Police Bhavan Kalaburagi

Police Bhavan Kalaburagi

Monday, July 4, 2011

GULBARGA DISTRICT REPORTED CRIMES

24 ಗಂಟೆಯಲ್ಲಿ ಕೊಲೆ ಆರೋಪಿಗಳ ಬಂದನ

ನಿನ್ನೆ ದಿನಾಂಕ: 03-07-2011 ರಂದು ರಾತ್ರಿ 8 ಗಂಟೆಯ ಸಮಯದಲ್ಲಿ ಗುಲಬರ್ಗಾ ನಗರದ ಆರ.ಟಿ.ಓ ಕ್ರಾಸ ಬಳಿ ನಡೆದ ಘಟನೆ ಇಡಿ ನಗರವನ್ನೆ ತಲ್ಲಣಗೊಳಿಸಿದ ಅತೀ ಸೂಕ್ಷ್ಮ ಕೊಲೆ ಪ್ರಕರಣವನ್ನು 24 ತಾಸುಗಳಲ್ಲಿ ಗುಲಬರ್ಗಾ ಜಿಲ್ಲೆ ಪೊಲೀಸರು ಬೇದಿಸುವಲ್ಲಿ ಯಶಸ್ವಿಯಾಗಿದ್ದು , ಖಚಿತ ಭಾತ್ಮಿ ಮೇರೆಗೆ ಈ ದಿನ ಮದ್ಯಾಹ್ನ ಈ ಪ್ರಕರಣದ ನಾಲ್ವರು ಆರೋಪಿತರನ್ನು ಕೊಲೆಗೆ ಬಳಸಿದ ಆಯುಧಗಳೊಂದಿಗೆ ದಸ್ತಗಿರಿ ಮಾಡುವಲ್ಲಿ ಸಫಲರಾಗಿರುತ್ತಾರೆ .
ದಿನಾಂಕ: 03-07-2011 ರಂದು ರಾತ್ರಿ ಗುಲಬರ್ಗಾ ನಗರದ ಎಂ.ಬಿ.ನಗರ ಠಾಣೆ ವ್ಯಾಪ್ತಿಯ ವಾತ್ಸಲ್ಯ ಆಸ್ಪತ್ರೆ ಬಳಿ ಶಿವಶರಣಪ್ಪಾ @ ಅಪ್ಪಿ ತಂದೆ ಮರೆಪ್ಪಾ ಸರಡಗಿ ಸಾ|| ಬಾಪು ನಗರ ಗುಲಬರ್ಗಾನೇದ್ದವನ ನ್ನು ದಷ್ಕರ್ಮಿಗಳು ಭಯಾನಕ ರೀತಿಯಲ್ಲಿ ಕೊಚ್ಚಿ ಕೊಲೆ ಮಾಡಿದ್ದು, ಈ ಬಗ್ಗೆ ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದ ಬಗ್ಗೆ ಮೃತನ ಸಹೋದರ ಮಲ್ಲಿಕಾರ್ಜುನ ಸರಡಗಿರವರು ದೂರು ನೀಡಿದ್ದರು, ಪೊಲೀಸ್ ಅಧೀಕ್ಷಕರ ನೇತ್ರತ್ವದಲ್ಲಿ ಪ್ರಕರಣದ ಆರೋಪಿತರನ್ನು ಪತ್ತೆ ಹಚ್ಚಲು ವಿವಿಧ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿತ್ತು . ಕೊಲೆ ಪ್ರಕರಣದ ಜಾಡು ಹಿಡಿದ ತನಿಖಾಧಿಕಾರಿಗಳು ಖಚಿತ ಮಾಹಿತಿಯ ಆಧಾರದ ಮೇಲೆ ಇಂದು ಮಧ್ಯಾಹ್ನ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಬೀದರ ಜಿಲ್ಲೆಯ ಹುಮನಬಾದಲ್ಲಿ ದಸ್ತಗಿರಿ ಮಾಡಿ ತನಿಖೆಗೆ ಒಳಪಡಿಸಿದ್ದು, ಆರೋಪಿತರು ತನಿಖೆಯ ಕಾಲಕ್ಕೆ ಮೃತ್ತ ಶಿವಶರಣಪ್ಪಾ @ ಅಪ್ಪಿ ತಂದೆ ಮರೆಪ್ಪಾ ಸರಡಗಿರವರೊಂದಿಗೆ ಇದ್ದ ಹಳೆಯ ವೈಷ್ಯಮದ ಹಿನ್ನೆಲೆಯಲ್ಲಿ ಅನೇಕ ಭಾರಿ ಮರೆಪ್ಪಾ ಇತನೊಂದಿಗೆ ಹೊಡೆದಾಟ ಬಡಿದಾಟ ಮಾಡಿಕೊಂಡಿದ್ದು . ಈ ಬಗ್ಗೆ ನಗರದ ಬ್ರಹ್ಮಪೂರ , ಎಂ.ಬಿ ನಗರ ಮತ್ತು ವಿಶ್ವವಿದ್ಯಾಲಯ ಠಾಣೆಯಲ್ಲಿ ಆರೋಪಿತರು ಮತ್ತು ಮೃತನ ವಿರುದ್ದ ಪರಸ್ಪರ ಪ್ರಕರಣಗಳು ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿವೆ, ನಿನ್ನೆ ಪ್ರಕರಣದ ಅಪಾದಿತರು ಈ ಬಗ್ಗೆ ರಾಜಿ ಸಂದಾನ ಮಾಡಿಕೊಳ್ಳಲು ಹೋದ ಕಾಲಕ್ಕೆ ಪರಸ್ಪರರಲ್ಲಿ ಮಾತಿನ ಚಕಮಕಿ ನಡೆದು ಜಗಳಕ್ಕೆ ತಿರುಗಿ ಸಂತೋಷ @ ಸಂತು ತಂದೆ ಮೈಲಾರಿ ಶೇಳ್ಳಗಿ ಸಾ|| ವಿರೇಂದ್ರ ಪಾಟೀಲ್ ಕಾಲೋನಿ ಗುಲಬರ್ಗಾ , ಅನೀಲ ತಂದೆ ರವಿ ಮುಟಬಿ ಸಾ|| ಸಂಜಿವ ನಗರ , ಶ್ರೀನಿವಾಸ @ ಬುಡ್ಡ ಸೀನಾ ತಂದೆ ಶರಣಪ್ಪಾ ಕಮಲಾಪೂರ ಸಾ|| ಆದರ್ಶ ನಗರ, ಗುರುರಾಜ ತಂದೆ ದೇವಿಂದ್ರಪ್ಪಾ ದಮ್ಮೂರ ಕೆ.ಎಚ.ಬಿ ಕಾಲೋನಿ ಗುಲಬರ್ಗಾ ರವರು ಶಿವಶರಣಪ್ಪಾ @ ಅಪ್ಪಿ ಇತನ ಮೇಲೆ ನಗರದ ಲಲಿತ ಗಾರ್ಡನ್ ಬಾರ್ ಮತ್ತು ರೆಸ್ಟಾರೆಂಟ್ ಹತ್ತಿರ ಬಂದಾಗ ತಲೆ ಮುಖ ಹೊಟ್ಟೆ ಮುಂತಾದ ಕಡೆಗೆ ಹರಿತವಾದ ಆಯುಧಗಳಿಂದ ಹೊಡೆದು ಬೀಕರವಾಗಿ ಕೊಲೆಗೈದು ಪರಾರಿಯಾಗಿದ್ದರು. ಆರೋಪಿತರನ್ನು ಬಂದಿಸಿ ಅವರು ಬಳಸಿದ 4 ಹರಿತವಾದ ಆಯುಧಗಳು, ಒಂದು ಮೊಬೈಲ್ ಹಾಗು ರಕ್ತ ಹತ್ತಿದ ಬಟ್ಟೆಗಳನ್ನು ವಶಪಡಿಸಿಕೊಂಡಿರುತ್ತಾರೆ . ಸದರಿ ವಿಶೇಷ ತನಿಖಾ ತಂಡವು ಶ್ರೀ ಪ್ರವೀಣ ಪವಾರ್ ಪೊಲೀಸ್ ಅಧೀಕ್ಷಕರು ಗುಲಬರ್ಗಾ ಮತ್ತು ಶ್ರೀ ರವಿ ಚನ್ನಣನವರ್ (ಪ್ರೋ) ಎಸ,ಪಿ ಹಾಗು ತಿಮಪ್ಪಾ ಡಿ.ಎಸ.ಪಿ ಗ್ರಾಮಂತರ ವಿಭಾಗ ರವರ ಮಾಗದರ್ಶನದಲ್ಲಿ ಶ್ರೀ ಬಿ.ಪಿ ಚಂದ್ರಶೇಖರ ಸಿಪಿಐ ಎಂ.ಬಿ.ನಗರ ವೃತ್ತ , ಪಿ.ಎಸ.ಐ ರವರಾದ ಪಂಡಿತ ಸಾಗರ, ಶಾಂತಿನಾಥ , ರಾಜಶೇಖರ ಹಳಿಗೋದಿ, ಆನಂದರಾವ, ಸಂಜೀವಕುಮಾರ, ಮಾಣಿಕಸಿಂಗ್ ಹಾಗೂ ಸಿಬ್ಬಂದಿಗಳಾದ ಗುರುಶರಣ, ಸಿದ್ರಮಪ್ಪಾ , ರವಿ, ಇಮ್ತಿಯಾಜ್ , ವೇದರತ್ನ, ಅರ್ಜುನ, ಬಾಷಾ ಶ್ರೀನಿವಾಸ ರೆಡ್ಡಿ ರವರೆಲ್ಲರೂ ದಾಳಿ ಮಾಡಿ ಅತ್ಯಂತ ಸೂಕ್ಷ ಕೊಲೆ ಪ್ರಕರಣವನ್ನು ಘಟನೆ ನಡೆದ 24 ಗಂಟೆಯೊಳಗಾಗಿ ಬೇದಿಸಿ ಆರೋಪಿತರನ್ನು ಪತ್ತೆ ಹಚ್ಚಿರುತ್ತಾರೆ .

ಮೋಸ ಪ್ರಕರಣ :
ಶಹಾಬಾದ ನಗರ ಠಾಣೆ
:ಶ್ರೀ ಅಬ್ದುಲ ಖಾದೀರ ತಂದೆ ಹಾಜಿ ಅಬ್ದುಲ ರೌಪ ರವರು ನನ್ನ ತಂದೆಗೆ ಖಾಜಾ ಮೈನೊದ್ದಿನ ತಂದೆ ಅಕ್ದಬರ ಸಾಹೇಬ ಇತನು ಬಿಜನೇಸ್ ವೀಸಾ ಕೊಡಿಸುತ್ತೇನೆ ಅಂತಾ ರೂ, 24,51000/- ಗಳನ್ನು ಪ್ರಾಮೀಜರಿ ನೋಟ ಬರೆಸಿಕೊಂಡು ಹಣ ಪಡೆದುಕೊಂಡಿರುತ್ತಾರೆ, ವಿಸಾ ಮಾಡಿ ಕೊಡದೇ ಇದ್ದ ಕಾರಣ ನಾವು ಕೇಳಲು ಹೋದರೆ ಖಾಜಾ ಮೈನೊದ್ದಿನ ಮತ್ತು ಹೆಂಡತಿ ಮಕ್ಕಳು ಕೂಡಿಕೊಂಡು ಹೊಡೆಯಲು ಬಂದು ಜೀವ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಚಿತ್ತಾಪೂರ ಠಾಣೆ : ಶ್ತೀ ಶಾಂತಲಿಂಗಯ್ಯ ತಂದೆ ಸಿದ್ರಾಮಯ್ಯ ಮಠಪತಿ ಸಾ|| ಕುಂಬಾರ ಗಲ್ಲಿ ಬ್ರಹ್ಮಪೂರ ಠಾಣೆ ರೇವನ ಬ್ಯಾಂಕ್ ಸೆಕ್ಯೂಟರಿ ಆಪ್ ಇಂಡಿಯಾ ಲಿಮಿಟೆಡ್ ಬೆಂಗಳೂರು, ಗುಲಬರ್ಗಾ ಜಿಲ್ಲೆಯಲ್ಲಿ ಸೆಕ್ಯೂರಿಟಿ ಸುಪರ ವೈಜರ್ ಅಂತಾ ಕೆಲಸ ಮಾಡುತ್ತಿದ್ದು, ನಮ್ಮ ಕಂಪನಿಯಲ್ಲಿ ಅಂಬಾದಾಸ ಸಾ|| ನಾಡೆಪಲ್ಲಿ ಇವರು ತಾಂತ್ರಿಕ ನಿರ್ವಾಹಕ ಅಂತಾ ಕೆಲಸ ಮಾಡುತ್ತಿದ್ದು, ದಿನಾಂಕ: 26-06-2011 ರಂದು ಮದ್ಯಾಹ್ನ ಚಿತ್ತಾಪೂರ ಟವರಕ್ಕೆ ಬೇಟಿ ಕೊಟ್ಟು ಪರಿಶೀಲಿಸಲಾಗಿ ಟವರಿನಲ್ಲಿದ್ದ 26 ಬ್ಯಾಟರಿಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನನಗೆ ತಿಳಿಸಿದೆ ಮೇರೆಗೆ ನಾನು ಹೋಗಿ ನೋಡಲು 26 ಬ್ಯಾಟರಿಗಳು ಅಂದಾಜು ಕಿಮತ್ತು 24,000-00 ಗಳ ಮೌಲ್ಯದ ಯಾರೋ ಕಳ್ಳರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಮುಧೋಳ ಠಾಣೆ :ಶ್ರೀಮತಿ ತಿಪ್ಪಮ್ಮಾ ಗಂಡ ಬಾಲ ರೆಡ್ಡಿ ಸಾ|| ಖಂಡೆರಾಯನಪಲ್ಲಿ ತಾ|| ಸೇಡಂ ರವರು ನನ್ನ ಮಗನಾದ ರವಿ @ ರಾಘವೇಂದ್ರ ಇತುನು ಮೊಟಾರ ಸೈಕಲ್ ನಂ: ಎಪಿ-28 ಎಸಿ-1530 ನೇದ್ದರ ಮೇಲೆ ಖಂಡೆರಾಯನ ಪಲ್ಲಿಯಿಂದ ಆಂದ್ರ ಪ್ರದೇಶ ಚಂದ್ರವಂಶ ಗ್ರಾಮಕ್ಕೆ ಹೊರಟಾಗ ರಿಬ್ಬನ ಪಲ್ಲಿ ಗೇಟ ಸಮೀಪ ಟಾಟಾ ಸುಮೋ ನಂ: ಕೆಎ 32 ಎಮ್ 4156 ನೇದ್ದರ ಚಾಲಕನ್ನು ತನ್ನ ವಾಹನವನ್ನು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲ್ ಗೆ ಡಿಕ್ಕಿ ಪಡಿಸಿದ್ದರಿಂದ ರವಿ ಇತನು ಸ್ಥಳದಲ್ಲಿ ಮೃತ್ತ ಪಟ್ಟಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: