ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ನರ್ಸಿಂಗ ತಂದೆ ರಾಮಯ್ಯ ಸಾ: ಭವಾನಿ ನಗರ ಮುಕ್ತಾಂಪೂರ ಗುಲಬರ್ಗಾ ರವರು ನಾನು ದಿನಾಂಕ: 28-08-2011 ರಂದು ಸಾಯಂಕಾಲ ಸುಮಾರಿಗೆ ಪಟೇಲ ಸರ್ಕಲ್ ದಿಂದ ಕೆಎ 32 ಬಿ 3986 ನೇದ್ದರ ಅಟೋರೀಕ್ಷಾ ದಲ್ಲಿ ಕುಳಿತು ಸುಪರ ಮಾರ್ಕೆಟ ಕಡೆ ಹೋಗುತ್ತಿದ್ದಾಗ ಲಾಹೋಟಿ ಕ್ರಾಸ್ ಹತ್ತಿರ ಕಾರ ನಂ: ಕೆಎ 33 ಎಮ್ 1222 ನೇದ್ದರ ಚಾಲಕ ಲಾಹೋಟಿ ಕ್ರಾಸ್ ದಲ್ಲಿ ಖುಬಾ ಕಲ್ಯಾಣ ಮಂಟಪ ಕಡೆ ತಿರುಗಿಸಿಕೊಂಡು ಹೋಗುತಿದ್ದಾಗ, ಅಟೋ ಚಾಲಕ ತನ್ನ ಅಟೋವನ್ನು ಅಲಕ್ಷತನದಿಂದ ನಡೆಯಿಸಿ ಕಾರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿ ಗಾಯಗೊಳಿಸಿ ಅಟೋ ಚಾಲಕ ಓಡಿ ಹೋಗಿರುತ್ತಾನೆ ಅಂತ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ರಾಜಶೇಖರ ತಂದೆ ಧೂಳಪ್ಪ ಗುಡ್ಡ ಸಾ|| ಕರುಣೇಶ್ವರ ನಗರ ಗುಲಬರ್ಗಾ ರವರು ನನಗೆ ವಿಜಯರೆಡ್ಡಿ ಈತನು ಫೋನಮಾಡಿ ನಾನು ಮತ್ತು ನನ್ನ ಗೆಳೆಯ ಸಂತೋಷ ಕುಲಕರ್ಣಿ ಇಬ್ಬರು ಜೇವರ್ಗಿ ರೋಡಿನಲ್ಲಿ ಬರುವ ಜೆ.ಸಿ.ಬಿ.ಷೋ ರೂಮ ಹತ್ತಿರ ಮಾತನಾಡುತ್ತಾ ನಿಂತಾಗ ಅಟೋರೀಕ್ಷಾ ನಂ: ಕೆಎ 32 ಬಿ 648 ನೇದ್ದರ ಚಾಲಕ ಜೇವರ್ಗಿ ಕಾಲೋನಿ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಮೇಲೆ ಪಲ್ಟಿಯಾಗಿ ಬಿದ್ದಿದ್ದು ಅದರಲ್ಲಿದ್ದ ನಾಗೇಂದ್ರಪ್ಪ ಇವರಿಗೆ ಭಾರಿ ಪೆಟ್ಟಾಗಿ ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲಾ. ಅವರನ್ನು ಬೇರೊಂದು ಅಟೋ ರೀಕ್ಷಾದಲ್ಲಿ ಹಾಕಿಕೊಂಡು ಧನ್ವಂತ್ರಿ ಆಸ್ಪತ್ರೆಗೆ ಒಯ್ಯುತ್ತಿದ್ದೇವೆ.ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿಕೊಂಡು ಧನ್ವಂತ್ರಿ ಆಸ್ಪತ್ರೆಗೆ ಹೋಗಿ ನನ್ನ ಅಣ್ಣ ನಾಗೇಂದ್ರಪ್ಪ ಇವರನ್ನು ನೊಡಲಾಗಿ ಅವರಿಗೆ ಭಾರಿ ಗಾಯವಾಗಿ ಮತನಾಡುತ್ತಿರಲಿಲ್ಲ ಉಪಚಾರ ಪಡೆಯುತ್ತಾ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment