Police Bhavan Kalaburagi

Police Bhavan Kalaburagi

Monday, August 8, 2011

GULBARGA DISTRICT REPORTED CRIMES

ಗಂಡ ಬಿಸಿ ಹಣ ತುಂಬಲಾರದಕ್ಕೆ ತನ್ನ 3 ವರ್ಷದ ಮಗುವಿಗೆ ವಿಷ ಉಣಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವ ಗೃಹಿಣೆ :

ಫರಹತಾಬಾದ ಠಾಣೆ: ಮೇಳಕುಂದಾ (ಕೆ)  ಗ್ರಾಮದಲ್ಲಿ ಗಲಾಟೆಯಾಗಿ ಟಿ.ವಿ ತಗೆದುಕೊಂಡು ಹೋಗಿರುತ್ತಾರೆ ಅಂತಾ ಮಾಹಿತಿ ಬಂದ ಠಾಣೆಯ ಪಿಸಿ ಅಜೇಯಸಿಂಗ್  ರವರಿಗೆ ಕರ್ತವ್ಯಕ್ಕೆ ನೇಮಕ ಮಾಡಿ ಕಳುಹಿಸಿದ್ದು, ಪಿಸಿ ಅಜಯಸಿಂಗ್ ರವರು ಸದರಿ ಗ್ರಾಮಕ್ಕೆ ಬೇಟ್ಟಿ ನೀಡಿದಾಗ ಮಾಹಿತಿ ತಿಳಿದಿದ್ದನೆಂದರೆ,  ಅದೆ ಗ್ರಾಮದ ಸಂತೋಷ ತಂದೆ ಬಸವರಾಜ ಜಾಪೂರ ಹಾಗೂ ಇತರರು ಕೂಡಿ ಚೆನ್ನಮ್ಮ ಗಂಡ ಚಂದ್ರಕಾಂತ ಪಟ್ಟಣದವರ ಇವರ ಮನೆಗೆ ದಿನಾಂಕ: 5-8-2011 ರಂದು ಮಧ್ಯಾಹ್ನ ಹೋಗಿ ನಿನ್ನ ಗಂಡ 2-3 ತಿಂಗಳ ಬಿ.ಸಿ ಹಣ ಕಟ್ಟಿರುವುದಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಬಿ.ಸಿ ಹಣ ಕಟ್ಟಲಾರದಕ್ಕೆ ಮನೆಯಲ್ಲಿದ್ದ ಟಿ.ವಿ ಯನ್ನು ತಗೆದುಕೊಂಡು ಹೋಗಿರುತ್ತಾರೆ,   ಚೆನ್ನಮ್ಮ ಇವಳು ನಮ್ಮ ಮನೆಯ ಮರ್ಯಾದೆ ಹೊಯಿತು ಅಂತಾ ತಿಳಿದು ಅಂದೆ ರಾತ್ರಿ  ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವನೆ ಮಾಡಿ ಆಕೆಯ ಮಗಳಾದ 3 ವರ್ಷದ ಭವಾನಿಗೂ ಸಹ ವಿಷ ಕುಡಿಸಿದ್ದರಿಂದ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೇ ಮಗು ಭವಾನಿ ಮೃತ ಪಟ್ಟಿರುತ್ತದೆ ಹಾಗು ಚೆನ್ನಮ್ಮ ಇವಳು ಗರ್ಬಿಣಿ ಇದ್ದ ಪ್ರಯುಕ್ತ ಹೊಟ್ಟೆಯಲ್ಲಿದ್ದ ಮಗುವಿಗೆ ವಿಷದ ಪರಿಣಾಮ ಬೀರಿ ದಿನಾಂಕ: 6-8-2011 ರಂದು ಬಾಣಂತವಾದ 5 ನಿಮಿಷದಲ್ಲಿ ಹುಟ್ಟಿದ ಮಗು ಸಹ ಮೃತ ಪಟ್ಟಿದ್ದು ಇರುತ್ತದೆ. ಚೆನ್ನಮ್ಮ ಇವಳು ಮಾನಸಿಕವಾಗಿ ನೊಂದು ತನ್ನ ಮಕ್ಕಳಿಗೆ ವಿಷ ಸೇವಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಸಿರುತ್ತಾಳೆ ಹಾಗು ಈ ಘಟನೆಗೆ ಸಂತೋಷ ತಂದೆ ಬಸವರಾಜ ಹಾಗು ಇತತರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಪಿಸಿ ಅಜೆಯಸಿಂಗ್ ರವರು ನೀಡಿದ ವರದಿಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಫಘಾತ ಪ್ರಕರಣ :

ಸಂಚಾರಿ ಪೊಲೀಸ್ ಠಾಣೆ : ಮಲ್ಲಪ್ಪಾ ತಂದೆ ಹಣಮಂತ ವಾಲಿಕಾರ ಸಾಃ ಆಳಂದ ರವರು ನಾನು ನನ್ನ ಮಗ ಮಗ ವೆಂಕಟೇಶ ಇಬ್ಬರು ದಿನಾಂಕ 04-08-2011 ರಂದು ಸಾಯಂಕಾಲ್ ಶಹಬಜಾರ ನಾಕಾದ ಹತ್ತಿರ ರೋಡಿನ ಪಕ್ಕದಲ್ಲಿ ನಿಂತುಕೊಂಡಾಗ ಅಟೋರಿಕ್ಷಾ ನಂ ಕೆ.ಎ 32 ಬಿ 0063 ನೇದ್ದರ ಚಾಲಕನು ತನ್ನ ಅಟೋರಿಕ್ಷಾ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಗಾಯಗೊಳಸಿ ವಾಹನ ಸಮೇತ ಓಡಿ ಹೋಗಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಫಘಾತ ಪ್ರಕರಣ :

ಸಂಚಾರಿ ಪೊಲೀಸ್ ಠಾಣೆ : ಅಲಮಾಸ್ ತಂದೆ ಎಮ್.ಡಿ. ಇಸಮಿಯಾನ್ ಸಾಃ ನೋರಾನಿ ಮೊಹೊಲ್ಲಾ ಗುಲಬರ್ಗಾ   ರವರು ನಾನು ನೂರಾನಿ ಮಜ್ಜಿದ್ ಹತ್ತಿರ ರೋಡಿನ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಅಟೋರಿಕ್ಷಾ ನಂ ಕೆ.ಎ 32  6569 ನೇದ್ದರ ಚಾಲಕನು ತನ್ನ ಅಟೋರಿಕ್ಷಾ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: