ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಚನ್ನಬಸಪ್ಪ ತಂದೆ ಸೂಗಣ್ಣ ಹುಂಡೇಕರ್ ಸಾ|| ಜಯನಗರ ಗುಲಬರ್ಗಾ ರವರುನಾನು ಮತ್ತು ಸಂತೋಷ ಇಬ್ಬರು ಖಣದಾಳ ಸರಕಾರಿ ಶಾಲೆಯಲ್ಲಿ ನೌಕರಿ ಮುಗಿಸಿಕೊಂಡು ವಾಪಸ್ ಮನೆಗೆ ಮೋಟಾರ ಸೈಕಲ್ ನಂ: ಕೆಎ 32 ವಿ 3580 ನೇದ್ದರ ಮೇಲೆ ಜೇವರ್ಗಿ ಕಾಲೋನಿ ಮುಖಾಂತರ ರಾಷ್ಟ್ರಪತಿ .ಸರ್ಕಲ್ ಕಡೆಗೆ ಬರುತ್ತಿದ್ದಾಗ ಆರ್ಕಿಡ್ಸ ಪೌಂಡೇಶನ ಸ್ಕೂಲ್ ಎದುರು ಎಡಗಡೆಯಿಂದ ಮೋಟಾರ ಸೈಕಲ್ ನಂ; ಕೆಎ 33 ಈ 6253 ನೆದ್ದರ ಚಾಲಕ ಅರುಣಕುಮಾರ ತಂದೆ ಶಿವಲಿಂಗಪ್ಪಾ ಸಿರನೂರ ಈತನು ತನ್ನ ಮೋಟಾರ ಸೈಕಲ್ ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಡಿಕ್ಕಿ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ರೋಜಾ ಠಾಣೆ: ಶ್ರೀ ಮಹಿಬೂಬ ತಂದೆ ಕಾಸಿಮ ಅಲಿ ಸಾ:ಮಿಜಗುರಿ ಬಕರಿಕಮೇಲಾ ಹತ್ತಿರ ಗುಲಬರ್ಗಾ ನಾನು ದಿನಾಂಕ;14/07/2011 ರಂದು ಮಧ್ಯಾನ ಬಜಾರಕ್ಕೆ ಹೋಗುತ್ತಿರುವಾಗ ನನ್ನ ತಮ್ಮ ಜಾವೀದ ತಂದೆ ಕಾಸಿಮ ಅಲಿ ಇತನು ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತಿದ್ದನು ಬಜಾರಕ್ಕೆ ಹೋಗಿ ಮನೆಗೆ ಬಂದು ನೋಡಲು ತಮ್ಮ ಜಾವೀದ ಈತನು ಮನೆಯಲ್ಲಿ ಇರಲಿಲ್ಲಾ, ಹತ್ತಿರದ ಮಜ್ಜೀದಗಳಲ್ಲಿ, ದರ್ಗಾಗಳಲ್ಲಿ ಮತ್ತು ಸಂಬಂದಿಕರಲ್ಲಿ ಹುಡುಕಾಡಿದರೂ ಇಲ್ಲಿಯವರೆಗೆ ಸಿಕ್ಕಿರುವದಿಲ್ಲಾ ಕಾಣಿಯಾಗಿರುತ್ತಾನೆ. ಅವನಿಗೆ ಫಿಟ್ಸ್ ಬೇನೆ ಇದ್ದು ಆಗಾಗ ಸಿಟ್ಟಿಗೆ ಬರುವದು ಚೀರಾಡುವದು ಮಾಡುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment