ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ : ಶ್ರೀ.ಅಂಬರಾಯ ತಂದೆ ಬಸವರಾಜ ಅಂತಪನಾಳ ಸಾ|| ತಾಜಸುಲ್ತಾನಪೂರ ತಾ;ಜಿ;ಗುಲಬರ್ಗಾ ರವರು ನಾನು ಮತ್ತು ನನ್ನ ಅಣ್ಣ ಸಂಗಪ್ಪಾ ಮತ್ತು ಗ್ರಾಮದ ಶಿವಪ್ಪಾ ಚಿಮಟೆ ಎಲ್ಲೂ ಕೂಡಿಕೊಂಡು ದಿನಾಂಕ.20/08/11 ರಂದು ಸಾಯಂಕಾಲ ಬಂಬು ಬಜಾರದಿಂದ ಸುಲ್ತಾನಪೂರಕ್ಕೆ ಆಟೋರಿಕ್ಷಾ ನಂ.ಕೆ.ಎ 32 ಎ-2422 ನೆದ್ದರಲ್ಲಿ ಹೋಗುವಾಗ ಕಮಲನಗರ ಕಾಲೂನಿಯ ಹತ್ತಿರ ಆಟೋ ಚಾಲಕನು ಅತೀವೇಗ & ನಿಸ್ಕಾಳಜಿತನದಿಂದ ನಡೆಯಿಸಿ ಆಟೋ ಪಲ್ಟಿ ಮಾಡಿದನು ಇದರಿಂದ ನಮಗೆ ಗುಪ್ತ ಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ.20/08/11 ರಂದು ಮದ್ಯಾಹ್ನ ಸೈಯದ ಚಿಂಚೋಳಿ ರಸ್ತೆ ಖೇಮಜಿರವರ ಹೊಲದಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿದಾಗ ಅಂದರ ಬಾಹರ ಜೂಜಾಟ ಆಡುತ್ತಿರುವವರನ್ನು ಹೆಸರು ವಿಚಾರಿಸಲಾಗಿ ತುಕಾರಾಮ ತಂದೆ ಮಾಣಿಕರಾವ ದುಗಲಗುಂಡಿ ಸಾ: ಗಂಗಾನಗರ ಗುಲಬರ್ಗಾ, ಶಿವಕುಮಾರ ತಂದೆ ಬಸವರಾಜ ಪ್ಯಾಟಿ ಸಾ; ಮೇಳಕುಂದಿ ಗುಲಬರ್ಗಾ, ದಸ್ತಗಿರಿ ತಂದೆ ಮೃತುಜಾ ಸಾ: ರಾಜೀವಗಾಂಧಿ ನಗರ ಗುಲಬರ್ಗ, ಶರಣು ತಂದೆ ಜೇಮುಸಿಂಗ ಚವ್ಹಾಣ ಸಾ: ವಿಷ್ಣು ನಗರ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ಹಣ 6800/- ರೂ ಹಾಗೂ ಎರಡು ಮೋಬೈಲಗಳು ಅ, ಕಿ 2500/- ರೂ ಹಾಗೂ ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡ್ಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ.20/08/11 ರಂದು ಮದ್ಯಾಹ್ನ ಸೈಯದ ಚಿಂಚೋಳಿ ರಸ್ತೆ ಸುಬಾಷ ರಾಠೋಡ ಇವರ ಹೊಲದಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ದಾಳಿ ಮಾಡಿದ್ದು ಮಲ್ಲಿಕಾರ್ಜುನ ತಂದೆ ಬಸಣ್ಣ ನೆಲೋಗಿ ಸಾ: ರಾಜೀವ ಗಾಂಧಿ ನಗರ ಗುಲ್ಬರ್ಗಾ, ಮಲ್ಲಿಕಾರ್ಜುನ ತಂದೆ ಹಣಮಂತ ಕೋಟನೂರ ಸಾ; ರಾಜೀವ ಗಾಂಧಿ ನಗರ ಗುಲ್ಬರ್ಗಾ, ಲಕ್ಷ್ಮಿಕಾಂತ ತಂದೆ ಸಂಗಪ್ಪ ಚರಕಾರ ಸಾ: ರಾಜೀವ ಗಾಂಧಿ ನಗರ ಗುಲ್ಬರ್ಗಾ, ಶಾಂತಪ್ಪ @ ಶಾಂತು ತಂದೆ ಶ್ರೀಮಂತ ಖ್ಯಾಡ ಸಾ:ರಾಜೀವ ಗಾಂಧಿ ನಗರ ಗುಲ್ಬರ್ಗಾ ರವ ರು ಜೂಜಾಟ ಆಡುತ್ತಿದ್ದು ಇವರನ್ನು ವಶಕ್ಕೆ ತೆಗೆದುಕೊಂಡು ಇವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 850/- ರೂ ಹಾಗೂ ಎರಡು ಮೋಬೈಲಗಳು ಹಾಗೂ ಒಂದು ಮೋಟಾರ ಸೈಕಲ ಹಾಗೂ ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡ್ಡಿದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment