ಮಾರಣಾಂತಿಕ ಹಲ್ಲೆ
ದೇವಲ ಗಾಣಗಾಪೂರ ಠಾಣೆ : ಸಿದ್ದಣ್ಣ ತಂದೆ ಶಂಕರಗೌಡ ಪೊಲೀಸ ಪಾಟೀಲ ರವರು ನಾನು ದಿನಾಂಕ:19-07-2011 ರಂದು ಮದ್ಯಾಹ್ನ ಶರಣಬಸವೇಶ್ವರ ಮಂದಿರ ಹತ್ತಿರದಿಂದ ನನ್ನ ಅಕ್ಕನ ಮನೆಗೆ ಹೊರಟ್ಟಿದ್ದಾಗ, ಕಲ್ಲಪ್ಪ ಪಡಶೆಟ್ಟಿ ನನಗೆ ನಿಲ್ಲಿಸಿ ಅವಾಚ್ಯವಾಗಿ ಬೈದು ನಿಮ್ಮ ಅಕ್ಕಳ ಪರವಾಗಿ ನನಗೆ ಹೊಡೆಯಲು ಬಂದಿರುವಿ ಅಂತ ಕೈಯಿಂದ ಮತ್ತು ಮಚ್ಚನಿಂದ ಹೊಡೆದು ಭಾರಿ ರಕ್ತ ಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ:
ದೇವಲ ಗಾಣಗಾಪೂರ ಠಾಣೆ : ಮಾಹಾದೇವಿ ಗಂಡ ಶಿವಾನಂದ ಹುಮಾನಾಬಾದ ಸಾ|| ಗೊಬ್ಬುರ(ಬಿ) ರವರು ನನ್ನ ಗಂಡನಾದ ಶಿವಾನಂದ ತಂದೆ ಗುರುಲಿಂಗಪ್ಪ ಹುಮಾನಾಬಾದ ಸಾ|| ಗೊಬ್ಬುರ(ಬಿ) ರವರು ಮದ್ಯಾಹ್ನ ಸುಮಾರಿಗೆ ಗೊಬ್ಬುರ( ಬಿ) ಗ್ರಾಮದ ಧನ್ವಂತರಿ ದವಾಖಾನೆ ಎದುರುಗಡೆ ಬರುತ್ತಿರುವಾಗ ನನ್ನ ಗಂಡನಿಗೆ ಕಲ್ಲಪ್ಪ ತಂದೆ ಗುರುಲಿಂಗಪ್ಪ ಪಡಶೆಟ್ಟಿ ಸಂಗಡ ಇನ್ನೊಬ್ಬನು ಸಾ|| ಇಬ್ಬರೂ ಗೊಬ್ಬುರ(ಬಿ) ಗ್ರಾಮ ದವರು ಮಚ್ಚಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ ಶಂಬೂಲಿಂಗ ತಂದೆ ನಾಗಪ್ಪ ಗಡಸೆ ಸಾ|| ಬೋರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾ ರವರು ನಾನು ದಿನಾಂಕ|| 17/07/2011 ರಂದು ವಿಜಯಕುಮಾರ ಸೇವಲಾನಿ ಇವರು ನಮ್ಮ ಮಗ ಗೌರಿಶಂಕರ ವಿರುದ್ದ ವಿನಾಕಾರಣ ಡಕಾಯಿತಿ ಪ್ರಕರಣ ದಾಖಲಿಸಿದ್ದು ಈ ಬಗ್ಗೆ ಇಂದು ದಿನಾಂಕ|| 19/07/2011 ರಂದು 1900 ಗಂಟೆ ಸುಮಾರಿಗೆ ನಾನು ಹಾಗು ಅಶೋಕ ತಂದೆ ಹುಸನಪ್ಪ ಸೋನಾಗಾರ ಹಾಗು ಇತರರು ಕೂಡಿಕೊಂಡು ವಿಜಯಕುಮಾರ ಸೇವಲಾನಿ ಇವರ ಮನೆಗೆ ಹೊಗಿ ವಿಜಯಕುಮಾರ ಇವರಿಗೆ ನೀವು ನಮ್ಮ ಮಗನ ಮೇಲೆ ಡಕಾಯಿತಿ ಕೇಸ ಯಾಕೆ ಮಾಡಿಸಿರುವಿರಿ ಅಂತಾ ಅಂದಿದಕ್ಕೆ ನಮ್ಮಲ್ಲರಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ವಿಜಯಕುಮಾರನ ಮಗನಾದ ಆಕಾಶ ಹಾಗು ಇತರೆ 7-8 ಜನರು ಬಂದು ನಮ್ಮಲ್ಲರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆ ಅಂತಾ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ: ಶ್ರೀ ಸಂಗಯ್ಯ ತಂದೆ ಶಿವನಂದಯ್ಯ ಹಿರೇಮಠ ವ: 20 ಉ:ಚಾಲಕ ಸಾ: ಬಸವನ ಸಂಗೋಳಗಿ ತಾ: ಆಳಂದ ಹಾ:ವ; ಆಸ್ರಯ ಕಾಲನಿ ಗುಲಬರ್ಗಾ ರವರು ನಾನು ಮೋಟಾರ ಸೈಕಲ ಮೇಲೆ ಹೋಗುತ್ತಿದ್ದಾಗ ಮುಂದೆ ಅವರ ಅಕ್ಕನ ಗಂಡ ಬಸಯ್ಯ ಹಿರೇಮಠ ಇವರು ಸಹ ಮೋಟಾರ ಸೈಕಲ ನಂ ಕೆಎ 03 ವೈ 1813 ನೇದ್ದರ ಮೇಲೆ ಹೋಗುತ್ತಿದ್ದಾಗ ಹುಮನಾಬಾದ ರಿಂಗ ರೋಡ ಹತ್ತಿರ ಇರುವ ಟಿವಿ ಸ್ಟೇಷನ್ ಎದುರು ಹೋಗುವಾಗ ಅಜಾಗರೂಕತೆಯಿಂದ ನಡೆಸುತ್ತಿದ್ದಾಗ ಸ್ಕೀಡ ಆಗಿ ಬಿದ್ದಿರಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗ ಸೊಸೆಯಿಂದ ತಂದೆ ತಾಯಿಯ ಮೇಲೆ ಹಲ್ಲೆ :
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಮಾಧುರಾಯ ತಂದೆ ಪೀರಪ್ಪ ಹಂಗರಗಿ ಸಾ|| ಪಟ್ಟಣ ತಾ:ಜಿ: ಗುಲಬರ್ಗಾ ರವರು ನಮಗೆ ಸಂಬಂಧ ಪಟ್ಟ ಪಟ್ಟಣ ಸೀಮೆಯಲ್ಲಿ ಬರುವ ಹೊಲ ಸರ್ವೆ ನಂ. 145 ರಲ್ಲಿ ಒಟ್ಟು 31 ಎಕರೆ 9 ಗುಂಟೆ ಹೊಲ ಇದ್ದು ಸದರಿ ಈ ಹೊಲದಲ್ಲಿ 3 ಜನ ಮಕ್ಕಳಿಗೆ ತಲಾ 9 ಎಕರೆಯಂತೆ ಹಂಚಿಕೆ ಮಾಡಿದ್ದು ಇರುತ್ತದೆ. ಉಳಿದ 4 ಎಕರೆ 9 ಗುಂಟೆ ತಮ್ಮ ಉಪಜೀವನಕ್ಕೆ ಇಟ್ಟುಕೊಂಡಿರುತ್ತೆವೆ. ಇಂದು ದಿನಾಂಕ 19/7/11 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ತಮ್ಮ ಹಿರಿಯ ಮಗನಾದ ಮಲ್ಲಿಕಾರ್ಜುನ ಮತ್ತು ಹಿರಿಯ ಸೊಸೆ ಭಾಗ್ಯವಂತಿ ಇವರಿಬ್ಬರು ನಮ್ಮ ಹೆಸರಿನಲ್ಲಿದ್ದ ಹೊಲದಲ್ಲಿ ನೇಗಿಲು ಹೊಡೆಯಲು ಬಂದಾಗ ನಮ್ಮ ಪಾಲಿನ ಹೊಲ ನಾವು ಸಾಯುವವರೆಗೆ ಕೊಡುವುದಿಲ್ಲ ಅಂತಾ ಅಂದಿದ್ದಕ್ಕೆ ಮಗ ಮತ್ತು ಸೊಸೆ ನನಗೆ ಮತ್ತು ನನ್ನ ಹೆಂಡತಿಗೆ ಅವ್ಯಾಚ್ಛವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಚಿತ್ತಾಪುರ ಠಾಣೆ:
ಶ್ರೀ ಮಹಾದೇವಪ್ಪ ತಂದೆ ಮರುಗಪ್ಪ ಕಲ್ಲಕ ಸಾ||ಬಾಹರಪೇಠ ಚಿತ್ತಾಪೂರ ರವರು ನಾನು ದಿನಾಂಕ 19/7/2011 ರಂದು ಕಸಬಾ ಚಿತ್ತಾಪೂರ ಸೀಮೆಯಲ್ಲಿ ಇರುವ ಹೊಲ ಸರ್ವೇ ನಂ 404 ವಿಸ್ತೀರ್ಣ 9 ಎಕರೆ 12 ಗುಂಟೆಯ ಹೊಲದಲ್ಲಿ ನಾಗಪ್ಪ ತಂದೆ ಸುಭಾಷ ಕಲ್ಲಕ, ಹಣಮಂತ ತಂದೆ ಸುಭಾಷ ಕಲ್ಲಕ, ಆನಂದ ತಂದೆ ಸಾಯಬಣ್ಣ ಕಲ್ಲಕ, ರವಿ ತಂದೆ ಸಾಯಬಣ್ಣ ಕಲ್ಲಕ, ಭಜಂತ್ರಿ. ಸಾ|| ಎಲ್ಲರೂ ಚಿತ್ತಾಫೂರ ರವರು ಉದ್ದೇಶ ಪೂರ್ವಕವಾಗಿ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಹೊಲ ಹರಗುತ್ತಿರುವಾಗ ನಾನು ಹೋಗಿ ಏಕೆ ನನ್ನ ಹೊಲ ಹರಗುತ್ತಿರುವಿರಿ ಅಂತಾ ಕೇಳಿದ್ದಕ್ಕೆ ಎಲ್ಲರೂ ಕೂಡಿಕೊಂಡು ತಕರಾರು ತಗೆದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಪ್ರಕರಣ :
ಸ್ಟೇಷನ ಬಜಾರ ಠಾಣೆ: ಶ್ರೀ. ನಿಂಗಪ್ಪ ತಂದೆ ಶರಣಪ್ಪಾ ಸಾ|| ಮನೆ ನಂ 4122/1 13 ನೇ ಕ್ರಾಸ ತಾರಫೈಲ್ ಗುಲಬರ್ಗಾ ರವರು ನನ್ನ ಶ್ರೀ.ಶರಣಪ್ರೀಯಾ ಸ್ಯಾನಿಟರಿ ಶಾಪ್ ಹಳೇ ಜೇವರ್ಗಿ ರಸ್ತೆ ಅಂಡಗಿಯಲ್ಲಿರುವ ಸ್ಯಾನಟರಿ ಸಾಮಾಗ್ರಿಗಳನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಚಿಂಚೋಳಿ ಠಾಣೆ : ವಿಜಯಕುಮಾರ ತಂದೆ ಉಮೇಶ ಜಾದವ ಸಾಃ ಚಂದನಕೇರಾ ರವರು ನಾನು ದಿನಾಂಕ 17.07.2011 ರಂದು ಬೆಳಿಗ್ಗೆ ಸುಮಾರಿಗೆ ನಾನು ನನ್ನ ಹೆಂಡತಿಯ ಅಕ್ಕಳಾದ ಬೀಮಬಾಯಿ ಗಂಡ ಅಶೋಕ ಇವಳನ್ನು ಕರೆಯಲು ಪಾಲತ್ಯಾನ ತಾಂಡಕ್ಕೆ ಹೋಗಿ ಪಾಲತ್ಯಾನ ತಾಂಡಾದಿಂದ ಚಿಮ್ಮನಚೋಡ ಮುಖಾಂತರ ಚಂದನಕೇರಾಕ್ಕೆ ಜೀಪ ನಂ ಕೆ.ಎ 39 ಎಮ 41 ನೇದ್ದರಲ್ಲಿ ಕುಳಿತು ಹೋರಟಿದ್ದೇವು. ಜೀಪ ಚಾಲಕನು ತನ್ನ ಜೀಪನ್ನು ಅತೀ ವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಹತ್ತಿದಾಗ ನಾನು ಆತನಿಗೆ ಸಾವಕಾಶವಾಗಿ ಚಲಾಯಿಸಲು ಹೇಳಿದೆನು. ಪಾಲತ್ಯಾನ ತಾಂಡಾ ಹಾಗೂ ಸೇರಿ ಕ್ರಾಸ ಮದ್ಯದಲ್ಲಿ ಫೂಲಿನ ಹತ್ತಿರ ಬಂದಾಗ ಅತೀ ವೇಗದಲ್ಲಿದ್ದ ಜೀಪನ್ನು ಒಮ್ಮಲೇ ಬ್ರೇಕ್ ಹಾಕಿದ್ದಾಗ ಕೊನೆಯಲ್ಲಿ ಕುಳಿತ ನಾನು ಕೆಳಗೆ ಬಿದ್ದೆನೆ . ನನಗೆ ರಕ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment