Police Bhavan Kalaburagi

Police Bhavan Kalaburagi

Tuesday, July 5, 2011

GULBARGA DISTRICT REPORTED CRIMES

ಮಹಿಳೆ ಕಾಣೆಯಾದ ಪ್ರಕರಣ:

ಮಹಿಳಾ ಠಾಣೆ : ಶ್ರೀಮತಿ ಅಂಬಿಕಾ ಗಂಡ ತಾನಾಜಿ ಸಾ| ತಿಪ್ಪರಾಂತ ತಾ|| ಬಸವ ಕಲ್ಯಾಣ ಬೀದರ ರವರು ನನ್ನ ಮಗಳಾದ ರಾಜಶ್ರೀ ಇವಳಿಗೆ ಶಿವಾನಂದ ತಂದೆ ದತ್ತಾ ಆಶ್ರಯ ಕಾಲೋನಿ ಗುಲಬರ್ಗಾ ಎಂಬುವನೊಂದಿಗೆ 10 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಅವಳಿಗೆ 4 ಜನ ಮಕ್ಕಳಿರುತ್ತಾರೆ. ಅಳಿಯ ಇತನು ಕಂಠ ಪೂರ್ತಿ ಕುಡಿದು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟಿದ್ದರಿಂದ ನನ್ನ ಮಗಳು 2-3 ದಿವಸಗಳಿಂದ ಕಾಣೆಯಾಗಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಚೌಕ ಠಾಣೆ : ಶ್ರೀ ಶರಣಬಸಪ್ಪ ತಂದೆ ಬಸವರಾಜ ಬುಜುರ್ಕೆ ಸಾಃ ಗುರು ಬಸವ ನಗರ ಶೇಖ ರೋಜಾ ಗುಲಬರ್ಗಾ ರವರು ನಾನು ದಿನಾಂಕ 17/06/2011 ರಂದು ರಾತ್ರಿ 2200 ಗಂಟೆಗೆ ತನ್ನ ಅಟೊ ನಂ. ಕೆಎ-32-ಎ- 4787 ಅಃಕಿಃ 48000/-ರೂ. ನೇದ್ದು ತೆಗೆದುಕೊಂಡು ಗುರು ಬಸವ ನಗರದ ತನ್ನ ಮನೆಯ ಹತ್ತಿರ ಅಟೊ ನಿಲ್ಲಿಸಿ ದಿನಾಂಕ 18/06/2011 ರಂದು ಬೆಳಿಗ್ಗೆ ಎದ್ದು ನೋಡಲಾಗಿ ಯಾರೋ ಕಳ್ಳರು ಅಟೊವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: