ಜೂಜಾಟ ಪ್ರಕರಣ:
ಸುಲೇಪೇಟ ಠಾಣೆ : ದಿನಾಂಕ 14-08-2011 ರಂದು ಮದ್ಯಾಹ್ನ ಶಿರೋಳ್ಳೀ ಗ್ರಾಮಕ್ಕೆ ಹೋದಾಗ ಗ್ರಾಮದ ದ್ವಾವ್ಯಮ್ಮಾ ಗುಡಿಯ ಕಟ್ಟಿಯ ಮೇಲೆ ಅಂದರ ಬಾಹರ ಇಸ್ಟೀಟ್ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ,ಸುಲೇಪೇಟ ರವರು ಮತ್ತು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷೇಮದಲ್ಲಿ ಹೋಗಿ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ ಶರಣಬಸಪ್ಪ ತಂದೆ ಬಸವರಾಜ ಪಸಾರ ಸಾ|| ಶಿರೋಳ್ಳಿ ಸಂಗಡ ಇನ್ನೂ 4 ಜನರು ಹಿಡಿದು ರೂ 2330/- ರೂಪಾಯಿ ಹಾಗೂ ಇಸ್ಟೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಶಹಾಬಾದ ನಗರ ಠಾಣೆ : ಶ್ರೀ ಪರಮೇಶ್ವರ ಗಂಡ ಭೀಮರಾಯ ಭಂಕೂರ ಉ:ಡ್ರೇವರ ಸಾ:ಮುತ್ತಗಾ ತಾ:ಚಿತ್ತಾಪುರ ರವರು ನಾನು ದಿನಾಂಕ 13/08/11 ರಂದು ದೇವನ ತೆಗನೂರ ಹತ್ತಿರ ಟ್ರಾಕ್ಟರ ನಂ ಕೆ.ಎ. 32 ಟಿ.ಎ. 2941/42 ನೇದ್ದು ನಿಂತಿದ್ದು ಹಾಗು ನಮ್ಮೂರ ಸಂತೋಷಕುಮಾರ ತಂದೆ ಸಾಬಣ್ಣಾ ಕೂಡ ನಿಂತಿದ್ದನ್ನು. ಅಷ್ಟರಲ್ಲಿ ದೇವನ ತೆಗನೂರ ಗ್ರಾಮ ಕಡೆಯಿಂದ ಲಾರಿ ನಂ ಕೆ.ಎ. 32 ಎ 9014 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ನಿಷ್ಕಳಾಜಿತನದಿಂದ ನಡೆಯಿಸಿ ಕೊಂಡು ಬಂದು ರೋಡಿನ ಪಕ್ಕದಲ್ಲಿ ನಿಂತಿದ್ದ ಟ್ರಾಕ್ಟರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸಂತೋಷಕುಮಾರ ಕೆಳಗೆ ಬಿದ್ದನು ಎಬ್ಬಿಸಿ ನೋಡಲು ಬಲಗೈಗೆ, ಬಲಗಾಲು ತೊಡೆಗೆ ಬಾರಿ ರಕ್ತಗಾಯವಾಗಿರುತ್ತದೆ ಲಾರಿ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧ್ಯ ಮಾರಾಟ:
ಶಹಾಬಾದ ನಗರ ಠಾಣೆ: ಶಹಾಬಾದ ನಗರದ ಹನುಮಾನ ನಗರ ತಾಂಡದ ರೇಲ್ವೆ ಕ್ವಾಟ್ರಸ ಹತ್ತಿರ ಮನೆ ಅನಧೀಕ್ರತವಾಗಿ ಲೈಸನ್ಸ ಇಲ್ಲದೆ ಕಲಬೆರಕೆ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ಹೋಗಿ ನೋಡಲಾಗಿ ಒಬ್ಬ ಮನುಷ್ಯ 12 ಲೀಟರದಷ್ಟು ಕಲಬೆರಕೆ ಸರಾಯಿ ಅ.ಕಿ.250/- ರೂ ಜಪ್ತಿ ಪಡಿಸಿಕೊಂಡಿದ್ದು ಸರಾಯಿ ಮಾರುತ್ತಿರುವವನು ಓಡಿ ಹೋಗಿರುತ್ತಾನೆ ಸರಾಯಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಜಾಗ್ರತೆ ಕ್ರಮ :
ಬ್ರಹ್ಮಪೂರ ಠಾಣೆ : ದಿನಾಂಕ: 14/08/11 ರಂದು ಸಾಯಂಕಾಲ ನಾನು ಮತ್ತು ರಾಜು ಸಿ.ಪಿ.ಸಿ ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ಕಾಮತ ಹೊಟೇಲ ಎದರುಗಡೆ ರಾತ್ರಿ ಅಲ್ಲಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವರನ್ನು ವಿಚಾರಿಸಲು ಅಲ್ತಾಫ ತಂದೆ ಅಬ್ದುಲ್ ಗಪೂರ ಸಾ|| ಬ್ಯಾಂಕ ಕಾಲೋನಿ ಗಂಜ ಏರಿಯಾ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಟ್ಟಿರುವದಿಲ್ಲ ಇವರನ್ನು ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಢಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment