ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :ದಿನಾಂಕ: 13-09-2011 ರಂದು ರಾತ್ರಿ ಶ್ರೀ ಅಬ್ದುಲ ಖಾದರ ತಂದೆ ಗುಲಾಮ ಹುಸೇನ ಸಾ:ಗಾಲೀಫ ಕಾಲೋನಿ
ಎಮ್.ಎಸ್.ಕೆ.ಮಿಲ್ ಗುಲಬರ್ಗಾ ರವರು ಎನ್.ಜಿ.ಓ.ಕಾಲೋನಿಯಿಂದ ತನ್ನ ಮನೆಗೆ ಲೋನಾ ಮೊ/ಸೈಕಲ್ ನಂ:ಎಮ್.ಈ.ಪಿ.5443 ನೆದ್ದನ್ನು ಚಲಾಯಿಸಿಕೊಂಡು ಆರ್.ಪಿ.ಸರ್ಕಲ್ ದಿಂದ ರಾಮ ಮಂದೀರ ಮುಖ್ಯೆ ರಸ್ತೆಯ ಮೇಲೆ ಗೊದುತಾಯಿ ನಗರ ಬಸವ ಜ್ಯೋತಿ ಮನೆ ಎದುರುಗಡೆ ರೋಡಿನ ಮೇಲೆ ಬಂದಾಗ ಎದುರುನಿಂದ ಯಾವುದೋ ಒಂದು ಟಂಟಂ ವಾಹನದ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ವಾಹನಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಆಳಂದ ಠಾಣೆ :ಶ್ರೀಮತಿ ಸುನೀತಾ ಗಂಡ ಸುಕೇಶ ಸಿಂಗೆ ಸಾ: ಕೊರಳ್ಳಿ ಇವರಿಗೆ 2002 ರಲ್ಲಿ ಸುಕೇಶನೊಂದಿಗೆ ಮದುವೆಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ಅರ್ದ ತೋಲೆ ಬಂಗಾರ ಮನೆ ಬಳಕೆಯ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದು 6 ತಿಂಗಳವರೆಗೆ ಅತ್ತೆ ಚತುರಬಾಯಿ ಮಾವ ಶಿವರಾಯ ಗಂಡ ಸುಕೇಶ ಭಾವ ಯಲ್ಲಪ್ಪ ಮೈದುನ ಸಂಜಯ ಅತ್ತೆಯ ತಂಗಿಯಾದ ಮುಕ್ತಾಬಾಯಿ ಇವರೆಲ್ಲರು ಚನ್ನಾಗಿ ನೋಡಿಕೊಂಡಿದ್ದು ನಂತರ ಕೆಲ ದಿನಗಳಲ್ಲಿ ತವರು ಮನೆಯಿಂದ 1,00,000/- ರೂ ವರದಕ್ಷಣೆ ರೂಪದಲ್ಲಿ ತವರು ಮನೆಯಿಂದ ತೆಗೆದುಕೊಂಡು ಬಾ ನಾವು ಜೀಪ ಖರಿದಿ ಮಾಡುತ್ತೆವೆ ಅಂತಾ ಗಂಡ ಅತ್ತೆ, ಮಾವ, ಭಾವ, ಮೈದುನ,ಇವರೆಲ್ಲರು ಪಿಡಿಸುತ್ತ ಹೊಡೆಬಡೆ ಮಾಡಿ ಧೈಹಿಕವಾಗಿ ಮಾನಸಿಕವಾಗಿ ಕಿರುಕಳ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment