ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಸುಬಾಸ ತಂದೆ ಅಮಲಪ್ಪಾ ನಡುವಿನಮನಿ ಸಾ: ಅರಿಕೇರಾ(ಜೆ) ತಾ: ಸುರಪೂರ ರವರು ನಾನು ಮತ್ತು ಕಾಕನ ಮಗ ಭೀಮರಾಯ ತಂದೆ ಶರಣಪ್ಪಾ ನಡುವಿನಮನಿ ಇಬ್ಬರೂ ಕೂಡಿಕೊಂಡು ಲಾರಿ ನಂ ಕೆ.ಎ-32, 8814 ನೇದ್ದರಲ್ಲಿ ಹೊರಟಿದ್ದು, ಕೆಲ್ಲೂರ ಸಮೀಪ ಏಕಿ ಮಾಡಲು ಭೀಮರಾಯ ಇತನು ಇಳಿದಾಗ ಲಾರಿ ಚಾಲಕ ಸೂರ್ಯಾಕಾಂತ ಇತನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಸ್ತಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ :ಶ್ರೀ ವೆಂಕಟೇಶ ತಂದೆ ಏಮಜೀ ರಾಠೋಡ ಸಾಃ ಪಾಣೆಗಾಂವ ತಾಃಜಿಃ ಗುಲಬರ್ಗಾ ರವರು ನಾನು, ನನ್ನ ಹೆಂಡತಿ ಕಲಾವತಿ, ನಮಗಳಾದ ಪಾರ್ವತಿ, ಅಣ್ಣನ ಮಗನಾದ ಕುಪೇಂದ್ರ ಹಾಗು ನಮ್ಮ ತಾಂಡಾದವರಾದ ಶಿವರಾಮ ಎಲ್ಲರೂ ಕೂಡಿಕೊಂಡು ಕಾಳಮಂದರಗಿ ತಾಂಡಾಕ್ಕೆ ಹೋಗಿ ತಾಂಡಾದಲ್ಲಿ ಯಾರೂ ಇರದ ಕಾರಣ ಓಕಳಿ ಕ್ರಾಸಿಗೆ ಹೋಗಿ ಚಹಾ ಕುಡಿದು ರೋಡಿನ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದುಗಡೆಯಿಂದ ಬಸ್ಸ ಕೆಎ:32, ಎಫ್: 1258 ನೇದ್ದರ ಚಾಲಕನಾದ ವಿಶ್ವನಾಥ ಮ್ಯಾಕೆಲೆ ಸಾಃಹಣಮಂತವಾಡಿ ತಾಃಬಸವಕಲ್ಯಾಣ ಜಿಃ ಬೀದರ ಇತನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಹೆಂಡತಿ ಕಲಾವತಿ ಇವಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಅವಳಿಗೆ ಅಲ್ಲಲ್ಲಿ ತರಚಿದ ರಕ್ತಗಾಯ ಮತ್ತು ಬಲ ಮೆಲಕಿಗೆ ಒಳಪೆಟ್ಟಾಗಿ ಗುಪ್ತಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಚೀನ ತಂದೆ ತಿರುಪತಿ ಪಾಟೀಲ ಭಾಗ್ಯವಂತಿ ನಗರ ಗುಲಬರ್ಗಾ ರವರು ಹೈಕೋರ್ಟ ಕಡೆಯಿಂದ ಜೇವರ್ಗಿ ರಿಂಗ ರೋಡ ಕಡೆ ಹೋಗುವ ರೋಡಿನಲ್ಲಿ ಮಹಾರಾಜ ಲೇಔಟ ಹತ್ತಿರ ರಿಂಗ ರೋಡಿನ ಮೇಲೆ ಹೈಕೋರ್ಟ ಕಡೆಯಿಂದ ಟಿಪ್ಪರ ಲಾರಿ ನಂಬರ ಕೆಎ 32 ಬಿ 1900 ನೆದ್ದರ ಚಾಲಕ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಕಾರ ನಂ: ಕೆಎ 32 ಎಮ್ 9368 ನೆದ್ದಕ್ಕೆ ಓವರ ಟೆಕಮಾಡಿ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
No comments:
Post a Comment