Police Bhavan Kalaburagi

Police Bhavan Kalaburagi

Sunday, August 14, 2011

GULBARGA DIST REPORTED CRIMES

ಕಳ್ಳತನ ಪ್ರಕರಣ:

ಮಾದನ ಹಿಪ್ಪರಗಾ ಠಾಣೆ : ಶ್ರೀ ಶರಣಪ್ಪ ತಂದೆ ಸೈಬಣ್ಣ ಅಷ್ಟಗಿ ವಯಾ;50 ವರ್ಷ ಸಾ: ಸರಸಂಬಾ ರವರು ನಾನು ದಿನಾಂಕ:11/08/2011 ರಂದು ನಮ್ಮ  ಹೊಲದಲ್ಲಿನ  ಎರಟೇಲ್ ಟವರ್  ಕಾಯಲು ನನ್ನ  ಮಗ ಹೊಗಿದ್ದನು ರಾತ್ರಿ ನನ್ನ ಮಗ ರವಿಕುಮಾರನಿಗೆ ಮನೆಗೆ ಕಳಿಸಿ ಟವರ್ ಕಾಯುತ್ತಿದ್ದೆನು. ನನಗೆ ಆರಾಮ ಇಲ್ಲದ ಕಾರಣ ನಿದ್ದೆ ಹತ್ತಿ ಮಲಗಿಕೊಂಡಿದ್ದು ಬೆಳಿಗ್ಗೆ ಎದ್ದು ನೋಡಲಾಗಿ ಎರಟೆಲ್ ಟವರ್ ಕೇಬಲ್ ವೈರ್ ಅಂದಾಜು 300 ಮೀಟರ ಅ:ಕಿ: 24000 ರೂಪಾಯಿಗಳದ್ದು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೇಗವಾಗಿ ವಾಹನ ಚಲಾಯಿದಕ್ಕೆ ಗುನ್ನೆ ದಾಖಲು :

ದೇವಲ ಗಾಣಗಾಪೂರ  ಠಾಣೆ: ದಿನಾಂಕ: 14-08-2011 ರಂದು ಬೆಳಿಗ್ಗೆ ಲಕ್ಷ್ಮಣ ತಂದೆ ಕಲ್ಲಪ್ಪಾ ಸಾ|| ಕಲ್ಲಹಳ್ಲೀ ರವರು ದೇವಲ ಗಾಣಗಾಪುರ ಗ್ರಾಮದಲ್ಲಿ ಶ್ರೀ ಸಾಯಿ ದತ್ತಲಾಡ್ಜ ಹತ್ತಿರ ಎದುರು ರೊಡಿನ ಮೇಲೆ  ಮ್ಯಾಕ್ಸಿ ಕ್ಯಾಬ ನಂ.ಕೆ.ಎ.28.ಎ.5476  ನೇದ್ದು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿದ್ದರಿಂದ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

No comments: