ಜೂಜಾಟ ಪ್ರಕರಣ :
ಸುಲೇಪೇಟ ಠಾಣೆ : ದಿನಾಂಕ: 22-08-2011 ರಂದು ಮಧ್ಯಾಹ್ನ ಗ್ರಾಮ ಬೇಟ್ಟಿ ಕುರಿತು ಪಿ.ಎಸ.ಐ ರವರು ಹೊಡೆಬಿರನಳ್ಳೀ ಹೋದಾಗ ಫಕೀರ ಕಟ್ಟೆಯ ಮೇಲೆ ಸಂಜಿವಕುಮಾರ ತಂದೆ ಹುಸನಪ್ಪಾ ಖೈತಾಪೂರ ಸಂಗಡ ಇನ್ನೂ 5 ಜನರು ಸಾ|| ಎಲ್ಲರೂ ಹೊಡೆಬಿರನಳ್ಳೀ ರವರು ಅಂದಾರ ಬಾಹರ ಜೂಜಾಟ ಆಡುತ್ತಿರುವಾಗ ಪಂಚರ ಸಮಕ್ಷಮ ಅವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ 930-00 ರೂ ಹಾಘು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ಷದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ ಪ್ರಕರಣ :
ಸೇಡಂ ಪೊಲೀಸ ಠಾಣೆ: ದಿನಾಂಕ: 22-8 -2011 ರಂದು ಸಾಯಾಂಕಾಲ ದುಗನೂರ ಗ್ರಾಮದ ಸರಕಾರಿ ಹೊಸ ಶಾಲೆಯ ಕಟ್ಟದ ಹತ್ತಿರ 1] ಜಗನಾಥ ತಂದೆ ಮಾಣಿಕಪ್ಪ ಕಾವಲ್ ಸಂಗಡ 4 ಜನರು ಸಾ|| ದುಗನೂರ ಗ್ರಾಮದವರು ಇಸ್ಪೀಟ ಆಡುತ್ತಿದ್ದಾಗ ದಾಳಿ ಅವರಿಂದ ನಗದು ಹಣ 7500 -0 ರೂ ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡನ ಕಿರುಕುಳ :
ಗ್ರಾಮೀಣ ಠಾಣೆ:
ಶ್ರೀಮತಿ ಜ್ಯೋತಿಶ್ರೀ ಗಂಡ ನಾಗಪ್ಪಾ ಭಕ್ತಂಪಳ್ಳಿ ಉ;ಕಿರಿಯ ಆರೋಗ್ಯ ಸಹಾಯಕಿ ವಿಳಾಸ; ನಾಗರಾಳ ತಾ:ಚಿಂಚೋಳಿ ಸದ್ಯ ತಾವರಗೇರ ತಾ: ಗುಲ್ಬರ್ಗಾ ರವರು ನನ್ನ ಮದುವೆಯು ನಾಗಪ್ಪಾ ಭಕ್ತಂಪಳ್ಳಿಯವರೊಂದಿಗೆ ಹಿರಿಯರ ಸಮಕ್ಷಮ ಮದುವೆಯಾಗಿದ್ದು, ಮೂರು ವಷ್ದ ಮಗನಿರುತ್ತಾನೆ ನನಗೆ ಮದುವೆಯಾದ ಮೇಲೆ ನನಗೆ ಒಂದಿಲ್ಲಾ ಒಂದು ಕಾರಣ ಕೊಟ್ಟು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೋಡುತ್ತಾ ಬಂದಿರುತ್ತಾರೆ. ಒಂದು ವರ್ಷದಿಂದ ನನ್ನ ಗಂಡ ನಾಗಪ್ಪಾ ಭಕ್ತಂಪಳ್ಳಿ ಇವರು ನೌಕರಿಯಿಂದ ಅಮಾನತ್ತಿನಲ್ಲಿದ್ದು ಮನೆಯಲ್ಲಿಯೇ ಇರುತ್ತಾರೆ. ದಿನಾಲು ಹಣ ಕೋಡು ಅಂತಾ ಪೀಡಿಸುತ್ತಿರುತ್ತಾರೆ ದಿನಾಂಕ. 21-08-2011 ರಂದು ರವಿವಾರ ಸಾಯಂಕಾಲ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡ ನಾಗಪ್ಪಾ ಇವರು ಸರಾಯಿ ಕುಡಿಯುವದಕ್ಕೆ ಖರ್ಚಿಗೆ ಹಣ ಕೊಡು ಅಂತಾ ಕೇಳಿದರು ನನ್ನ ಹತ್ತಿರ ಹಣ ಇಲ್ಲಾ ಅಂತಾ ಅಂದಿದಕ್ಕೆ ಅವ್ಯಾಚವಾಗಿ ಬೈದು ಹೊಡೆಬಡೆ ಮಾಡಿ ಮಾಡಿರುತ್ತರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment