ಗಂಡನ ಮನೆಯವರಿಂದ ಕಿರುಕುಳ ತಾಳಲಾರದೇ ಗೃಹಿಣೆ ಆತ್ನಹತ್ಯೆ
ದೇವಲ ಗಾಣಗಾಪೂರ ಠಾಣೆ: ಶ್ರೀ ಶರಣಪ್ಪ ತಂದೆ ಅಯ್ಯಪ್ಪಗೌಡ ಪೊಲೀಸ ಪಾಟೀಲ ಸಾ|| ಮನೆ ನಂ 10/49 ಭವಾನಿ ಪೇಠ ಗೋಂಗಡೆ ವಸ್ತಿ ಸೋಲಾಪೂರ ರವರು ನನ್ನ ತಂಗಿ ಶಕುಂತಲಾ ಇವಳಿಗೆ ಅಫಜಲಪೂರ ತಾಲೂಕಿನ ಹಾವನೂರ ಗ್ರಾಮದ ನಿವೃತ್ತ ಅಬಕಾರಿ ಎ.ಎಸ್.ಐ ಜಟ್ಟೆಪ್ಪ ಪೂಜಾರಿ ರವರ ಮಗನಾದ ಅಮೀತಕುಮಾರನೊಂದಿಗೆ 2005 ಸಾಲಿನಲ್ಲಿ ಲಗ್ನ ಮಾಡಿ ಕೊಟ್ಟಿರುತ್ತೇವೆ, ಲಗ್ನದ ಸಮಯದಲ್ಲಿ ವರನಿಗೆ 2 ಲಕ್ಷ ರೂಪಾಯಿ, 4 ತೊಲಿ ಬಂಗಾರ ಮತ್ತು ಗೃಹಬಳಿಕೆ ಸಾಮಾನುಗಳೆಲ್ಲ ಕೊಟ್ಟು ಮದುವೆ ಮಾಢಿ ಕೊಟ್ಟಿರುತ್ತೇವೆ. ತಂಗಿ ಶಕುಂತಲಾಗೆ ಅವಳ ಗಂಡ, ಅತ್ತೆ :ಮಹಾದೇವಮ್ಮಾ ,ಮಾವ ಜೆಟ್ಟಪ್ಪಾ ರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದನ್ನು ತಾಳಲಾರದೆ ಗಂಡನ ಮನೆಯಲ್ಲಿ ಮೈಮೆಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಠಾಣೆ : ಶ್ರೀ ಅಮರಯ್ಯ ಪೊಲೀಸ್ ಪೇದೆ ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ ರವರು ನಾನು ಬೆಳಿಗ್ಗೆಯಿಂದ ಪಟೇಲ್ ವೃತ್ತದಲ್ಲಿ ಸಂಚಾರಿ ನಿಯಂತ್ರಣ ಕರ್ತವ್ಯದಲ್ಲಿ ನಿರತನಾಗಿದ್ದು 11:45 ಎ.ಎಮ್. ಕ್ಕೆ ಶಾಂತಿ ಸಾಗರ ಹೊಟೇಲ್ ಮುಂದುಗಡೆ ಸಂಚಾರ ನಿಷೇಧಿತ ಸ್ಥಳದಲ್ಲಿ ಆಟೋ ರಿಕ್ಷಾ ನಂ ಕೆ.ಎ.-32/ಎ-1072 ನೇದ್ದರ ಚಾಲಕನು ಆಟೋ ನಿಲ್ಲಿಸಿದಾಗ ನಾನು ಆಟೋ ತಗೆಯಲು ಹೇಳಿದಾಗ ಆಟೋ ಚಾಲಕ ವಿಠಲ್ ತಂದೆ ಶಿವಪ್ಪ ಧರೆನ್ನವರನು ಕರ್ತವ್ಯ ನಿರತ ನನಗೆ ಮುಂದಕ್ಕೆ ಹೋಗುವುದಿಲ್ಲ ಬೋಸಡಿ ಮಗನೆ ಅಂತಾ ಬೈದಾಗ ಆಗ ನಾನು ಸಂಗಡ ಕರ್ತವ್ಯದಲ್ಲಿದ್ದ ರಾಜೇಂದ್ರ ಪ್ರಸಾದ ಹೆಚ್.ಸಿ. ಇಬ್ಬರೂ ಕೂಡಿಕೊಂಡು ಯಾಕೆ ತೆಗೆಯುವದಿಲ್ಲ ಅಂತಾ ಕೇಳಿದಾಗ ಆಟೋ ಚಾಲಕನು ಈ ಗುಲಬರ್ಗಾದಲ್ಲಿ ಸಂಚಾರಿ ನಿಯಂತ್ರಣ ಕರ್ತವ್ಯ ಹೇಗೆ ಮಾಡುತ್ತಿ ನೋಡಿಕೊಳ್ಳುತ್ತಿನಿ ಅಂತಾ ಬೆದರಿಕೆ ಹಾಕುತ್ತಾ ಸಮವಸ್ರ್ತ ಹಿಡಿದು ಜಗ್ಗಾಡಿ ಶರ್ಟನ್ನು ಹರಿದಿದ್ದು ಅಲ್ಲದೇ ಕರ್ತವ್ಯಕ್ಕೆ ಅಡೆತಡೆಯನ್ನುಂಟು ಮಾಡಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
No comments:
Post a Comment