ನೊಂದಿಗೆ ಜಗಳಕ್ಕೆ ಬಿದ್ದು ನೀನು ನಮಗೆ ಹೊಡೆಯಲು ಬಂದಿರುವಿ ಅಂತಾ ಅವಾಚ್ಯವಾಗಿ ಬೈದು ಕೈಯಿಂದ, ಕಲ್ಲಿನಿಂದ ಹಾಗು ಬಡಿಗೆಯಿಂದ ಹೊಡೆ-ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಶಂದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: