ಹಲ್ಲೆ ಪ್ರಕರಣ :
ಬ್ರಹ್ನಪೂರ ಠಾಣೆ : ಶ್ರೀಮತಿ.ರಮಾದೇವಿ ಗಂಡ ದಿ:ರಾಜಕುಮಾರ ಮಾಡಗಿ, ಸಾ|| ಮಾಡಗಿ ಕಾಂಪ್ಲೇಕ್ಸ್ ಜಗತ ಗುಲಬರ್ಗಾರವರು ನಾನು ದಿನಾಂಕ: 29/07/11 ರಂದು ಸಾಯಂಕಾಲ್ ಸುಮಾರಿಗೆ ಈ ಮೊದಲು ದಾಖಲಾದ ಪ್ರಕರಣದ ವಿಚಾರಣೆ ಕುರಿತು ತಹಶೀಲ ಕಾರ್ಯಾಲಯಕ್ಕೆ ಬಂದಿದ್ದು, ವಿಚಾರಣೆ ಮುಗಿದ ನಂತರ ಹೊರಗಡೆ ಬಂದಾಗ ಯಶವಂತ ತಂದೆ ರುಕ್ಕಪ್ಪ ಗೋಳಾ, ಮಹೇಶ ಬಾಬು ಗೋಳಾ, ಅನೀಲಕುಮಾರ ಗೋಳಾ, ಮಹಾದೇವಿ ಗಂಡ ಯಶವಂತ ಗೋಳಾ ಇವರೆಲ್ಲರೂ ಸೇರಿ ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈ ಹಿಡಿದು ಎಳೆದಾಡಿ ಕೈಯಿಂದ ಹೊಡೆದು, ಜೀವದ ಬೆದರಿಕೆ ಹಾಕಿ ಅವಮಾನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾನಭಂಗ ಪ್ರಕರಣ :
ಗ್ರಾಮೀಣ ಠಾಣೆ: ಶ್ರೀ ನಾಗರಾಜ ತಂದೆ ಮಚಲ್ಯಾ ಕಾಳೇ ಸಾ|| ತಾಜಸುಲ್ತಾನಪೂರ ಗ್ರಾಮ ಸಧ್ಯ ಬೋಯಿನಪಲ್ಲಿ ಹೈದ್ರಾಬಾದ ನಾನು ನನ್ನ ಹೆಂಡತಿ ದಿನಾಂಕ 28-07-2011 ರಂದು ಮನೆಯ ಎದುರು ಕುಳಿತುಕೊಂಡು ಮಾತನಾಡುತ್ತಿರುವಾಗ ನಮ್ಮ ಜನಾಂಗದ ಹಡಗಿಲ ಗ್ರಾಮದ ಲಕ್ಷ್ಮಣ ತಂದೆ ಶಾಮರಾವ ಶಂಕರ ತಂದೆ ಲಕ್ಷ್ಮಣ, ರಾಮು ತಂದೆ ಲಗಮ್ಯಾ, ಗಂಗ್ಯಾ ತಂದೆ ಜುಗಟ್ಯಾ, ಹೀರಾಬಾಯಿ ಗಂಡ ಲಕ್ಷ್ಮಣ ಇವರೆಲ್ಲರೂ ಅವಾಚ್ಯವಾಗಿ ಬೈದು ನನ್ನ ಹೆಂಡತಿ ಅಂಜನಮ್ಮಾ ಇವಳಿಗೆ ಮಾನಭಂಗ ಮಾಡುವ ಉದ್ದೇಶದಿಂದ ಕೈ ಹಿಡಿದು ಜಗ್ಗಿ ಬ್ಲೋಜ ಹರಿದರು. ನನಗೆ ಲಕ್ಷ್ಮಣ ಈತನು ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಮೊಳಕಾಲ ಮೇಲೆ ಹೊಡೆದು ಗುಪ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .
No comments:
Post a Comment