ಹಲ್ಲೆ ಪ್ರಕರಣ:
ಮಳಖೇಡ ಠಾಣೆ: ಸಂಗಮ್ಮ ಗಂಡ ತುಕಾರಾಮ ಕಲಗುರ್ತಿ ಸಾ|| ಮಳಖೇಡ ರವರು ನಾನು ರಜನಿಕಾಂತ, ಶಶಿಕಲಾ, ಮಾಣಿಕಮ್ಮ ಇವರೊಂದಿಗೆ ಶಿವಭದ್ರಮ್ಮ ರವರ ಮನೆಯ ಹತ್ತಿರ ನಿಂತಾಗ ಗೌತಮ ಮತ್ತು ಭಗವಾನ, ಗೈಬಣ್ಣ ಕಾಳಿಂಗ ಸುಭಾಸ, ದೇವಿಂದ್ರಪ್ಪ, ಪಾರಮ್ಮ ಸಾ|| ಎಲ್ಲರೂ ಮಳಖೇಡ ರವರು ಕುಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ವಿನಾಕಾರಣ ಕಲ್ಲುಗಳಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಗಾಯಗೊಳಿಸಿ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ:
ಮಳಖೇಡ ಠಾಣೆ: ಶ್ರೀದೇವಿ ಗಂಡ ದೇವಿಂದ್ರಪ್ಪ ನಿಂಗಮಾರಿ ಸಾ|| ಮಳಖೇಡ ತಾ|| ಸೇಡಂ ರವರು ನನ್ನ ಗಂಡನೊಂದಿಗೆ ನನ್ನ ಮನೆಯ ಮುಂದೆ ನಿಂತಾಗ ಶ್ರೀಕಾಂತ ಮತ್ತು ಮಹಾಂತೇಶ, ಮಾರುತಿ, ದೇವಿಂದ್ರ, ಚಂದ್ರಪ್ಪ, ಶಿವರಾಯ, ರಾಮು, ಶಿವಭದ್ರಮ್ಮ, ಸರಡಗಿ ರವರು ಸಾ|| ಎಲ್ಲರೂ ಮಳಖೇಡ ರವರು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆ ಹಿಡಿದುಕೊಂಡು ವಿನಾಕಾರಣ ಆವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ನನಗೆ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಬಸವರಾಜ ತಂದೆ ಶರಣಪ್ಪ ನಿಂಬರಗಿ ಸಾ|| ಗೌರ (ಬಿ) ಹಾ|| ವ|| ಅಫಜಲಪೂರ ರವರು ನನಗೆ ಶರಣು ದೆಗಿನಾಳ ಈತನು ವಿನಾಯಕ ಹೋಟಲಕ್ಕೆ ಊಟ ಮಾಡಲು ಕರೆದಿದ್ದರಿಂದ ನಾನು ವಿನಾಯಕ ಹೋಟಲಕ್ಕೆ ಬರುತ್ತಿದ್ದಾಗ ಎದುರಿನಿಂದ ಶರಣು ತನ್ನ ಕಾರನ್ನು ನಡೆಸಿಕೊಂಡು ಬಂದಿದ್ದು ಅದರಲ್ಲಿ ಕೂಡಿಸಿಕೊಂಡು ಮಣೂರ ಗ್ರಾಮದ ಮುಖಾಂತರ ಅಗರಖೇಡ ರೋಡಿಗೆ ಹೋಗಿ ಆಚೆ ಕಡೆ ಭೀಮಾ ಬ್ರಿಡ್ಜ ಗೆ ಕಾರ ನಿಲ್ಲಿಸಿ ತನಗೆ 2 ಲಕ್ಷ ರೂ ಕೊಡು ಇಲ್ಲದಿದ್ದರೆ ಭೀಮಾ ನದಿಯಲ್ಲಿ ಹಾಕುತ್ತೇವೆ ಎಂದು ಹೆದರಿಕೆ ಹಾಕಿದ್ದರಿಂದ ನಾನು ಹೆದರಿಕೊಂಡು ನನ್ನ ಹತ್ತಿರ ಹಣವಿಲ್ಲ. ಬ್ಯಾಂಕಿನಲ್ಲಿ 1 ಲಕ್ಷ ರೂ. ಇರುತ್ತವೆ. ಎ ಟಿ ಎಂ ಇದೆ ತೆಗೆದುಕೊಳ್ಳಿರಿ ಎಂದು ಅವರಿಗೆ ಹೆದರಿಕೊಂಡು ನನ್ನ ಹತ್ತಿರವಿದ್ದ ಎ.ಟಿ.ಎಂ. ಶರಣು ದೆಗಿನಾಳ ಈತನಿಗೆ ಕೊಟ್ಟಿರುತ್ತೇನೆ. ಅಲ್ಲಿಂದ ಕಾರಿನಲ್ಲಿ ಇಂಡಿ. ಸಿಂದಗಿ, ಗ್ರಾಮಕ್ಕೆ ಹೋಗಿ ಅಲ್ಲಿಂದ ದೇವರ ಹಿಪ್ಪರಗಿ ರೋಡಿಗೆ ಹೊರಟು ಸಿಂದಗಿಯಿಂದ 2 ಕಿ.ಮೀ. ಅಂತರ ಕಾರ ಕೆಟ್ಟು ನಿಂತಿತು. ಶರಣು ಮತ್ತು ಆತನ ಜೊತೆಗೆ ಇನ್ನು ಒಬ್ಬನು ಸಿಂದಗಿಗೆ ಕರೆದುಕೊಂಡು ಬಂದು ದಿನಾಂಕ 27/7/2011 ರಂದು ಬೆಳಿಗ್ಗೆ ಯುನಿಯನ್ ಬ್ಯಾಂಕಿಗೆ ಹೋಗಿ ನನ್ನ ಎ.ಟಿ.ಎಂ. ದಿಂದ 20,000=00 ರೂ. ಡ್ರಾ ಮಾಡಿಕೊಂಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಶರಣು ತಂದೆ ಮಲ್ಲಪ್ಪ ತೆಕಡರ ಸಾ|| ಬಸವ ನಗರ ಗುಲಬರ್ಗಾ ರವರ ನಾನು ದಿನಾಂಕ 27/07/2011 ರಂದು ಮಧ್ಯಾಹ್ನ ನನ್ನ ಬಾಡಿಗೆ ಮನೆಯ ಹತ್ತಿರ ನಿಂತಾಗ ನಮ್ಮ ಮನೆಯ ಸಮೀಪದಲ್ಲಿಯೆ ಇರುವ ಶರಣಬಸಪ್ಪ, ಮತ್ತು ಆತನ ಹೆಂಡತಿ ರೇಣುಕಾ ಅವರ ತಾಯಿ ವಿಠಾಬಾಯಿ ಅಲ್ಲದೆ ಇತರೆ ಇನ್ನೂ ಇಬ್ಬರು ಹುಡುಗರು ಕೂಡಿಕೊಂಡು ನನ್ನ ಹತ್ತಿರ ಬಂದು ಅವಾಚ್ಯವಾಗಿ ಬೈದು ನಮ್ಮ ಹುಡುಗಿಗೆ ನೋಡಿ ಚುಡಾಯಿಸುತ್ತಿ ಮಗನೇ ಅಂತಾ ಹೊಡೆದು ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡಗಿಗೆ ಚುಡಾಯಿಸಿ ಹುಡಗಿಯ ತಂದೆ ತಾಯಿಯ ಮೇಲೆ ಹಲ್ಲೆ:
ಅಶೋಕ ನಗರ ಠಾಣೆ : ಶರಣಬಸಪ್ಪ ತಂದೆ ಬಸಣ್ಣ ಅನ್ವರ ಸಾ|| ಬಸವ ನಗರ ಗುಲಬರ್ಗಾ ರವರು ನಾನು ದಿನಾಂಕ 27/07/2011 ರಂದು ಮನೆಯಲ್ಲಿ ಇದ್ದಾಗ ಶರಣು ತಂದೆ ಮಲ್ಲಪ್ಪ ಇತನು ಬಂದವನೇ ಅವಾಚ್ಯವಾಗಿ ಬೈದು ನಿನ್ನ ಮಗಳಿಗೆ ಚುಡಾಯಿಸಿದ್ದೇನೆ. ಅಂತಾ ಬೈಯುತ್ತಿರಿ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಹೊರಗೆ ಬರಲು ಎದೆಯ ಮೇಲೆ ಮತ್ತು ಹೊಟ್ಟೆಯಲ್ಲಿ ಹೊಡೆದಿದ್ದು, ಬಿಡಿಸಲು ಬಂದ ನನ್ನ ಹೆಂಡತಿ ರೇಣುಕಾ ಇವಳಿಗೂ ಸಹ ಕೈಯಿಂದ ಹೊಡೆದಿರುತ್ತಾನೆ, ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment