Police Bhavan Kalaburagi

Police Bhavan Kalaburagi

Thursday, August 25, 2011

GULBARGA DIST REPORTED CRIMES

ಅಪಘಾತ ಪ್ರಕರಣ :

ಸಂಚಾರಿ ಪೊಲೀಸ್ ಠಾಣೆ : ರೂಪಸಿಂಗ್ ತಂದೆ ದೇವಜೀ ಚವಾಣ ಸಾ: ಆರ್.ಟಿ.ಓ ಕ್ರಾಸ್ ಸೇಡಂ ರೋಡ ಗುಲಬರ್ಗಾ ರವರು ನಾನು ನನ್ನ ಅಳಿಯ ಸಂತೋಷ ಇಬ್ಬರು ಕೂಡಿಕೊಂಡು ಗಂಜ ರೋಡಿಗೆ ಇರುವ ಸುಜುಕಿ ಶೋ ರೂಮ ಮುಂದೆ ನಡೆದುಕೊಂಡು ಹೋಗುವಾಗ ಹುಮ್ನಾಬಾದ ರಿಂಗ್ ರೋಡ ಕಡೆಯಿಂದ ಮೋಟಾರ ಸೈಕಲ್ ನಂ:ಕೆಎ.32- ವಾಯ್ 7716 ನೇದ್ದರ ಸವಾರ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯಗೊಳಿಸಿ ವಾಹನ ಸಮೇತ ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ಕ್ರಮ :

ಕಮಲಾಪೂರ ಠಾಣೆ : ಇಂದು ದಿನಾಂಕ: 24/08/2011 ರಂದು ಸಾಯಂಕಾಲ ಸುಮಾರಿಗೆ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಠಾಣೆ ಗುನ್ನೆ ನಂ. 104/2011 ನೇದ್ದರಲ್ಲಿ ತನಿಖೆ ಮುಗಿಸಿಕೊಂಡು ಮರಳಿ ಕಮಲಾಪೂರಕ್ಕೆ ಬರುತ್ತಿರುವಾಗ ಕಮಲಾಪೂರ ಗ್ರಾಮದ ಓಕಳಿ ಕ್ರಾಸ ಹತ್ತಿರ  ಸಾರ್ವಜನಿಕ ರಸ್ತೆಯ ಮೇಲೆ ಚಂದ್ರಕಾಂತ ತಂದೆ ಬಾವುಸಿಂಗ್ ರಾಠೋಡ , ಬಸವರಾಜ ತಂದೆ ಧನಸಿಂಗ್ ರಾಠೋಡ್, ಪ್ರೇಮಸಿಂಗ್ ತಂದೆ ಟೀಕು ರಾಠೋಡ್ ಸಾ|| ಎಲ್ಲರೂ ಕಮಲಾಪೂರ ದೇವಲಾ ತಾಂಡಾ ಇವರು ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯುತ್ತಾ  ಚಿರಾಡುವುದು ಹೆದರಿಸುವುದು ಮಾಡುತ್ತಾ ಸಾರ್ವಜನಿಕ ಶಾಂತತೆಗೆ ಭಂಗ ತರುತ್ತಿದ್ದಾಗ, ಇವರನ್ನು ಹೀಗೇಯೇ ಬಿಟ್ಟಲ್ಲಿ ಮುಂದೆ ಯಾವುದಾದರು ಸಂಜ್ಞೆಯ ಅಪರಾಧ ಮಾಡಬಹುದು ಅಂತಾ ಮುಂಜಾಗ್ರತವಾಗಿ ಕ್ರಮ ಕೈಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಗ್ರಾಮೀಣ ಠಾಣೆ: ಶ್ರೀ ರಾಜಶೇಖರ ತಂದೆ ಗುಂಡಪ್ಪ ಬಿರಾದಾರ ಸಾ: ಬಬಲಾದ ಮಠದ ಪಕ್ಕದಲ್ಲಿ ಭವಾನಿ ನಗರ ಗುಲಬರ್ಗಾ ರವರು ನನ್ನ ಮಗ ಕುಮಾರ ಇತನಿಗೆ ಮುಸ್ಲಿಂ ಸಂಘಕ್ಕೆ ಹೋಗಿ ಕಾಯಿ ಪಲ್ಲೆ ಖರೀದಿ ಮಾಡಿಕೊಂಡು ಬಾ ಅಂತಾ ಹೇಳಲು ನನ್ನ ಮಗ ತನ್ನ ಸೈಕಲ ತೆಗೆದುಕೊಂಡು ಕಾಯಿ ಪಲ್ಲೆ ತರಲು ಮನೆಯಿಂದ ಹೋದನು. ನಮ್ಮ ಪೇಪರನಲ್ಲಿ ಬಿಲ್ಲ ಕಲೆಕ್ಟರ ಅಂತಾ ಕೆಲಸ ಮಾಡುತ್ತಿದ್ದ ಕರುಣೇಶ ಈತನು ಜೋತೆ ಲಂಗರ ಹನುಮಾನ ಗುಡಿ ರಿಂಗ ರೋಡ ಕ್ರಾಸಿನ ಮೇಲೆ ರಸ್ತೆ ಬದಿಯಿಂದ ಹೊರಟ ಕುಮಾರ ಇತನಿಗೆ ಎದುರುನಿಂದ ಹಿರೋ ಹೊಂಡಾ ಮೋಟಾರ ಸೈಕಲ ಕೆಎ 32 ಎಚ 4445 ನೇದ್ದರ ಚಾಲಕ ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದು ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿರಕುಳ ಪ್ರಕರಣ :
ಗ್ರಾಮೀಣ ಠಾಣೆ:
ಶ್ರೀಮತಿ ಮಹಾದೇವಿ ಗಂಡ ಕಲ್ಯಾಣಿ ನೇಲ್ಲೂರ ಸಾ: ಕಪನೂರ ತಾ: ಗುಲಬರ್ಗಾ ರವರು
ನಾನು ದಿನಾಂಕ 24-8-11 ರಂದು ಸಾಯಂಕಾಲ ತಾಯಿಯ ಮನೆಯ ಅಂಗಳದಲ್ಲಿ ಮಾತನಾಡುತ್ತಾ ನನ್ನ ಮಗಳೊಂದಿಗೆ ಕುಳಿತಿರುವಾಗ ನನ್ನ ಗಂಡ ಕಲ್ಯಾಣೀ ಮತ್ತು ಅತ್ತೆ ನೀಲಮ್ಮ ಇವರು ಬಂದು ನನ್ನ ತಾಯಿ ಹೆಳಿದಂತೆ ಕೇಳು ಇಲ್ಲದಿದ್ದರೆ ನಿನ್ನನ್ನು ಸುಮ್ನನೆ ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: