ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಠಾಣೆ : ಶ್ರೀ ರುಕ್ಮೊದ್ದಿನ ತಂದೆ ಉಸ್ಮಾನ ಸಾಬ ಗುತ್ತೆದಾರ ಸಾ|| ರೆಹಮತ ನಗರ ಗುಲಬರ್ಗಾ ರವರು ನಾನು ದಿನಾಂಕ: 03.08.2011 ರಂದು ಸಾಯಂಕಾಲಕ್ಕೆ ನಮಗೆ ಸೇರಿದ 6 ಟಿಪ್ಪರಗಳನ್ನು ಶಕ್ತಿ ಪೇಟ್ರೊ ಪಂಪನಲ್ಲಿ ನಿಲ್ಲಿಸಿದ್ದು ಮರು ದಿವಸ ಬೆಳಗ್ಗೆ ಲಾರಿಯ ಮೊದಲನೆ ಚಾಲಕ ಎಕ್ಬಾಲ ಸಿತನೂರ ಇತನು ಫೋನ ಮೂಲಕ ಕೆಎ 32 ಬಿ 1244 ಕೆಂಪು ಬಣ್ಣದು ನಿಮ್ಮ ಟಿಪ್ಪರ ಕೇಂದ್ರ ಕಾರಗೃಹ ಹಿಂದುಗಡೆ ಸಿತನೂರ ಗ್ರಾಮದ ರಸ್ತೆ ಮೇಲೆ ನಾಲ್ಕು ಕಡೆಯ ಗಾಲಿಗಳು ಯಾರೋ ಬಿಚ್ಚಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಹೋಗಿ ನೋಡಲಾಗಿ 7 ಡಿಸ್ಕ, 7 ಟೈಯರ, 1 ಬ್ಯಾಟ್ರಿ, 2 ಜಾಕ, ಮತ್ತು ಪಾನ ಸೆಟ್ ಒಟ್ಟು ಅಕಿ 2,09,5000/-ರೂ ಬೆಲೆ ಬಾಳವುಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment