Police Bhavan Kalaburagi

Police Bhavan Kalaburagi

Wednesday, August 10, 2011

GULBARGA DISTRICT REPORTED CRIMES

ಹಲ್ಲೆ ಪ್ರಕರಣ:

ರಾಘವೇಂದ್ರ ನಗರ ಪೊಲೀಸ್ ಠಾಣೆ : ಶ್ರೀ ಸಂತೋಷ ತಂದೆ ರಾಮಚಂದ್ರ ಹೊಸಪೇಟ ಗುಲಬರ್ಗಾ ನಾನು ಚೌಡೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ಎದುರುಗಡೆ ಇರುವ ಕಟಿಂಗ್ ಶಾಪ್ ಹತ್ತಿರ ನಿಂತಾಗ, ದೇವು, ಸಿದ್ದು ಮತ್ತು ಸತೀಷ ಈ ಮೂರು ಜನರು ಒಟ್ಟಿಗೆ ಕೂಡಿಕೊಂಡು ಕೈಯಲ್ಲಿ ತಲಾ ಒಂದೊಂದು ಕ್ರಿಕೆಟ್ ಸ್ಟಂಪ್ ಹಿಡಿದುಕೊಂಡು ನನಗೆ ಸುತ್ತುವರೆದು, ಅವಾಚ್ಯವಾಗಿ ಬೈದು ಜಗಳ ಮಾಡಿ ಸಿದ್ದು ಹಾಗು ಸತೀಷ ಇವರು ಕೈಯಲ್ಲಿದ್ದ ಕ್ರಿಕೆಟ್ ಸ್ಟಂಪದಿಂದ ನನ್ನ ತಲೆಗೆ ಹಾಗು ಬೆನ್ನಿನ ಮೇಲೆ ಹೊಡದು ಗಾಯ ಪಡಿಸರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ :
ಶ್ರೀ.ಶಬೀರ ಷಾ ತಂದೆ ಗರೀಬಷಾ ಫಕೀರ, ಸಾ|| ಕಪನೂರ ಖಬರಸ್ತಾನ ಗುಲಬರ್ಗಾ ರವರು ನಾನು ಅಬ್ದುಲ ಕರೀಂ ಇವರ ಹತ್ತಿರ ಮಗಳ ಮದುವೆಗೋಸ್ಕರ 1,00,000/- ರೂಪಾಯಿ ಕೈ ಗಡ ಸಾಲ ತೆಗೆದುಕೊಂಡಿದ್ದು, ಸದರಿ ಹಣದ ಕಾಗದ ಪತ್ರ ಮಾಡೋಣ ಅಂತಾ ಅಬ್ದುಲ ಕರೀಂ ಇವರು ನನ್ನ ಹೆಸರಿನಲ್ಲಿ ಇದ್ದ 2 ಎಕರೆ ಜಮೀನು ತನ್ನ ಹೆಸರಿಗೆ ಮಾಡಿಕೊಂಡು ಮಹೆಬೂಬ ಎನ್ನುವವನಿಗೆ ಸಾಕ್ಷಿಯನ್ನಾಗಿ ಮಾಡಿದ್ದು, ಈ ಬಗ್ಗೆ ನಮಗೆ ಗೊತ್ತಾದಾಗ ತಹಶೀಲ ಕಾರ್ಯಾಲಯದಲ್ಲಿ ತಕರಾರು ಹಾಕಿದ್ದು, ಈ ತಕರಾರು ಬಗ್ಗೆ ವಿಚಾರಣೆ ಗೊಸ್ಕರ ದಿ: 09/08/2011 ರಂದು ಸಾಯಂಕಾಲ ತಹಶೀಲ ಕಾರ್ಯಾಲಯಕ್ಕೆ ಬಂದು ಹೊರಗಡೆ ಆವರಣದಲ್ಲಿ ನಿಂತಾಗ ಆಬ್ದುಲ ಕರಿಂ, ಮಹೆಬೂಬ, ಸಲೀಂ ಸಾ|| ಗುಲಬರ್ಗಾರವರು ಜಾಗೆಯ ಖರೀದಿ ಸಂಬಂಧ ಜಗಳ ತೆಗೆದು ನನಗೆ ಮತ್ತು ನನ್ನ ತಮ್ಮ ಜೀಲಾನಿ ಷಾ ಖಾಸಿಂ ಷಾ ಮತ್ತು ನಮ್ಮ ಮನೆಯ ಹೆಣ್ಣು ಮಕ್ಕಳು ಮೊಕ್ತಂಬಿ, ರಂಜಾನಬೀ ರವರೆಲ್ಲರಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಮಾಡಿ ಸಾಕ್ಷಿ ನಾಶ ಮಾಡಿದ ಬಗ್ಗೆ :

ಮಾಡಬೂಳ ಠಾಣೆ: ಶ್ರೀ ಹುಸೇನಿ ತಂದೆ ರೇವಣಸಿದ್ದ ಜಮಾದಾರ ಸಾ:ಪೇಠಶೀರೂರ ರವರು ನನ್ನ ತಮ್ಮನ ಹೆಂಡತಿ ನಾಗಮ್ಮ ಇವಳು ಪೇಠಶೀರೂರ ಗ್ರಾಮದ ವಿಠ್ಠಲ ತಂದೆ ನಾಗಯ್ಯಾ ಈತನೊಂದಿಗೆ ಅನೈತಿಕ ಸಂಬಂದ ಹೊಂದಿದ್ದು. ಇದರ ಬಗ್ಗೆ ನನ್ನ ತಮ್ಮ ( ಮೃತ ) ಮಹಾದೇವಪ್ಪ ಇತನು ಹೆಂಡತಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದರಿಂದ ತಮ್ಮ ಅನೈತಿಕ ಸಂಬಂದ ಚಟುವಟಿಕಿಗೆ ಅಡ್ಡಿ ಉಂಟಾಗಬಹುದೆಂದು ಭಾವಿಸಿ ವಿಠ್ಠಲ ಸರ್ವಶೇಟ್ಟಿ ಈತನ ಕುಮ್ಮಕನಿಂದ ತನ್ನ ಗಂಡನಿಗೆ ಊಟದಲ್ಲಿ ವಿಷ ಹಾಕಿ ಮೃತ ಪಡಿಸಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಪ್ರಕರಣ :
ಫರಹತಾಬಾದ ಠಾಣೆ
: ಶ್ರೀ ಶಶಿಕುಮಾರ ತಂದೆ ನಾಗಪ್ಪಾ ಆರೆಕರ ಸಾ: ಜೈಭೀಮ ನಗರ ಕಾಲೋನಿ ಅಫಜಲಪೂರ ರವರು ನಾನು ನನ್ನ ಗೆಳೆಯರೊಂದಿಗೆ ದಿನಾಂಕ: 9-8-2011 ರಂದು ಸಾಯಂಕಾಲ ಗುಲಬರ್ಗಾದಿಂದ ಅಫಜಲಪೂರಕ್ಕೆ ಮೊಟಾರ ಸೈಕಲ ಮೇಲೆ ಹೋಗುತ್ತಿದ್ದಾಗ ಅಫಜಲಪೂರ ರೋಡಿನ ಶರಣಸಿರಸಗಿ ದಾಟಿ ನಾಗ ದೇವತೆ ಗುಡಿಯ ಹತ್ತಿರ ರೋಡಿನ ಮೇಲೆ 6 ಜನ ಅಪರಿಚಿತರು ಎರಡು ಮೊಟಾರ ಸೈಕಲ ನಂಬರ ಕೆಎ 32 ಯು. 6455, ಮತ್ತು ಕೆಎ 32 ಎ 1315 ನೇದ್ದರ ಮೇಲೆ ಬಂದು ನನ್ನ ಮತ್ತು ನನ್ನ ಗೆಳೆಯನಿಂದ ಬಂಗಾರದ ಆಭರಣಗಳು ಮತ್ತು ನಗದು ಹಣ ಹಾಗು ಮೋಬಾಯಿಲ್ ಹೀಗೆ ಒಟ್ಟು 51,400=00 ರೂ. ಬೆಲೆ ಬಾಳುವದನ್ನು ಚಾಕು ತೋರಿಸಿ ಜಬರ ದಸ್ತಿಯಿಂದ ಕಿತ್ತುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: