ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಎಮ್.ಡಿ.ಸಮಿಯೋದ್ದಿನ ತಂದೆ ಎಮ್.ಡಿ.ಸಲಿಮೊದ್ದಿನ ಸಾ: ಮದಿನಾ ಕಾಲೋನಿ ಎಮ್.ಎಸ್.ಕೇ.ಮಿಲ್ ಗುಲಬರ್ಗಾ ರವರು ದಿನಾಂಕ: 17-08-2011 ರಂದು ಸಾಯಂಕಾಲ ಮದೀನಾ ಕಾಲೋನಿ ಹತ್ತಿರವಿರುವ ಪರ್ಶಿ ಅಡ್ಡಾ ಎದುರುಗಡೆ ಅಟೋರೀಕ್ಷಾ ನಂ: ಕೆಎ 32 ಬಿ 3722 ನೇದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ್ ನಂ:ಕೆಎ 37 ಕೆ 3193 ನೆದ್ದಕ್ಕೆ ಡಿಕ್ಕಿ ಪಡಿಸಿ ಗಾಯಗೊಳಿಸಿ ಅಟೋರೀಕ್ಷಾ ನಿಲ್ಲಿಸದೇ ಅಟೋ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಯತ್ನ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಸಿ.ಎಸ. ಮುತ್ತಗಿ, ಅಭಿಯೋಗ ಉಪ ನಿರ್ದೇಶಕರು ಗುಲಬರ್ಗಾದಲ್ಲಿ ನಾನು ಪ್ರದಾನ ಜಿಲ್ಲಾ ಸತ್ರ ನ್ಯಾಯಾಲಯ ಗುಲಬರ್ಗಾ ಸಾರ್ವಜನಿಕ ಅಭಿಯೋಜಕರ ಪ್ರಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಇಂದು ದಿನಾಂಕ 18/8/2011 ರಂದು 2-20 ಪಿ.ಎಂ.ಕ್ಕೆ ಊಟ ಮುಗಿಸಿಕೊಂಡು ಮಿನಿ ವಿಧಾನ ಸೌಧದ ಹೊರಾಂಗಣದಲ್ಲಿನ ವಾರ್ತಾ ಇಲಾಖೆಯ ಕಛೇರಿಯ ಹತ್ತಿರ ಕೋರ್ಟ ಕಡೆಗೆ ಕಾಲ್ನಡಿಗೆಯಲ್ಲಿ ಹೋಗುತ್ತಿರುವಾಗ ಸುನೀಲ ರಾಠೋಡ ಇವನು ನನ್ನ ಇಲಾಖಾ ಜೀಪ ಚಾಲಕ ಅಂತಾ ಕೆಲಸ ಮಾಡುವ ಕಾಲಕ್ಕೆ ಸಾಕಷ್ಟು ಸಲ ಅನಧೀಕೃತವಾಗಿ ಗೈರು ಹಾಜರಾಗಿದ್ದು ನಿಯಮಾನುಸಾರವಾಗಿ ಕ್ರಮ ಕೈಕೊಂಡಿದ್ದನೆ. ಮತ್ತು ದಿನಾಂಕ 15/8/11 ರಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹೋಗಲು ಬೇಗ ಬರಲು ಚಾಲಕನಾದ ಸುನಿಲ ರಾಠೋಡನಿಗೆ ಸೂಚಿಸಿದ್ದರೂ ಬಾರದೆ ಗೈರು ಹಾಜರಾಗಿದ್ದಾನೆ. ಹಾಗು ದಿನಾಂಕ 17, 18/8/11 ರಿಂದ ದಿವಸವು ಸಹ ಈತನು ಕೆಲಸಕ್ಕೆ ಗೈರ ಹಾಜರಾಗಿದ್ದು ಈ ಎಲ್ಲ ಕಾರಣಗಳಿಂದ ಸಮಯ ಸಾದಿಸಿಕೊಂಡು ನಾನು ಒಬ್ಬನೆ ನಡೆದುಕೊಂಡು ಹೋಗುವದನ್ನು ನೋಡಿ ನನ್ನ ಹಿಂದಿನಿಂದ ಬಂದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಚಾಕುವಿನಿಂದ ಹೊಡೆದು ಬಾರಿ ರಕ್ತಗಾಯ ಮಾಡಿ ಕೊಲೆ ಮಾಡಲು ಪ್ರಯತ್ನಿಸಿ ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ: ಶ್ರೀ ದಿನೇಶಕುಮಾರ ತಂದೆ ಬಿಹಾರಿಲಾಲ ಬಿಶಕರ್ಮಾ ಸಾ|| ಶಿವಾಝಿ ನಗರ ಗುಲಬರ್ಗಾ ನಾನು ಹುಮನಾಬಾದ ರಿಂಗ ರೋಡಿನ ಅರ್.ಎಂ.ಬಜಾಜ ದಾಲ ಮಿಲ್ ನಲ್ಲಿ ಕೆಲಸ ಮಾಡಲು ಹೋಗುತ್ತಿದ್ದಾಗ ಎಂ ಎಚ 06 ಟಿ 2066 ನೇದ್ದರ ಕಾರ ಚಾಲಕ ಸೈಯದ ಮಸ್ತಾನ ಪಟೇಲ್ ಸಾ|| ಸೋನಿಯಾಗಾಂಧಿ ನಗರ ಗುಲಬರ್ಗಾ ಇತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಕೊಂಡು ಡಿಕ್ಕಿ ಪಡಿಸಿದನು, ರೋಡಿನ ಪಕ್ಕದಲ್ಲಿ ನಿಂತಿರುವ ಗಂಡ - ಹೆಂಡತಿಗೂ ಕೂಡಾ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬಕಾರಿ ಪ್ರಕರಣ :
ಗ್ರಾಮೀಣ ಠಾಣೆ: ದಿನಾಂಕ.18-08-2011 ರಂದು ಮಧ್ಯಾಹ್ನ ಶರಣ ಸಿರಸಗಿ ಮಡ್ಡಿಯಲ್ಲಿನ ಸಾಗರ ದಾಬಾ ಹತ್ತಿರ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ಹೋಗಿ ದಾಳಿ ಮಾಡಲಾಗಿ ಗುಂಡಪ್ಪಾ ತಂದೆ ಚಂದ್ರಶಾ ಪೂಜಾರಿ ಹೋಟಲ ಸಾ;ಶರಣಸಿರಸಗಿ ಮಡ್ಡಿ ಇತನನ್ನು ವಶಕ್ಕೆ ತೆಗೆದುಕೊಂಡು ಯಾವುದೇ ಲೈಸನ್ಸ ಇಲ್ಲದೆ ಅಕ್ರಮವಾಗಿ ಮಧ್ಯದ ಬಾಟಲಿಗಳು ಮಾರಾಟ ಮಾಡುತ್ತಿದ್ದು ಅವನಿಂದ ಮಧ್ಯದ ಬಾಟಲಿಗಳು ಹಾಘು ನಗದು ಹಣ 1250-/ ರೂ ಜಪ್ತಿ ಮಾಡಿಕೊಂಡಿದ್ದರಿದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment