ಅಪಘಾತ ಪ್ರಕರಣ :
ಫರಹತಾಬಾದ ಠಾಣೆ : ಶ್ರೀ ಮಹ್ಮದ ಶಬ್ಬೀರ ತಂದೆ ಮಹ್ಮದ ದಸ್ತಗಿರ ಸಾ: ಎಮ್.ಎಸ್.ಕೆ.ಮಿಲ್ ಖಾದ್ರಿ ಚೌಕ ಜಿಲಾನಾಬಾದ ಗುಲಬರ್ಗಾ ರವರು ನಾನು ನನ್ನ ಗೆಳೆಯನೊಂದಿಗೆ ನಂದಿಕೂರ ತಾಂಡಾದ ಹತ್ತಿರ ಗುಟಾಕಾ ತಗೆದಕೊಂಡು ಬರಲು ರೋಡ ದಾಟುತ್ತಿರುವಾಗ ಅಟೋ ನಂ: ಕೆಎ 32 ಎ 9750 ನೇದ್ದರ ಚಾಲಕನು ತನ್ನ ಅಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಆಳಂದ ಠಾಣೆ : ಶ್ರೀ, ಆರೀಫ ತಂದೆ ಇಸ್ಮಯಿಲಸಾಬ ಬಾಗವಾನ ಸಾ|| ಖಾನಬೌಡಿಗಲ್ಲಿ ಆಳಂದ ರವರು ನಾನು ಆಟೋ ನಂ. ಕೆಎ 32 ಎ 4181 ನೆದ್ದರಲ್ಲಿ ಮಾವಿನ ಹಣ್ಣು ತುಂಬುತ್ತಿರುವಾಗ ಇಸಾಮ ಅನ್ಸಾರಿ ಸಾ|| ಆಳಂದ ರವರು ತನ್ನ ಜೀಪನ್ನು ತಂದು ಆಟೋಕ್ಕೆ ಡಿಕ್ಕಿ ಪಡಿಸಿ ಆತನೆ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಕಿವಿಗೆ ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ:
ಕಮಲಾಪೂರ ಠಾಣೆ : ಶ್ರೀ ಷಣ್ಮುಖಪ್ಪಾ ತಂದೆ ಚೆನ್ನಪ್ಪಾ ಜೋಜನ ಸಾಃ ಬಾಚೆಪಳ್ಳಿ ತಾಃ ಔರಾದ ಜಿಃ ಬೀದರ ರವರು ನಾನು ನನ್ನ ಅಣ್ಣನ ಮಗನಾದ ಶಾಲಿವಾನ, ಆತನ ಹೆಂಡತಿ ಭಾಗ್ಯವತಿ ಆತನ ಮಗಳು ಅಂಬಿಕಾ, ಕೇತಕಿ ಸಂಗಮೇಶ ಮಲ್ಲಿಕಾರ್ಜುನ ಶಿವಪೂಜೆ ಎಲ್ಲರೂ ಕೂಡಿಕೊಂಡು ಟಾಟಾ ಇಂಡಿಕಾ ಕಾರ ನಂ. ಕೆಎ: 38-5207 ನೇದ್ದರಲ್ಲಿ ಕುಳಿತುಕೊಂಡು ಘಾಣಗಾಪೂರಕ್ಕೆ ಹೋಗಿ ಮರಳಿ ಬೀದರಕ್ಕೆ ಹೊರಟಿದ್ದು ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂ. 218 ನೇದ್ದರ ರೋಡಿನ ಮರಗುತ್ತಿ ಕ್ರಾಸ ಹತ್ತಿರ ಎದುರುಗಡೆಯಿಂದ ಕ್ರೋಜರ ಜೀಪ ನಂ. ಕೆಎ:39-7061 ನೇದ್ದರ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಅಡ್ಡಾತಿಡ್ಡಿಯಾಗಿ ಚಲಾಯಿಸುತ್ತಾ ಎಡದಿಂದ ಬಲಕ್ಕೆ ಬಂದು ನಮ್ಮ ಕಾರಿನ ಎದುರುಗಡೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗೆ ಭಾರಿ ಗುಪ್ತಗಾಯವಾಗಿರುತ್ತದೆ, ನನ್ನ ಭಾವನಾದ ಶಾಲಿವಾನ ಮತ್ತು ಅಕ್ಕ ಭಾಗ್ಯವತಿ ಇವರು ತಲೆಗೆ, ಮುಖಕ್ಕೆ ಭಾರಿ ರಕ್ತಗಾಯ, ಮತ್ತು ಎದೆಗೆ ಒಳಪೆಟ್ಟಾಗಿ ಭಾರಿ ಗುಪ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಂಬಿಕಾ, ಕೇತಕಿ, ಸಂಗಮೇಶ ಎಲ್ಲರೂ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಗುಲಬರ್ಗಾಕ್ಕೆ ಬರುತ್ತಿರುವಾಗ ಅಂಬಿಕಾ ಇವಳಿಗೆ ಆದ ಭಾರಿ ಗಾಯದಿಂದ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment