Police Bhavan Kalaburagi

Police Bhavan Kalaburagi

Thursday, August 11, 2011

GULBARGA DIST REPORTED CRIMES

ಅಪಘಾತ ಪ್ರಕರಣ ಒಂದು ಸಾವು :
ಶಹಾಬಾದ ನಗರ ಠಾಣೆ:
ಶ್ರೀ ವಿಜಯಕುಮಾರ ತಂದೆ ಪಾಂಡು ರಾಠೋಡ ಉ: ಡ್ರೈವರ ಕೆಲಸ ಸಾ: ಕಾಳನೂರ ರವರು ನಾನು ನಿನ್ನೆ ದಿನಾಂಕ 10/08/2011 ರಂದು ಸಾಯಕಾಂಲ ಸುಮಾರಿಗೆ ನನ್ನ ಲಾರಿ ನಂ: ಸಿಜಿ/12 , ಜೆಡಸಿ 2026 ನೇದ್ದನ್ನು ವಾಡಿಯಿಂದ ಕಾಳನೂರಕ್ಕೆ ಚಲಾಯಿಸಿಕೊಂಡು ಬರುತ್ತಿರುವಾಗ ನನ್ನ ಮುಂದೆ ಟೀಪರ್ ನಂ: ಕೆ.ಎ-32/3125 ನೇದ್ದರ ಚಾಲಕ ಕೀಶನ ತಂದೆ ಗಂಗು ರಾಠೋಡ ಸಾ: ಕಾಳನೂರ ಇತನು ತನ್ನ ಟಿಪ್ಪರನ್ನು ಅತೀವೇಗ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಎಡಗಡೆ ಕಟ್ ಮಾಡಿದ್ದರಿಂದ ಟಿಪರ ಎಡಗಡೆ ಪಲ್ಟಿಯಾಗಿ ಬಿದ್ದು ಅದರಲ್ಲಿ ಕುಳಿತ ಗುಂಡುರಾವ ತಂದೆ ಬಸವಣಪ್ಪಾ ಮತ್ತು ಗೀರಿಧರ ತಂದೆ ಬಸವರಾಜ ಸಾ|| ನಂದೂರ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಾಲಕ ಕೀಶನ ಗೆ ಮುಖಕ್ಕೆ ಭಾರಿ ರಕ್ತಗಾಯವಾಗಿದ್ದು ಮತ್ತು ಎದೆಗೆ ಭಾರಿ ಒಳಪೆಟ್ಟಾಗಿ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕೀಶನ ಇತನು ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: