Police Bhavan Kalaburagi

Police Bhavan Kalaburagi

Tuesday, July 19, 2011

GULBARGA DISTRICT REPORTED CRIMES

ಮಧ್ಯ ಮಾರಾಟ ಒಬ್ಬನ ಬಂದನ :
ನಿಂಬರ್ಗಾ ಠಾಣೆ:
ದಿನಾಂಕ;18-07-2011 ರಂದು ಮಧ್ಯಾಹ್ನ ಮಾಡಿಯಾಳ ಗ್ರಾಮದಲ್ಲಿಯ ಕನಕದಾಸ ಕಟ್ಟೆಯ ಹತತ್ಇರ ಸಾರ್ವಜನಿಕ ಸ್ಥಳದಲ್ಲಿ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ನಿಂಬರ್ಗಾ ರವರು ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ರಾಜಕುಮಾರ ತಂದೆ ಸಿದ್ರಾಮಪ್ಪಾ ಗಾಯಕವಾಡ ಸಾ|| ಮಾಡಿಯಾಳ ಇತನು ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು ಅವನನ್ನು ವಶಕ್ಕೆ ತೆಗೆದುಕೊಂಡು ನಗದು ಹಾಗು ಮಧ್ಯದ ಬಾಟಲಿಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಹರಣ ಪ್ರಕರಣ :
ಸೇಡಂ ಠಾಣೆ:
ಶ್ರೀ ಚಂದ್ರಪ್ಪ ತಂದೆ ಹನಮಪ್ಪ ಮಡಗು ಸಾ|| ಈರನಾಪಲ್ಲಿ ತಾ: ಸೇಡಂ ರವರು ನನ್ನ ಮಗಳಾದ ಕಲ್ಪನಾ ಇವಳು ಪಟ್ಟಣದ ಕೆಇಬಿ ಕಾಲೋನಿಯಲ್ಲಿ ಬಾಡಿಗೆಯಿಂದ ರೂಮ ತೆಗೆದುಕೊಂಡು ಇದ್ದಿದ್ದು ನಾನು ದಿನಾಂಕ: 12-7-11 ರಂದು ಸಾಯಾಂಕಾಲ ಮಗಳ ರೂಮಿಗೆ ಬಂದು ನೋಡಲಾಗಿ ಮಗಳು ಕಲ್ಪನಾ ರೂಮಿನಲ್ಲಿ ಇರಲಿಲ್ಲಾ ಅವಳ ಗೆಳತಿ ಅರುಣಾ ಇವಳಿಗೆ ವಿಚಾರಿಸಲಾಗಿ ನಿಮ್ಮ ಮಗಳು ಕಲ್ಪನಾ ಇಂದು ಮುಂಜಾನೆ 11-30 ಗಂಟೆಗೆ ನಿಮ್ಮ ಹತ್ತಿರ ಕೆಲಸ ಮಾಡುವ ಅನೀಲ ತಂದೆ ಸದಾನಂದ ಸಾ; ಲಿಂಗಮಪಲ್ಲಿ ಇತನು ನಿಮ್ಮ ಮಗಳಿಗೆ ಹೈದ್ರಾಬಾದಿಗೆ ಹೋಗಣೋ ಬಾ ಅಂತಾ ಬಲವಂತವಾಗಿ ಕರೆದುಕೊಂಡು ಹೋದನು ಅಂತಾ ತಿಳಿಸಿದಳು. ನಾನು ಅಂದೆ ರಾತ್ರಿ 8 ಗಂಟೆ ಸುಮಾರಿಗೆ ಅನೀಲನ ತಂದೆಯಾದ ಸದಾನಂದ ಇವರಿಗೆ ನಿಮ್ಮ ಮಗ ನನ್ನ ಮಗಳಿಗೆ ಕರೆದುಕೊಂಡು ಹೋಗಿರುತ್ತಾನೆ ನನ್ನ ಮಗಳಿಗೆ ಕೊಡಿಸು ಅಂತಾ ಕೇಳಿದಾಗ ಸದಾನಂದ ಇತನು ಅವಾಚ್ಯವಾಗಿ ಬೈದು ನಿನ್ನ ಮಗಳಿಗೆ ಕರೆದುಕೊಂಡು ಹೋಗಿ ಮದುವೆ ಮಾಡಿಕೋ ಅಂತಾ ನಾನೆ ನನ್ನ ಮಗನಿಗೆ ಖರ್ಚಿಗೆ 5 ಸಾವಿರ ರೂ ಕೊಟ್ಟು ಕಳಿಸಿರುತ್ತೆನೆ ತಿಳಿಸಿದ್ದು, ನನ್ನ ಮಗಳಿಗೆ ಅಪಹರಣ ಮಾಡಿಕೊಂಡು ಹೋಗಲು ಅನೀಲ ಇತನಿಗೆ ಅವನ ತಂದೆ ಸದಾನಂದ ಕಲಾಲ ಹಾಗೂ ಮುಕಂದ ಕಲಾಲ ಸಾ; ಲಿಂಗಮಪಲ್ಲಿ ಇವರು ಸಹಾಯ ಮಾಡಿದ್ದು ಇರುತ್ತದೆ ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ದೇವಲ ಗಾಣಗಾಪೂರ ಠಾಣೆ :ಶರಣಪ್ಪ ತಂದೆ ಖಾಜಾಪ್ಪ ದೊಡ್ಡಮನಿ ಸಾ|| ಹೂವಿನಹಳ್ಳಿ ರವರು, ನಮ್ಮೂರಿನ ಸಿದ್ದಪ್ಪ ತಂದೆ ಮಾಹಾಂತಪ್ಪ ಕಟ್ಟಿಮನಿ ಎಂಬಾತನು ನಿನ್ನೆ ದಿನಾಂಕ:18-7-2011 ರಂದು ಸಾಯಂಕಾಲ ಸುಮಾರಿಗೆ ನಮ್ಮ ಎತ್ತುಗಳ ಕೊಟ್ಟಿಗೆಯ ಮುಂದೆ ಸರಾಯಿ ಕುಡಿದ ಒದರಾಡುತಿದ್ದಾಗ ಇಲ್ಲಿ ಒದರಾಡಬೇಡಂತಾ ಹೇಳಿದ್ದಕ್ಕೆ ಸಿದ್ದಪ್ಪನು ಅವಾಚ್ಯ ಶಬ್ದಗಳಿಂದ ಬೈದಿದ್ದು ಆಗ ನಾನು ಕೈಯಿಂದ ಹೊಡೆದಿರುತ್ತೇನೆ. ನಾನು ಅರ್ದ ಗಂಟೆ ನಂತರ ಕಮೀಟಿ ಹಾಲ ಮುಂದಿನಿಂದ ಮನೆಗೆ ಹೊರಟಿದ್ದಾಗ ಸಿದ್ದಪ್ಪ ತಂದೆ ಮಾಹಾಂತಪ್ಪ ಕಟ್ಟಿಮನಿ, ಹೊನ್ನಪ್ಪ ತಂದೆ ಮಾಹಾಂತಪ್ಪ ಕಟ್ಟಿಮನಿ, ಮಾಹಾಂತಪ್ಪ ತಂದೆ ಹೊನ್ನಪ್ಪ ಕಟ್ಟಿಮನಿ ಮತ್ತು ಶರಣಪ್ಪ ತಂದೆ ಹೊನ್ನಪ್ಪ ಕಟ್ಟಿಮನಿ ರವರೆಲ್ಲರೂ ಬಂದು ನನಗೆ ನಿಲ್ಲಿಸಿ ಸಿದ್ದಪ್ಪನು ಇತನು ನನಗೆ ಚಾಕುವಿನಿಂದ ಹೊಟ್ಟೆಗೆ ಹೊಡೆದ ಭಾರಿ ರಕ್ತಗಾಯ ಪಡಿಸಿರುತ್ತಾನೆ. ಜಗಳ ಬಿಡಿಸಲು ಬಂದ ನನ್ನ ತಾಯಿ ಲಕ್ಷ್ಮೀಬಾಯಿಗೂ ಶರಣಪ್ಪನು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದಿರುತ್ತಾನೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ:

ನರೋಣಾ ಠಾಣೆ
:ಶ್ರೀ ಶಾಂತಪ್ಪ ತಂದೆ ಶಿವಲಿಂಗಪ್ಪ ಮಲಶೇಟ್ಟಿ ಮು: ಧುತ್ತರಗಾಂವ ರವರು ನಾನು ದಿನಾಂಕ: 18/07/2011 ರಂದು ಮುಂಜಾನೆ ಸುಮಾರಿಗೆ ನನ್ನ ಜೀಪನಲ್ಲಿ ಲಾಡ ಚಿಂಚೋಳಿ ಕ್ರಾಸದಿಂದ ಕೆಲವು ಶಾಲೆಯ ಹುಡುಗರನ್ನು ಜೀಪನಲ್ಲಿ ಕೂಡ್ರಿಸಿಕೊಂಡು ಧುತ್ತರಗಾಂವ ಕ್ಕೆ ಹೊರಟೇನು. ಲಾಡ ಚಿಂಚೋಳಿಯಿಂದ ಅಂದಾಜು ಅರ್ಧ ಕಿ;ಮಿ; ದೂರ ಧತ್ತರಗಾಂವ ಕಡೆಗೆ ಹೋಗುವಾಗ ದೌಲತರಾವ ಇವರ ಹೊಲದ ಹತ್ತಿರ ರೋಡಿನಲ್ಲಿ ಒಬ್ಬ ಮನುಷ್ಯನಿಗೆ ನಾಲ್ಕು ಜನರು ಕೂಡಿಕೊಂಡು ಕೈಯಲ್ಲಿ ಬಡಿಗೆ, ಕೊಡಲಿ ಹಿಡಿದುಕೊಂಡು ಹೊಡೆಯುತ್ತಿದ್ದರು. ನಾನು ಇದನ್ನು ಕಂಡು ಸ್ವಲ್ಪ ಅಂತರದಲ್ಲಿ ನನ್ನ ಜೀಪ ನಿಲ್ಲಿಸಿ ನೋಡಲು ಕೊರಳ್ಳಿ ಗ್ರಾಮದ ಭೋಗವಂತರಾವ ಹೊದಲೂರ ಮು: ಕೊರಳ್ಳಿ ಇವರಿಗೆ ಲಾಡ ಚಿಂಚೋಳಿ ಗ್ರಾಮದ ಮಹಾಂತೇಶ ತಂದೆ ಬಾಬು , ಪರಮೇಶ್ವರ ತಂದ ಬಾಬು ಜವಳಿ, ಶರಣಪ್ಪ ತಂದೆ ಬಾಬು ಜವಳಿ ,ಈರಣ್ಣಾ ತಂದೆ ಬಾಬು ಜವಳಿ , ಇವರು ಹೊಡೆಯುತ್ತಿದ್ದು ಮಹಾಂತೇಶ ಈತನ ಕೈಯಲ್ಲಿ ಕೊಡ್ಲಿ ಯಿದ್ದು ಬೋಗವಂತರಾಯನ ತಲೆಯ ಹಿಂಬದಿಯಲ್ಲಿ ಕೊಡಲಿಯಿಂದ ಹೊಡೆದನು ಪರಮೇಶ್ವರ ಮತ್ತು ಶರಣಪ್ಪ ಮತ್ತು ಈರಣ್ಣ ಇವರ ಕೈಗಳಲ್ಲಿ ಬಡಗಿಗಳಿದ್ದು ಒಂದೆ ಸವನೆ ಏಟಿನ ಮೇಲೆ ಏಟು ಬೋಗವಂತರಾಯನಿಗೆ ಹೊಡೆಯುತ್ತಿದ್ದರು ಯಾವುದು ಒಂದು ಉದ್ದೇಶ ಹೊಡೆ ಬಡೆ ಮಾಡಿ ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ :
ಶ್ರೀ ಬಸವರಾಜ ತಂದೆ ಅಂಬಣ್ಣ ಕಡಗಂಚಿ ಉ: ಎಮ್‌ಟಿಎಸ್‌ ಏಜೇನನ್ಸಿ ಯಲ್ಲಿ ಕೆಲಸ ಸಾ: ಹಳೇಯ ಶೆಟ್ಟಿ ಕಾಂಪ್ಲೇಕ್ಸ್‌ ಎದುರುಗಡೆ ಸುಬಾಷ ನಗರ ಶಹಾಬಜಾರ ಗುಲಬರ್ಗಾ ರವರು ನಾನು ಮತ್ತು ಚೇತನ ಇಬ್ಬರೂ ಕೂಡಿಕೊಂಡು ಸೇಲ್ಸ್ ಕಲೇಕ್ಷನ ತರುವ ಕುರಿತು ಹೀರೋ ಹೋಂಡಾ ಪ್ಯಾಶನ ಮೋ ಸೈಕಲ ನಂ ಕೆಎ 32 ವ್ಹಿ 916 ನೇದ್ದರ ಮೇಲೆ ಕಮಲಾಪೂರಕ್ಕೆ ಹೋಗಿದ್ದು, ಕೆಲಸ ಮುಗಿಸಿಕೊಂಡು ಮದ್ಯಾಹ್ನ ಗುಲಬರ್ಗಾಕ್ಕೆ ಬರುತ್ತಿರುವಾಗ ಕಪನೂರ ಇಂಡಸ್ಟ್ರಿಯಲ್ ಏರಿಯಾದ ಸಫಾರಿ ಧಾಬಾ ದಾಟಿ ಮುಂದೆ ಬರುತ್ತಿರುವಾಗ ಗುಲಬರ್ಗಾ ಕಡೆಯಿಂದ ಕೆಎಸ್‌ಆರ್‌ಟಿಸಿ ಬಸ್ಸ ನಂ ಕೆಎ 32 ಎಪ್‌ 1122 ನೇದ್ದರ ಚಾಲಕ ಚಾಲಕ ಶೇಖ ಮುಬಿನ ಬಸ್ಸನ್ನು ಅತೀವೇಗ ಮತ್ತು ನಿಷ್ಕಾಳಜಿತನ ದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ ನನ್ನ ಗಾಡಿಯ ಹಿಂದೆ ಕುಳಿತ ಚೇತನ ಇತನಿಗೆ ಹಣೆಗೆ ತಲೆಗೆ ಜೋರಾಗಿ ಪೆಟ್ಟಾಗಿ ಹಣೆಯ ಮದ್ಯದಲ್ಲಿ ಬಾರಿ ರಕ್ತಗಾಯವಾಗಿ, ಸ್ಥಳದಲ್ಲಿಯೇ ಮೃತ್ತಪಟ್ಟಿರುತ್ತಾನೆ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಪೆಟ್ರೋಲ್ ಪಂಪ ಗ್ಲಾಸ್ ಹಾನಿ ಮಾಡಿದ ಬಗ್ಗೆ:

ಗ್ರಾಮೀಣ ಪೊಲೀಸ ಠಾಣೆ : ಶ್ರೀ ಶಿವಕಾಮತ ತಂದೆ ಶಿವಾರಾಯ ರೆಡ್ಡಿ ಸಾ|| ಎನ.ಜಿ.ಓ ಕಾಲೋನಿ ಗುಲಬರ್ಗಾ ರವರು ನಮ್ಮ ಪೆಟ್ರೋಲ್ ಪಂಪ್ ಹಿರಾಪೂರ ಕ್ರಾಸ್ ದಲ್ಲಿ ಇದ್ದು, ದಿನಾಂಕ 18/7/11 ರಂದು ರಾತ್ರಿ ಸುಮಾರಿಗೆ ಪೆಟ್ರೋಲ ಪಂಪಕ್ಕೆ 8-10 ಜನ ಹುಡುಗರು ಮೋಟಾರ ಸೈಕಲಗಳ ಮೇಲೆ ಬಂದು ಪೆಟ್ರೋಲ ಹಾಕಲು ಹೇಳಿದಾಗ ನಮ್ಮ ಕೆಲಸ ಮಾಡುವ ಹುಡುಗರು ಈಗ ಹಾಕುವುದಿಲ್ಲ ಅಂತಾ ತಿಳಿಸಿದಕ್ಕೆ ಅವರಲ್ಲಿ 2 ಜನರು ಅವ್ಯಾಚ್ಛವಾಗಿ ಬೈದು ಕಲ್ಲುಗಳನ್ನು ತೆಗೆದುಕೊಂಡು ಡಿಸೇಲ ಪಂಪಗೆ ಕಲ್ಲಿನಿಂದ ಹೊಡೆದು ಅದರ ಗ್ಲಾಸು ಒಡೆದಿರುತ್ತಾರೆ. ಕಲ್ಲಿನಿಂದ ಹೊಡೆದ ಪರಿಣಾಮ 45000./- ರೂಪಾಯಿಗಳ ಮೌಲ್ಯದ್ದು ಗ್ಲಾಸ ಲುಕ್ಸಾನ ಆಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಗ್ರಾಮೀಣ ಠಾಣೆ ಜೈಬೀಮ ತಂದೆ ಕಂಠೆಪ್ಪ ಹಡಗಿಲ ಉ: ಪೆಟಿಂಗ ಕೆಲಸ ಸಾ: ಅಂಬೇಡ್ಕರ ನಗರ ಶರಣಸಿರಸಗಿ ತಾಃ ಜಿಃ ಗುಲಬರ್ಗಾ. ಇತನಿಗೆ ಸದರ ಚೇತನ ಮಾಲಗತ್ತಿ ಹಾಗು ಇನ್ನೂ 3 ಜನರು ಬಂದು ಹಣ ಕೊಡುವ ವಿಷಯದಲ್ಲಿ ಮನೆಯ ಹತ್ತಿರ ಬಂದು ನನಗೆ ಜಬರ ದಸ್ತಿಯಿಂದ ಗಾಡಿಯ ಮೇಲೆ ಕರೆದುಕೊಂಡು ಹೋಗುವಾಗ ನನ್ನ ತಾಯಿ ಮತ್ತು ಅಣ್ಣ ಶಿವಪುತ್ರ ಕರೆದುಕೊಂಡು ಹೊಗಬೇಡ ಅಂತಾ ಹೇಳಿದರು ಬ್ರಹ್ಮಪೂರ ಗಲ್ಲಿಯಲ್ಲಿ ತಂದು ಕಲ್ಲಿನಿಂದ ಕೈಯಿಂದ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 


 


 


 

No comments: