Police Bhavan Kalaburagi

Police Bhavan Kalaburagi

Monday, August 8, 2011

GULBARGA DISTRICT REPORTED CRIMES

ಅಪಘಾತ ಪ್ರಕರಣ:

ಚಿಂಚೋಳಿ ಠಾಣೆ: ಶ್ರೀ.ವಿಠ್ಠಲರಾವ ತಂದೆ ಕ್ರಿಷ್ಣಪ್ಪಾ ದರವೇಶಿ ಸಾಃ ಚೋಟಿ ದರ್ಗಾ ಭಾಗವಾನಗಲ್ಲಿ ಚಿಂಚೋಳಿ  ರವರು ನಾನು ಬಜಾರ ಮುಗಿಸಿಕೊಂಡು ನನ್ನ ಮನೆಗೆ ದರ್ಗಾದ ಎದರುಗಡೆ ರೋಡಿನ ಮೇಲೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಮೊಟಾರ ಸೈಕಲ್ ಚಾಲಕನಾದ ಇಸ್ಮಾಯಿಲ ತಂದೆ ಮಹೀಬೂಬ ಪಾಶಾ ಸಾ: ಚಿಂಚೋಳಿ ಎಂಬುವವನು. ತನ್ನ ಮೊಟಾರ ಸೈಕಲ್ ನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿದರಿಂದ ರಕ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಗಿ ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ:
ಶ್ರೀ ಯಾಖುಬಖಾನ ತಂದೆ ಮಹಿಬೂಬಖಾನ ಸಾ: ಮಿಲ್ಲತ ನಗರ ಗುಲಬರ್ಗಾ ರವರು ನನಗೆ ಆಯಶ್ಯಾ ಪರವೀನ ಎಂಬ ಹೆಸರಿನ ಮಗಳಿರುತ್ತಾರೆ. ನಾವು ಮನೆಯವರೆಲ್ಲರೂ ಕೆಲಸಕ್ಕೆ ಹೋದಾಗ ಅಯಶ್ಯಾ ಪರವೀನ ಇವಳು ದಿನಾಂಕ 15-07-11 ರಂದು ಮುಂಜಾನೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಯಾರಿಗೇ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿರುತ್ತಾಳೆ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವದಿಲ್ಲ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಹುಡಗಿಯ ಚಹರೆ ಪಟ್ಟಿ ಕೆಂಪು ಮೈಬಣ್ಣ, ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾಳೆ ಹಿಂದಿ ಮತ್ತು ಕನ್ನಡ ಭಾಷೆ ಬಲ್ಲವಳಾಗಿರುತ್ತಾಳೆ, ಇವರ ಬಗ್ಗೆ ಸುಳಿವು ಸಿಕ್ಕಲಿ ಸದರಿಯವರ ತಂದೆಯವರ ಮೋಬಾಯಲ್ ನಂ: 9343240994 ಅಥವಾ ಗ್ರಾಮೀಣ ಠಾಣೆ 08472-263631 ಅಥವಾ 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.

No comments: