Police Bhavan Kalaburagi

Police Bhavan Kalaburagi

Sunday, August 7, 2011

GULBARGA DIST REPORTED CRIMES

ಹಲ್ಲೆ ಪ್ರಕರಣ:

ಮಾದನ ಹಿಪ್ಪರಗಾ ಠಾಣೆ : ಪರಮೇಶ್ವರ ತಂದೆ ಚನ್ನಪ್ಪ ನಿಂಗದಳ್ಳಿ ಸಾ: ಮಾದನ ಹಿಪ್ಪರಗಾ ರವರು ನನ್ನ ಹೊಲದ ಸರ್ವೆ ನಂ;-238:1 ರಲ್ಲಿ ಶ್ರೀಮಂತ ತಂದೆ ಶರಣಪ್ಪ ನಿಂಗದಳ್ಳಿ, ಸಿದ್ದಪ್ಪ ತಂದೆ ಶರಣಪ್ಪ ನಿಂಗದಳ್ಳಿ ಮಹೇಶ ತಂದೆ ಶ್ರೀಮಂತ ನಿಂಗದಳ್ಳಿ ಎಲ್ಲರೂ ಸಾ: ಮಾದನ ಹಿಪ್ಪರಗಾ ರವರು ಅತಿಕ್ರಮಣ ಪ್ರವೇಶ ಮಾಡಿ ನಮ್ಮ ಭಾವಿಯ ಹತ್ತಿರ ಇವರು ಗಿಡಗಳನ್ನು ಕಡಿದು ನಮ್ಮ ಪಂಪಸಟ್ಟ ಡಬ್ಬಿಯ ಮೇಲೆ ಬಿಸಾಕಿದ್ದ್ದರು ಯಾಕೆ ಅಂತಾ ಕೇಳಿದಕ್ಕೆ ಅವಾಚ್ಯವಾಗಿ ಬೈದು ಜೀವ ಹೇದರಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಶಹಾಬಾದ ನಗರ ಠಾಣೆ:
ಶ್ರೀ ಭೀಮರಾವ ತಂದೆ ಮಹಾದೇವ ಉಪ್ಪಾರ ಸಾ:ತರನಳ್ಳಿ ರವರು ನಾನು ಅಂಗ ವಿಕಲತನ ಇರುವದರಿಂದ ಸರ್ಕಾರದಿಂದ ಸಿಗುವ ಹಣ ಈಗ 5-6 ವರ್ಷಗಳಿಂದ ಬರದೇ ಇರುವದರಿಂದ ಅದನ್ನು ರಿನಿವಲ್ ಮಾಡಿಸಲು ಲಿಂಗಣ್ಣಾ ಮುತ್ತಗಿ ಇವರಿಗೆ 2 ವರ್ಷದ ಹಿಂದೆ ಹಣ ಕೊಟ್ಟಿದ್ದು ಅವನು ರಿನಿವಲ್ ಮಾಡಲಾರದಕ್ಕೆ ಕೇಳಲು ಹೊದರೆ ಲಿಂಗಣ್ಣಾ ಮತ್ತು ಇನ್ನೂ ಇಬ್ಬರೂ ಕೂಡಿ ಅವ್ಯಾಚವಾಗಿ ಬೈದು ಕಟ್ಟಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ:

ಗ್ರಾಮೀಣ ಠಾಣೆ: ಶ್ರೀ. ಆಸಿಫ್ ಉಲ್ಲಾ ಭೂ ವಿಜ್ಞಾನಿ ಉಪ-ನಿರ್ದೇಶಕರ ಕಛೇರಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಗುಲಬರ್ಗಾ ರವರು ನಾನು ಮಾನ್ಯ ಪ್ರಾದೇಶಿಕ ಆಯುಕ್ತರು ಗುಲಬರ್ಗಾರವರ ನಿರ್ದೇಶನದ ಮೇರೆಗೆ ಬೇಲೂರ (ಜೆ) ಗ್ರಾಮಕ್ಕೆ ಗ್ರಾಮದ ಸ.ನಂ. 86/4 ರ ಕ್ಷೇತ್ರ 05-00 ಎಕರೆ ಜಮೀನಿನಲ್ಲಿ ಭೂಮಾಲಿಕರಾದ ಶ್ರೀ ಅಬ್ದುಲ ಶುಕೂರ ತಂದೆ ಹಾಜಿ ಮೊಹಮ್ಮದ ಮೆಹಮೂದ ಅಲಿ, ಇವರು ಗಣಿ & ಭೂವಿಜ್ಞಾನ ಇಲಾಖೆಯಿಂದ ಅನುಮತಿ ಇಲ್ಲದೆ ಅಕ್ರಮ ವಾಗಿ ಮುರಂ (ಗರಸು) ಮತ್ತು ಕಟ್ಟಡದ ಕಲ್ಲುಗಳನ್ನು ಟ್ಟಿಪರ ನಂ: ಕೆಎ 32 4491 ಚಾಲಕ ಫಕ್ರೋದ್ದಿನ, ಕೆಎ 32 ಬಿ- 0561 ಚಾಲಕ ಇಸ್ಮಾಯಿಲ್, ಮತ್ತು ಕೆಎ 35- 8547 ನೇದ್ದರ ಚಾಲಕ ಹಬೀಬ ರವರ ಟಿಪ್ಪರಗಳಲ್ಲಿ ತುಂಬಿ ಸಾಗಿಸುತ್ತಿರುವಾಗ ದಾಳಿ ಮಾಡಿದ್ದು, ಮುರಂ (ಗರಸು) & ಕಟ್ಟಡದ ಕಲ್ಲುಗಳನ್ನು ತೆಗೆದು ಕಳ್ಳತನದಿಂದ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಸದಿಯವರನ್ನು ವಿಚಾರಿಸಲು ಸಮರ್ಪಕವಾದ ವಿವರಣೆ & ದಾಖಲಾತಿಗಳು ನೀಡಿರುವದಿಲ್ಲಾ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಚಿಂಚೋಳಿ ಪೊಲೀಸ ಠಾಣೆ: ಶ್ರೀ ಶಿವಶಂಕ್ರಪ್ಪಾ ತಂದೆ ರೇವಣಸಿದ್ದಪ್ಪಾ ಸಾತಪ್ಪನೋರ ಸಾ: ಕನಕಪೂರ, ತಾ: ಚಿಂಚೋಳಿ ರವರು ನಾನು ನನ್ನ ಹೆಂಡತಿ ಉಷಾ, ಮತ್ತು ಮಕ್ಕಳು ಕೂಡಿಕೊಂಡು ಮೋಟರ ಸೈಕಲ್ ನಂ. ಕೆ.ಎ 32, ಆರ್ 2142 ನೇದ್ದರ ಮೇಲೆ ತಾಳಮಡಿಗಿಯಿಂದ ಕನಕಪೂರಕ್ಕೆ ಬೆನೆಕೆಪಳ್ಳಿ ಮಾರ್ಗವಾಗಿ ಬರುತ್ತಿರುವಾಗ ಎದುರುಗಡೆಯಿಂದ ಕೆಎ32, 7654 ಆಟೋ ಚಾಲಕನು ತನ್ನ ಆಟೋವನ್ನು ಅತೀ ವೇಗದಿಂದ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದನು . ನನಗೆ ಮತ್ತು ನನ್ನ ಹೆಂಡತಿ ಮಕ್ಕಳಿಗೂ ರಕ್ತಗಾಯಗಾಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: