Police Bhavan Kalaburagi

Police Bhavan Kalaburagi

Wednesday, July 13, 2011

GULBARGA DISTRICT REPORTED CRIMES

ಅಪಘಾತ ಪ್ರಕರಣ:

ಫರಹತಾಬಾದ ಠಾಣೆ : ಪರಶುರಾಮ ತಂದೆ ಸಾಯಬಣ್ಣ ಮಂಜೂಳಕರ ವಯ: 20 ವರ್ಷ ಸಾ:ಮನೆ ನಂ: 11 2383/4 ಲಕ್ಷ್ಮಿ ನಗರ ಹೀರಾಪೂರ ಗುಲಬರ್ಗಾ ರವರು ನಾನು ದಿನಾಂಕ: 12-7-2011 ರಂದು ಮದ್ಯಾಹ್ನ ಜೆವರ್ಗಿ ಕಡೆಯಿಂದ ನನ್ನ ಟಂ ಟಂ ನಂ: ಕೆಎ 32 ಎ 6243 ನೇದನ್ನು ಚಲಾಯಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 218 ರ ಮೂಲಕ ಫರಹತಾಬಾದದ ಕೆ.ಇ.ಬಿ ಹತ್ತಿರ ಬರುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಒಂದು ಹಾಲಿನ ಟ್ಯಾಂಕರ ನಂ: ಕೆಎ 14 ಡಿ 4515 ನೇದ್ದರ ಚಾಲಕನು ತನ್ನ ಟ್ಯಾಂಕರನ್ನು ಅತಿವೇಗದಿಂದ, ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಟಂ ಟಂ ಕ್ಕೆ ಡಿಕ್ಕಿ ಪಡಿಸಿ, ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಸಂಚಾರಿ ಠಾಣೆ : ಚಂದ್ರಕಾಂತ ತಂದೆ ಕಾಶಿನಾಥ ವ: 78 ವರ್ಷ ಸಾ: ಮಕ್ತಮಪೂರ ಗುಲಬರ್ಗಾ ರವರು ದಿನಾಂಕ:09/07/2011 ರಂದು ಸಾಯಂಕಾಲ್ ನಾನು ಸರಾಫ್ ಬಜಾರದ ಕಡೆಗೆ ನಡೆದುಕೊಂಡು ಬರುವಾಗ ಗಣೇಶ ಮಂದಿರ ಕಡೆಯಿಂದ ಯಾರೋ ಒಬ್ಬ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಹಿಂದಿನಿಂದ ಬಂದು ಬಲಗಾಲ ತೊಡೆಗೆ ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ ಒಂದು ಸಾವು :

ಗ್ರಾಮೀಣ ಠಾಣೆ : ಶ್ರೀ ಶೇಖಬುರಾನ ತಂದೆ ಅಬ್ದುಲ ಖಾದರ ಜಿಲಾನಿ ಉಃ ಲಾರಿ ಮೇಕ್ಯಾನಿಕ ಕೆಲಸ ಸಾಃ ಖಿಲ್ಲಾ ಹೆಡ ಪೋಸ್ಟರ್ ಹತ್ತಿರ ಗುಲಬರ್ಗಾ ರವರು ನಾನು ದಿನಾಂಕ 12/7/2011 ರಂದು ಮಧ್ಯಾಹ್ನ ಅಂಗಡಿಯಲ್ಲಿದ್ದಾಗ ನನಗೆ ಪರಿಚಯದ ಮಹ್ಮದ ಅತೀಕ ಊರ ರಹೇಮಾನ ತಂದೆ ಖಾಸೀಮ ಅಲಿ ಪರವಾನಾ ಸಾ|| ಬುಲಂದ ಪರವೇಜ ಕಾಲನಿ ಗುಲಬರ್ಗಾ ಮತ್ತು ಮಹ್ಮದ ಮುಕ್ಕಿರೋದ್ದಿನ ತಂದೆ ಮೈನೋದ್ದಿನ ಮಾರುಪವಾಲೆ ಸಾಃ ಜವಾಹರ ಹಿಂದ ಶಾಲೆ ಗುಲಬರ್ಗಾ ಇವರಿಬ್ಬರು ತಮ್ಮ Hero Honda Passion M/c No. KA-32-Q-0553 ಮೇಲೆ ಬಂದು ನನಗೆ ಅವರಿಬ್ಬರು ಮುಸ್ಲಿಂ ಚೌಕ ಹತ್ತಿರ ನಮ್ಮ ಕಟ್ಟಿಗೆ ತುಂಬಿದ ಲಾರಿ ಬ್ಯಾಟರಿ ರಿಪೇರಿ ಮಾಡಲು ಅಂತ ತಿಳಿಸಿದ್ದ ಮೇರೆಗೆ ಮೋಟಾರ ಸೈಕಲ್ ಮೇಲೆ ಕುಳಿತು ಕೊಂಡು ಆಳಂದ ಚಕ್ಕ ಪೋಸ್ಟ್ ದಿಂದ ಕಾಕಡೆ ಚೌಕ ರಿಂಗ ರೋಡಿನ ಸರ್ಕಲ್ ಬಂದಾಗ ಹುಮನಾಬಾದ ರಿಂಗ ರೋಡ ಕಡೆಯಿಂದ ಒಬ್ಬ ಟ್ಯ್ರಾಕ್ಟರ್ ಚಾಲಕ ಟ್ರ್ಯಾಕ್ಟರ ಚಾಲಕ ಅತೀವೇಗ ಮತ್ತು ನಿಲರ್ಕ್ಷತನದಿಂದ ನಡೆಸುತ್ತ ಬಂದವನೆ ಕಾಕಡೆ ಚೌಕ ಸರ್ಕಲ್ ದಲ್ಲಿ ವೇಗದಲ್ಲಿ ಒಮ್ಮೆಲ್ಲೆ ರೈಟ್ ಟರ್ನ ಮಾಡಿದವನೆ ನಮ್ಮ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದನು ಇದರಿಂದಾಗಿ ನಾವು ಮೋಟಾರ ಸೈಕಲ್ ಮೇಲೆ ಇದ್ದ 3 ಜನರು ರೋಡಿಗೆ ಬಿದ್ದೆವು ಟ್ರ್ಯಾಕ್ಟರ್ ಚಾಲಕ ಸ್ವಲ್ಪ ಮುಂದೆ ಹೋಗಿ ಟ್ಯ್ರಾಕ್ಟರ್ ನಿಲ್ಲಿಸಿ ಓಡಿ ಹೋದನು ಟ್ರ್ಯಾಕ್ಟರ ನಂಬರ ನೋಡಲಾಗಿ KA-32-TA-1226-1227 ಇರುತ್ತದೆ. ಇದ್ದರಿಂದಾಗಿ ಮೋಟಾರ ಸೈಕಲ ಮೇಲೆ ಇದ್ದ 3 ಜನರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಉಪಚಾರ ಕುರಿತು ಆಸ್ಪತ್ರೆಗೆ ದಾಖಲ ಮಾಡಿದಾಗ ವೈದ್ಯರು ಮಹ್ಮದ ಅತೀಕ ಇತನು ಈಗಾಗಲೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಅಫಜಲಪೂರ ಠಾಣೆ : ಶ್ರೀ ಕೈಮೊದ್ದಿನ ತಂದೆ ಖಾಸಿಂಸಾಬ ಜೇಸ್ಕಾಂ ಅಪೀಸ್ ಅಫಜಲಪೂರ ಸಬ್ ದಿವಿಜನ್ ರವರು ದಿನಾಮಕ: 09-07-2011 ರ ಮಧ್ಯರಾತ್ರಿ ನಂದರ್ಗಾ ಮತ್ತು ಗೌರ (ಬಿ) ಗ್ರಾಮದ ಮಧ್ಯದಲ್ಲಿ ಕಂಬಕ್ಕೆ ಹಾಕಿದ ಅಲುಮಿನಿಯಂ ವೈರ ಅಕಿ 40,000-00 ರೂಪಾಯಿಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ಥಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಲಾಗಿದೆ

No comments: