ಕಳ್ಳತನ ಪ್ರಕರಣ:
ಸ್ಟೇಶನ ಬಜಾರ ಠಾಣೆ : ಶ್ರೀ. ಪಿ.ಕೆ. ಹರವಾಳಕರ್ ಸಾ|| ಎನ.ಜಿ.ಓ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 29.06.2011 ರಂದು ಮಧ್ಯಾನ 1400 ಗಂಟೆಯಿಂದ 1600 ಗಂಟೆ ಅವಧಿಯಲ್ಲಿ ನಮ್ಮ ಮನೆಯ ಕೃಷ್ಣಾ ಕುಂಜ ಪ್ಲಾಟ ನಂ 5/1 ನೇದ್ದರಲ್ಲಿ ಸ್ಕೂಟಿ ನಂ ಕೆ ಎ 32 ಎಲ್. 3378 ನೇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಪ್ರಕರಣ:
ಅಶೋಕ ನಗರ ಠಾಣೆ : ಶ್ರೀ ಅಪ್ಪಾರಾಯ ತಂದೆ ಗುರುಸಿದ್ದ ಸಾ: ಆಳಂದ ಚೆಕ್ಕಪೋಸ್ಟ ರವರು ನಾನು ದಿನಾಂಕ 01/08/2011 ರಂದು ರಾತ್ರಿ 9 ಗಂಟೆಗೆ ಸಾಯಿ ಶಿವಶಕ್ತಿ ಪೈನಾನ್ಸದಿಂದ ಕೆಳಗಡೆ ಇಳಿದು ಬರುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಅಂದಾಜು ಸುಮಾರು 25 ರಿಂದ 30 ವರ್ಷ ವಯಸ್ಸಿನವರು ನನಗೆ ಚಾಕುವಿನಿಂದ ಹೊಡೆದು ಗಾಯಗೊಳಿಸಿ ನನ್ನಲಿದ್ದ ಒಟ್ಟು 7 ರಿಂದ 8 ಸಾವಿರ ಬ್ಯಾಗನ್ನು ಕಸಿದುಕೊಂಡು ಓಡಿ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ:
ಚಿಂಚೋಳಿ ಪೊಲೀಸ ಠಾಣೆ: ಶ್ರೀಮತಿ ಸೇವಂತಾಬಾಯಿ ಗಂಡ ಸುರೇಶ ರಾಠೋಡ ಸಾ: ಇದ್ದಲ್ ಮೂಕತಾಂಡಾ ರವರು ನನ್ನ ಗಂಡನಾದ ಸುರೇಶ ರಾಠೋಡನಿಗು ನಮ್ಮ ಓಣಿಯ ಸರಸ್ವತಿ ಗಂಡ ಚಿಂಯ್ಯಾ @ ಕುಮಾರಸಿಂಗ್ ಎಂಬೂವವಳಿಗೂ ಅನೈತಿಕ ಸಂಬಂದವಿತ್ತು. ಆಗ ನಾನು ಅವರಿಬ್ಬರಿಗೂ ಬುದ್ದಿವಾದ ಹೇಳಿದ ಮೇಲೆ ಇಬ್ಬರೂ ಪ್ರತ್ಯೆಕವಾಗಿ ಅಂತಾ ಗೋಜಿಗೆ ಮತ್ತೆ ಹೋಗಿರಲಿಲ್ಲಾ ದಿನಾಂಕ: 02-08-2011 ರಂದು ಮದ್ಯಾಹ್ನ ಸುಮಾರಿಗೆ ಧನಕರುಗಳಿಗೆ ಉಲ್ಲು ತರಲೆಂದು ನಮ್ಮ ಓಣಿಯವರೆಯಾದ ತಾವರೂ ನಾಯಕ ಹೋಲಕ್ಕೆ ಹೋಗಿದ್ದೆನು ನಾನು ಹುಲ್ಲು ಮಾಡಿತ್ತಿರುವಾಗ ನನ್ನ ಗಂಡನಾದ ಸುರೇಶ ರಾಠೋಡ ಮತ್ತು ಸರಸ್ವತಿ ಗಂಡ ಚಿಂಯ್ಯಾ @ ಕುಮಾರಸಿಂಗ್ ಇಬ್ಬರೂ ಮಾತನಾಡುವುದನ್ನು ನೋಡಿ ಅವರಲ್ಲಿಗೆ ಹೋಗಿ ಅವರಿಗೆ ಎನು ಮಾತನಾಡುತ್ತಿರುವಿರಿ ಅಂತಾ ಕೇಳಿದ್ದಕ್ಕೆ ಸರಸ್ವತಿಯು ಅವಾಚ್ಯವಾಗಿ ಬೈದು ಹೊಡೆದು ಗುಪ್ತ ಗಾಯ ಪಡಿಸಿದಳು ಆಗ ಅಲ್ಲಿಯೇ ಇದ್ದ ನನ್ನ ಗಂಡನೂ ಜಗಳ ಬಿಡುಸುತ್ತಿದ್ದನು. ಅಲ್ಲಯೇ ಬಾಜು ಹೋಲದಲ್ಲಿದ್ದ ಸರಸ್ವತಿಯ ಗಂಡನು ಬಂದು ಕಟ್ಟಿಗೆಯಿಂದ ನನ್ನ ಹಣೆಯ ಮೆಲೆ ಹೊಡೆದು ರಕ್ತ ಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ:
ಮಾಡಬೂಳ ಠಾಣೆ: ಬಸವರಾಜ ತಂದೆ ಹಣಮಂತರಾವ್ ಬಿರಾದರ ಸಾ|| ಸಂಗಾವಿ ರವರು ನಾನು ನನ್ನ ಮನೆಯ ಮುಂದೆ ಹಾಸಿಸುವದಕ್ಕೆ ಪರ್ಸಿ ತಂದು ಇಟ್ಟಿದ್ದು. ಇಂದು ಸಂಜೆ 6.30 ಗಂಟೆ ಸುಮಾರಿಗೆ ಫಿರ್ಯಾದಿ ಮನೆಯಲ್ಲಿರುವಾಗ ಸೈಯದ ಪಟೇಲ್ ತಂದೆ ವಜೀರ ಪಟೇಲ್ ಮತ್ತು ಇನ್ನೊಬ್ಬ ಸಾ:ಇಬ್ಬರು ಸಂಗಾವಿ ಗ್ರಾಮ, ತಾ:ಚಿತ್ತಾಪೂರ ರವರು ಬಂದು ಫರ್ಸಿ ಕಲ್ಲು ತೆಗೆದುಕೊಂಡು ಹೋಗುವಾಗ ಯ್ಯಾಕೆ ನಮ್ಮ ಫರ್ಸಿಗಳು ತೆಗೆದುಕೊಂಡು ಹೋಗುತ್ತಿರಿ ಅಂತ ಕೇಳಿದ್ದಕ್ಕೆ ಅವಾಚ್ಯವಾಗಿ ಬೈದು ಕೈಯಿಂದ ಹಾಗೂ ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ: ಶ್ರೀ ಮಲ್ಲಿಕಾರ್ಜುನ ತಂದೆ ರುಕ್ಕಯ್ಯ ತಾಂಡೂರಕರ ಸಾ:ಭೋವಿ ಗಲ್ಲಿ ಗುಲಬರ್ಗಾ ರವರು ನಾನು ದಿನಾಂಕ 4-8-11ರಂದು ನನ್ನ ವೈಯಕ್ತಿಕ ಕೆಲಸ ಕುರಿತು ಹೊಂಡಾ ಆಕ್ಷೀವ್ ಕೆಎ 32 ಅರ್ 6608 ಮೇಲೆ ಕುಳಿತು ಆಳಂದ ಚೆಕ್ಕ ಪೋಸ್ಟ ಹತ್ತಿರ ಹೋಗಿ ಕೆಲಸ ಮುಗಿಸಿ ಕೊಂಡು ಆಳಂದ ಚೆಕ್ಕ ಪೋಸ್ಟದಿಂದ ಮನೆಗೆ ಬರುತ್ತಿರುವಾಗ ಕಾಕಡೆ ಚೌಕ ರಿಂಗ ರೋಡ ಸರ್ಕಲದಲ್ಲಿ ಹಿಂದಿನಿಂದ ಮೋಟಾರ ಸೈಕಲ ನಂ ಕೆಎ 32 ಇ 1804 ನೇದ್ದರ ಸವಾರ ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದು ಡಿಕ್ಕಿ ಹೊಡೆದು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment