ಹಲ್ಲೆ ಪ್ರಕರಣ :
ಆಳಂದ ಪೊಲೀಸ ಠಾಣೆ: ಧೂಳಪ್ಪ ತಂದೆ ಶಾಲು ಸಾ|| ಆಳಂದ ಕಮಸೂರ ನಾಯಕ ತಾಂಡ ನಾನು ನಮ್ಮ ತಾಂಡದವನಾದ ಶಿವರಾಜ ಇತನಿಗೆ 8 ದಿನಗಳ ಹಿಂದೆ 100 ರೂ ಸಾಲ ಕೊಟ್ಟಿದೆ ಶಿವರಾಜ ಮತ್ತು ಆತನ ತಮ್ಮ ನಮ್ಮ ಮನೆಯ ಮುಂದೆ ಹೋಗುತ್ತಿರುವಾಗ ಸಾಲ ತೆಗೆದುಕೊಂಡಿರುವ ಹಣ ವಾಪಸ ಕೋಡು ಅಂತಾ ಕೇಳಿದ್ದಕ್ಕೆ ಶಿವರಾಜ ಇತನು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಕಿವಿಗೆ ರಕ್ತಗಾಯ ಪಡಿಸಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಪೊಲೀಸ ಠಾಣೆ : ಶ್ರೀ ಪುಷ್ಪರಾಜ ತಂದೆ ಕರಬಸಪ್ಪಾ ಪಾಟೀಲ ಸಾಃ ಡೊಂಗರಗಾಂವತಾ;ಜಿ; ಗುಲಬರ್ಗಾ ರವರು ನಾನು ಮತ್ತು ಸಂತೋಷ ಇತನು ಮರಗುತ್ತಿ ಕ್ರಾಸಿನಲ್ಲಿ ಚಹಾ ಕುಡಿದು ಮಾತನಾಡುತ್ತಾ ಕುಳಿತುಕೊಂಡಾಗ ಸಾಯಂಕಾಲ ಸುಮಾರಿಗೆ ಹುಮನಾಬಾದ ಕಡೆಯಿಂದ ಲಾರಿ ನಂ. ಕೆಎ:16-8472 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ರೋಡಿನ ಎಡಗಡೆ ತಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಪಡಿಸಿದನು. ಲಾರಿ ಚಲಾಯಿಸುತ್ತಿದ್ದ ಚಾಲಕನಿಗೆ ಹೊರಗೆ ತೆಗೆದು ವಿಚಾರಿಸಲಾಗಿ, ತನ್ನ ಹೆಸರು ವೇಣುಕುಮಾರ ತಂದೆ ಮೂರ್ತಿ ಸಾಃ ಮಾಡಿಯಾಳ ತಾಃ ಅರಸಿಕೇರಾ ಜಿಃಹಾಸನ ಅಂತಾ ತಿಳಿಸಿದನು. ಈತನಿಗೆ ಟೊಂಕಕ್ಕೆ, ಬೆನ್ನಿಗೆ, ತಲೆಗೆ ಒಳಪೆಟ್ಟಾಗಿ ಗುಪ್ತಗಾಯ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು. ಅಪಘಾತದಲ್ಲಿ ಲಾರಿ ಜಖಂಗೊಂಡು ಹಾನಿಯಾಗಿದ್ದು ಅದೆ. ಗಾಯ ಹೊಂದಿದ ಲಾರಿ ಚಾಲಕನಿಗೆ ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಗುಲಬರ್ಗಾಕ್ಕೆ ಕೊಟ್ಟು ಕಳುಹಿಸಿ ಕೊಟ್ಟಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ:
ಶ್ರೀ ವಿಜಯಕುಮಾರ ತಂದೆ ಬಸವರಾಜ ನಿಂಬಾಳ ಸಾ|| ಉಪಳಾಂವ ತಾ|| ಗುಲಬರ್ಗಾ ರವರು ನಾನು ಊಟ ತರುವ ಕುರಿತು ಬೇಲೂರ ಕ್ರಾಸಿಗೆ ಟಂಟಂ ಕೆ.ಎ.32 9768 ನೇದ್ದರಲ್ಲಿ ಕುಳಿತು ಹೋಗುವಾಗ ಹಿಂದಿನಿಂದ ಕೆ.ಎ.32 ಬಿ.1673 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೋಡೆದನು ಇದರಿಂದ ಟಂಟಂ ಪಲ್ಟಿಯಾಗಿ ಬಿದಿದ್ದು ಅದರಲ್ಲಿಯ ಎಲ್ಲರಿಗೆ ಪೆಟ್ಟಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
No comments:
Post a Comment