Police Bhavan Kalaburagi

Police Bhavan Kalaburagi

Saturday, July 16, 2011

GULBARGA DISTRICT REPORTED CRIMES

ನಕಲಿ ಗೊಬ್ಬರ ಮಾರಾಟ ಇಬ್ಬರ ಬಂದನ : .
ಫರಹತಾಬಾದ ಠಾಣೆ :
ಶ್ರೀ ಸಮದ ಪಟೇಲ ಸಹಾಯಕ ನಿದೇರ್ಶಕರು ಕೃಷಿ ಇಲಾಖೆ ಗುಲಬರ್ಗಾ ರವರು ಫರತಬಾದದಲ್ಲಿ ದಿನಾಂಕ: 16-7-2011 ರಂದು ಮುಂಜಾನೆ ಯಾವುದೇ ಅಧೀಕೃತ ಪರವಾನಿಗೆ ಇಲ್ಲದೆ "ವಿಜನ್ ನಂ:01" ಎಂಬ ಹೆಸರಿನ ಸಾಯುವವ ಗೊಬ್ಬರವನ್ನು ಸುನೀಲ ಭಾಗಶೇಟ್ಟಿ ತಂದೆ ಮಲ್ಲಿಕಾರ್ಜುನ ಭಾಗಶೇಟ್ಟಿ ಸಾ: ಹೊನ್ನಕಿರಣಗಿ, ಸಂಗಡ ಒಬ್ಬ ರವರು ಮಾರಾಟ ಮಾಡುತ್ತಿದ್ದಾಗ ನಾನು ನನ್ನ ತಂಡದೊಂದಿಗೆ ದಾಳಿ ಮಾಡಿ ಅವರ ತಾಬೆಯಿಂದ 40 ಕೆ. ಜಿ ತೂಕದ 46 ಚೀಲಗಳನ್ನು ಅಂದಾಜ ಕಿಮ್ಮತ್ತು 28750=00 ರೂ. ( 625 X 46 = 28750 ) ಮತ್ತು ಒಂದು ಡಿಲೇವರಿ ಚಾಲನ್ ನಂ: 034 ಮತ್ಗು 035 ಮತ್ತು ಒಂದು ಬಿಲ್ಲ ಬುಕ್ ನಂ: 3411 ರಿಂದ 3420 ನೇದ್ದನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಸದರಿ ಗೊಬ್ಬರವನ್ನು ಮಂಜುನಾಥ ತಂದೆ ರುದ್ರಪ್ಪಾ ಮ್ಯಾನೇಜಿಂಗ್ ಡ್ಯಾರೇಕ್ಟರ್ ವಿದ್ಯಾ ನಗರ ದಾವಣಗೇರಾ ಇವರಿಂದ ತಂದು ನಕಲಿ ಗೊಬ್ಬರವನ್ನು ಯಾವುದೇ ಲೈಸನ್ಸ್ ಇಲ್ಲದೆ ರೈತರಿಗೆ ಮಾರಾಟ ಮಾಡಿ ಮೊಸ ಮಾಡಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :
ರೋಜಾ ಠಾಣೆ :
ಶ್ರೀ ಶೇಖಬುರಾನುದ್ದಿನ ತಂದೆ ಶೇಖ ಅಹ್ಮದ ಕೊಹಿರಿ ಸಾ:ಅಮೀನಾ ಆಸ್ಪತ್ರೆಯ ಹತ್ತಿರ ಖಾಜಾ ಕಾಲೋನಿ ಗುಲಬರ್ಗಾ ರವರು ನಾವು ದಿನಾಂಕ;15,16/07/2011 ರ ಮಧ್ಯರಾತ್ರಿ ವೇಳೇಯಲ್ಲಿ ಮನೆಯ ಬಾಗಿಲ ಕೀಲಿಯನ್ನು ಮುರಿದು ಲಾಕರದಲ್ಲಿ ಇಟ್ಟ 2 ಗ್ರಾಮದ ಇಯರ ರಿಂಗ ಅ.ಕಿ 4000/- ರೂ. , ನಗದು ಹಣ 3000/-ರೂ. ಒಂದು ಲೇಡೀಜ ಕೈಗಡಿಯಾರ ಟೈಟಾನ್ ಕಂಪನಿಯದ್ದು ಅ.ಕಿ.3000/-ರೂಪಾಯಿ ಹೀಗೆ ಒಟ್ಟು 10,000/-ರೂಪಾಯಿ ಬೆಲೆ ಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿಶ್ವನಾಥ ತಂದೆ ಅಣವೀರಪ್ಪ ಟೆಂಗಳಿ ಸಾ; ಖಾದ್ರಿ ಚೌಕ ಗುಲಬರ್ಗಾ ರವರು ದಿನಾಂಕ: 15-07-2011 ರಂದು 6=45 ಪಿ.ಎಮ್.ಕ್ಕೆ ಖಾದ್ರಿ ಚೌಕ ಕಡೆಯಿಂದ ಆಳಂದ ಚೆಕ್ಕ ಪೊಸ್ಟ ಕಡೆ ರೋಡಿನ ಬಾಂಬೆ ಗ್ಯಾರೇಜ ಎದುರುಗಡೆ ರೋಡಿನ ಮೇಲೆ ಟ್ಯಾಕ್ಟರ ನಂ:ಕೆಎ 32-8339 ನೆದ್ದರ ಚಾಲಕ ಶಾಹಾಬಜಾರ ನಾಕಾ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ನಂ:ಕೆಎ 32 ಡಬ್ಲೂ 5795 ನೆದ್ದಕ್ಕೆ ಓವರ ಟೆಕ ಮಾಡಿ ಒಮ್ಮಲೆ ಎಡಕ್ಕೆ ಕಟ್ಟ ಹೊಡೆದು ಡಿಕ್ಕಿ ಪಡಿಸಿ ಹಿಂದೆ ಕುಳಿತ ನಾಗೇಶ ಇಬ್ಬರಿಗು ತನ್ನ ಟ್ಯಾಕ್ಟರ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: