ಮಟಕಾ ಪ್ರಕರಣ :
ದೇವಲ ಗಾಣಗಾಪೂರ
ಠಾಣೆ : ದಿನಾಂಕ; 12-08-2011 ರಂದು ಬಂದರವಾಡ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ನಾಗರಾಜ ತಂದೆ ನಿಂಗಪ್ಪ ಕೋಲ್ಕರ್ ರವರನ್ನು ವಶಕ್ಕೆ ತೆಗೆದುಕೊಂಡು ಆತನಿಂದ ನಗದು ಹಣ 310 ರೂ ಮತ್ತು ಇನ್ನಿತವುಗಳನ್ನು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಪ್ರಕರಣ :
ಆಳಂದ ಪೊಲೀಸ ಠಾಣೆ: 11/08/2011 ರಂದು ಸಾಯಂಕಾಲ ಆಳಂದ ಪಟ್ಟಣದ ಬಸ್ಸ ನಿಲ್ದಾಣದ ಎದುರುಗಡೆ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ ಪಿ.ಎಸ.ಐ ರವರು ಸಿಬ್ಬಂದಿಯವರು ದಾಳಿ ಮಾಡಿ ಮಲ್ಲಿನಾಥ ತಂದೆ ಲೋಕಪ್ಪ ಸಾ|| ಸರಸಂಬಾ ಇತನನ್ನು ವಶಕ್ಕೆ ತೆಗೆದುಕೊಂಡು ನಗದು ಹಣ 520-00 ರೂ ಮತ್ತು ಇನ್ನಿತವುಗಳನ್ನು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೊಂಬಿ ಮತ್ತು ಹಲ್ಲೆ ಪ್ರಕರಣ
ಬ್ರಹ್ಮಪೂರ ಪೊಲೀಸ್ ಠಾಣೆ : ಶ್ರೀ.ಗುರುಲಿಂಗ ತಂದೆ ದಿ:ಮಲ್ಲೇಶಪ್ಪ ಗೋಡಿ, ಸಾ|| ಬಸವನ ಗುಡಿಯ ಹತ್ತಿರ ಜಗತ ಗುಲಬರ್ಗಾ ರವರು ನಾನು ಹಾಗೂ ನನ್ನ ಗೆಳೆಯ ಶಿವಕುಮಾರ ಇಬ್ಬರೂ ಕೂಡಿ ಜಗತ ಸರ್ಕಲ ಹತ್ತಿರದ ರಾಜು ಪಾನಶಾಪ ಇವರ ಅಂಗಡಿಯ ಮುಂದೆ ಕುಳಿತ್ತಿರುವಾಗ ಅರುಣಕುಮಾರ ಖಾನಾಪೂರ ಇವರು ನನಗೆ ಫೋನ್ ಮಾಡಿ ಕಲ್ಕತ್ತಾ ಡ್ರೇಸೆಸ ಹತ್ತಿರ ಬರಲು ತಿಳಿಸಿದಾಗ ನಾನು ನನ್ನ ಗೆಳೆಯ ಶಿವಕುಮಾರನೊಂದಿಗೆ ಸುಪರ ಮಾರ್ಕೆಟ ಕಲ್ಕತ್ತಾ ಡ್ರೆಸೆಸ ಹತ್ತಿರ ಸಾಯಂಕಾಲ ಹೋಗಿದ್ದು ಅರುಣ ಕುಮಾರ ಖಾನಾಪೂರ ಈತನು ಇತರೆ 8 ಜನರೊಂದಿಗೆ ನನ್ನೊಂದಿಗೆ ಜಗಳಕ್ಕೆ ಬಿದ್ದು, ಅವಾಚ್ಯ ಶಬ್ದಗಳಿಂದ ಬೈಯುತ್ತಾ ಕುಡಿಯಲು ಹಣ ಕೇಳಿದಕ್ಕೆ ನೀನು ಇಲ್ಲ ಅಂತಾ ಹೇಳುತ್ತಿಯಾ ಅಂತಾ ಕೈಯಿಂದ ಮುಖದ ಮೇಲೆ ಮತ್ತು ಹೊಟ್ಟೆಯ ಮೇಲೆ ಹೊಡೆದಿದ್ದು, ಹಾಗು ಬಿದ್ದಿದ್ದ ಒಡೆದ ಬಾಟಲಿ ತೆಗೆದುಕೊಂಡು ನನ್ನ ಎಡಗಡೆ ಎದೆಗೆ, ಹಾಗೂ ಎಡಗೈ ಮುಂಗೈ ಕೆಳಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಹಾಗು ಅವನೊಂದಿಗೆ ಇದ್ದ ಇತರೆ 8 ಜನರು ಸಹ ಈ ಬೋಸಡಿ ಮಗನದು ಬಹಳ ಆಗಿದೆ ಇವನಿಗೆ ಹೊಡೆದು ಖಲಾಸ ಮಾಡು ಅಂತಾ ಪ್ರಚೋದನೆ ಮಾಡುತ್ತಿದ್ದರು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಚಾಂದಪಾಶಾ ತಂದೆ ಕಾಶೀಮಸಾಬ ಸಾ: ಕ್ರಷ್ಣಾ ಕಾಲನಿ ಗುಲಬರ್ಗಾ ರವರು ನಾನು ಮನೆಯಲ್ಲಿ ಮಲಗಿಕೊಂಡಾಗ ದಿನಾಂಕ: 12-08-2011 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ರಾಜು ನಾಟೀಕರ ಸಾ: ಕೃಷ್ಣಾ ನಗರ ಗುಲಬರ್ಗಾ ಮತ್ತು ಕಾಂತ್ಯಾ ಸಾ: ಶಹಾಬಜಾರ ಗುಲಬರ್ಗಾ ರವರು ನಾನು ನಿನಗೆ ಕೊಡಬೇಕಾದ 5000/-ರೂ. ಹಣ ನಮ್ಮ ತಾಯಿಗೆ ಮನೆತನಕ ಹೋಗಿ ಕೇಳುತ್ತೀ ಎಂದು ಬೈಯ್ಯುತ್ತಾ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಎಡಗಾಲ ಮೊಳಕಾಲ ಮೇಲೆ ಮತ್ತು ಎರಡು ಕೈಗಳ ಭುಜದ ಮೇಲೆ ಹಾಗೂ ಬಲ ಟೊಂಕದ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .
No comments:
Post a Comment