ಕಳ್ಳತನಕ್ಕೆ ಪ್ರಯತ್ನ
ವಿಶ್ವವಿದ್ಯಾಲಯ ಠಾಣೆ :ಶ್ರೀ ಮಸ್ತಾನ ಬಿರಾದಾರ ತಂದೆ ಸೈಯ್ಯದ ಬಿರಾದಾರ ಸಾ: ಮಕ್ಕಾ ಕಾಲೋನಿ ಗುಲಬರ್ಗಾ ರವರು ಅಕ್ಬರ ಬಾಗ ಕಾಲೋನಿಯಲ್ಲಿ ನಮ್ಮದೂಂದು ಮನೆಯಿದ್ದು, ಮನೆಯ ಭಾಗದಲ್ಲಿ ಸಹರಾ ಸಂಸ್ಥೆಯ ಆಪೀಸ ಇದ್ದು ದಿನಾಂಕ 03-08-2011 ರಂದು ಬೆಳಿಗ್ಗೆ ಸಂಸ್ಥೆಯ ಕಛೇರಿಗೆ ಒಳಗೆ ಶಬ್ದ ಕೇಳಿ ಬಂತು ನಾನು ತಕ್ಷಣ ಮೇಲೆ ಹೋದಾಗ ಯಾರೂ ಮಹಿಳಾ ಕಳ್ಳರು ಓಡುತ್ತಿದ್ದರು ಅವರನ್ನು ಬೆನ್ನು ಹತ್ತಿ ಹಿಡಿದು ಹೆಸರು ವಿಚಾರಿಸಲಾಗಿ ಸಾಹು ಗಂಡ ಕಿಲಾವರ ಸಕಟ ಸಾ; ಮಾಂಗರವಾಡಿ ಗಲ್ಲಿ ಸುಂದರ ನಗರ ಗುಲಬರ್ಗಾ ಓಡಿ ಹೋದ ಇನ್ನೊಬ್ಬ ಹೆಣ್ಣು ಮಗಳ ಹೆಸರು ವಿಚಾರಿಸಲಾಗಿ ಶಮೀನಾ ಗಂಡ ಮಹಾಂತೇಶ ಕಾಳೆ ಸಾ; ಮಾಂಗರವಾಡಿ ಗಲ್ಲಿ ಅಂತಾ ತಿಳಿಸಿದ್ದು ಇರತ್ತದೆ. ಹಿಂದಿನ ಬಾಗಿಲು ಒಡೆದು ಕಳ್ಳತನ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವರ
ವಿಗ್ರಹದ
ಕಿವಿಯಲ್ಲಿದ್ದ
ಬಂಗಾರದ
ಹೂವು
ಕಳ್ಳತನ:
ರಾಘವೇಂದ್ರ ನಗರ ಠಾಣೆ :
ಶ್ರೀ ಪಾಂಡುರಂಗ ತಂದೆ ದೇವರಾವ ದೇಶಮುಖ ನಮ್ಮ ಮನೆಯಲ್ಲಿ ದಿನಾಂಕ 16-07-2011 ರಂದು ಶ್ರೀ ಪಾಂಡುರಂಗ ದೇವರ ವಿಗ್ರಹದ ಕಿವಿಯಲ್ಲಿದ್ದ ಬಂಗಾರ ಹೂವು ಅಂದಾಜು 30,000/-ರೂ ದಿಂದ 40,000/-ರೂ ಬೆಲೆಯುಳ್ಳದ್ದು
ಕಳ್ಳತನವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ:
ಅಶೋಕ ನಗರ ಠಾಣೆ : ಶ್ರೀ ಸರದಾರಸಿಂಗ ತಂದೆ ಗೋಪಾಲಸಿಂಗ ಠಾಕೂರ ಸಾ: ಆಲಮೇಲ್ (ಹಾ.ವ) ಆನಂತರಾವ ಪುರಾಣಿಕ ಇವರ ಮನೆಯಲ್ಲಿ ಬಾಡಿಗೆ ಸಂತೋಷ ಕಾಲೋನಿ ಗುಲಬರ್ಗಾ ರವರು ನನ್ನ ಮಗ ಗೋಪಾಲಸಿಂಗ ತಂದೆ ಸರದಾರಸಿಂಗ ವಯ: 13 ಉ: 9ನೇ ತರಗತಿಯ ವಿದ್ಯಾರ್ಥಿ ಜಾತಿ: ರಜಪೂತ ಸಾ: ಸಂತೋಷ ಕಾಲೋನಿ ಗುಲಬರ್ಗಾ ಇತನು ಶಾಲೆಗ ಹೋಗುತ್ತೇನೆ. ಅಂತಾ ಮನೆಯಿಂದ ಹೊದವನು ಶಾಲೆಗೆ ಹೋಗದೇ ಮನೆಗೂ ಬರದೇ ಕಳೆದ 5 ದಿವಸಗಳಿಂದ ಕಾಣೆಯಾಗಿರುತ್ತಾನೆ. ಎಲ್ಲಾ ಕಡೆ ನಮ್ಮ ಸಂಬಂಧಿಕರಲ್ಲಿ ಮತ್ತು ಬಂಧುಗಳಲ್ಲಿ ಹುಡುಕಾಡಿದರೂ ಸಹ ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ. ಕಾರಣ ಕಾಣೆಯಾಗಿರುವ ನನ್ನ ಮಗ ಗೋಪಾಲಸಿಂಗ ಇತನಿಗೆ ಪತ್ತೆ ಹಚ್ಚಿ ಕೊಡಲು ವಿನಂತಿ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment