Police Bhavan Kalaburagi

Police Bhavan Kalaburagi

Tuesday, August 2, 2011

GULBARGA DIST REPORTED CRIMES

ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮಹೇಂದ್ರ  ತಂದೆ ಕಾಶಪ್ಪ ಗಡ್ಡಿಮನಿ   ಸಾ: ಬ್ರಹ್ಮಪೂರ ವಡ್ಡರ ಗಲ್ಲಿ ಗುಲಬರ್ಗಾ   ರವರು ನಾನು ಮತ್ತು ಮಾವನಾದ ಮಲ್ಲಿಕಾರ್ಜುನ ರವರು ಮೊಟಾರ ಸೈಕಲ್ ನಂ: ಕೆಎ 36 ಎಸ್ 650 ನೆದ್ದರ ಮೇಲೆ  ದಿನಾಂಕ: 01-08-2011 ರಂದು ಮಧ್ಯಾಹ್ನ ಕಾರ್ಪೊರೇಶನ ಹಿಂದಿನ ಗಾರ್ಡನ ಹತ್ತಿರದ ಜಗತ ದಿಂದ ಗೋವಾ ಹೊಟೇಲ ಕಡೆ ಹೋಗುವ ರೋಡಿನ ಮೇಲೆ ಹೋಗುತ್ತಿರುವಾಗ  ಎದುರುಗಡೆಯಿಂದ ಟಿ.ವಿ.ಎಕ್ಸಲ್ ನಂ: ಕೆಎ 32 ಎಸ್ 9872 ನೆದ್ದನ್ನು ಆನಂದ ಈತನು ಅತೀ ವೇಗ ಮತ್ತು ಅಲಕ್ತತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ನನಗೆ ಮತ್ತು ಮಲ್ಲಿಕಾರ್ಜುನ ಈತನಿಗೆ ಭಾರಿ ಗಾಯಗೊಳಿಸಿ ತಾನು ಸಹ ಗಾಯಗೊಂಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ
 :

ಶ್ರೀ ಬಂಡೇಪ್ಪ ತಂದೆ ಗಂಗಾರಾಮ ಕೋಟೆ ಸಾ: ಚಿತಲಿ ತಾ: ಆಳಂದ   ರವರು  ನನ್ನ ಅಣ್ಣನ ಮಗನಾದ ಶರಣಬಸಪ್ಪ ತಂದೆ ಗುಂಡಪ್ಪ ಇತನು ಕೆಎಸ್‌ಆರ್‌ಟಿ ಬಸ್ಸ ಚಾಲಕನಾಗಿದ್ದು ಬಸ್ಸ ನಂ ಕೆಎ 32 ಎಪ್‌ 1272 ನೇದ್ದನ್ನು ತುಳಾಜಪೂರದಿಂದ ಗುಲಬರ್ಗಾಕ್ಕೆ ಬಂದು ಮದ್ಯಾಹ್ನ 4:30 ಗಂಟೆಯ ಸುಮಾರಿಗೆ ಗುಲಬರ್ಗಾ ಆಳಂದ ಹತ್ತಿರ ರಿಂಗ ರೋಡ ಟರ್ನ ಮಾಡಿ ನಿಲ್ಲಿಸಿ, ಬಸ್ಸ ಟೈರ ಮತ್ತು ಫಾಟಾ ಚೆಕ್ಕ ಮಾಡಲು ಬಸ್ಸಿನ ಕೆಳಗಡೆ ಹೋಗಿ ಚೆಕ್ಕ ಮಾಡುವಾಗ ಕಂಡೆಕ್ಟರ –ಕಮ್‌- ಚಾಲಕ ಶ್ರೀನಿವಾಸ ಪೂಜಾರಿ ಇತನು ಸ್ಟೇರಿಂಗ ಮೇಲೆ ಕುಳಿತು ಅಜಾಗರೂಕತೆಯಿಂದ ಒಮ್ಮೇಲೆ ಬಸ್ಸ ಮುಂದಕ್ಕೆ ಓಡಿಸಿದ್ದರಿಂದ ಶರಣಬಸಪ್ಪ ಇತನು ಬಸ್ಸಿನ ಹಿಂದಿನ ಬಲಭಾಗದ ಟೈರ ಮಡಗಡ್ಡ ಜೋರಾಗಿ ತಲೆ ಹಿಂದುಗಡೆ ಪೆಟ್ಟಾಗಿ ಎಡ ಕಪಾಳಕೆ ಕಂದು ಗಟ್ಟಿದ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಅಪಘಾತ ಪ್ರಕರಣ:

ಚಿಂಚೋಳಿ ಠಾಣೆ: ಶ್ರೀ ಆನಂದ ತಂದೆ ಬಳಿರಾಮ ಚವಾಣ ಸಾ: ಸಲಗರ ಕಾಲೋನಿ ತಾಂಡ ಸಲಗರ ಬಸಂತ ಪೂರ ರವರು ನಾನು ಮತ್ತು ನನ್ನ ತಂದೆ ಬಳಿರಾಂ ಕೂಡಿಕೊಂಡು ಮೊಟಾರ ಸೈಕಲ್ ನಂ ಕೆಎ: 32-ಎ-1441 ನೇದ್ದರ ಮೇಲೆ ದಿನಾಂಕ: 31-07-2011 ರಂದು ನಮ್ಮ ತಾಂಡಾದಿಂದ ಸೇರಿ ಕ್ರಾಸ ಕಡೆಗೆ ಹೊಗುತ್ತಿದ್ದಾಗ ಎದರುಗಡೆಯಿಂದ ಆಟೋ ನಂ ಕೆಎ: 32-ಬಿ-2248 ನೇಧ್ದರ ಚಾಲಕ ಅತೀ ವೇಗದಿಂದ ಹಾಗು ನಿಷ್ಕಾಳಜಿತದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೊಟಾರ ಸೈಕಲಗೆ ಡಿಕ್ಕಿ ಪಡಿಸಿ ಆಟೋ ಸ್ಥಳದಲ್ಲಿಯೇ ಬಿಟ್ಟು ಓಡಿಹೊಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

No comments: