Police Bhavan Kalaburagi

Police Bhavan Kalaburagi

Friday, September 2, 2011

GULBARGA DIST REPORTED CRIME

ನಗರದಲ್ಲಿ ಹಲವಾರು ದರೊಡೆ, ಕೊಲೆ ಪ್ರಯತ್ನ, ಹಲ್ಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ರೌಡಿ ಛೋಟ್ಯಾ ಬಂದನ :

ಗ್ರಾಮೀಣ ಠಾಣೆ : ಶ್ರೀ. ಚಂದ್ರಶೇಖರ ಬಿ.ಪಿ. ಸರ್ಕಲ್ ಇನ್ಸಪೆಕ್ಟರ ಎಂ.ಬಿ. ನಗರ ವೃತ್ತ ಗುಲಬರ್ಗಾ ರವರು ಸರಕಾರಿ ತರ್ಫೇಯಿಂದ ಫಿರ್ಯಾದಿಯಾಗಿ ಅರ್ಜಿ ಸಲ್ಲಿಸಿದ್ದೆನೆಂದರೆ, ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಕೊಠಾರಿ ಭವನ ಮುಂದೆ ಜೇವರ್ಗಿ ಸರ್ಕಲ ಪೆಟ್ರೊಲ್ ಪಂಪ ಹತ್ತಿರ ಛೋಟ್ಯಾ ಊರ್ಫ ಪ್ರಿಯದರ್ಶನ ಸಾ: ಪಂಚಶೀಲ ನಗರ ಗುಲಬರ್ಗಾ ಮತ್ತು ಆತನ ಸಹಚರರು ಹಣ ಹಾಗೂ ಬಂಗಾರದ ಒಡವೆ ದೋಚಿಕೊಂಡು ಮತ್ತು ಒಂದು ಮೋಟಾರ ಸೈಕಲದೊಂದಿಗೆ ಪರಾರಿಯಾಗಿರುತ್ತಾರೆ ಅಂತಾ ಕಂಟ್ರೋಲ ರೂಮದಿಂದ ಮಾಹಿತಿ ಬಂದಿರುತ್ತದೆ. ಹಾಗು ಮಾನ್ಯ ಎಸ್.ಪಿ.ಸಾಹೇಬರು ದೂರವಾಣಿ ಆದೇಶದ ಮೇರೆಗೆ ನಾನು ಮತ್ತು ಪಿ.ಎಸ್.ಐ. ವಿಶ್ವವಿದ್ಯಾಲಯ ಠಾಣೆಯ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಆರೋಪಿತರನ್ನು ಪತ್ತೆ ಮಾಡಿರಿ ಅಂತಾ ಆದೇಶಸಿದ ಪ್ರಕಾರ ನಾನು ಹಾಗೂ ಪಿ.ಎಸ್.ಐ. ಪಂಡಿತ ಸಗರ ವಿಶ್ವ ವಿದ್ಯಾಲಯ ಠಾಣೆಯ ಸಿಬ್ಬಂದಿಯವರಾದ ಮನೋಹರ ಗ್ರಾಮೀಣ ಠಾಣೆ, ಮೋಹನ, ರುದ್ರಗೌಡ, ಹಾಗೂ ಅಶೋಕ ನಗರ ಠಾಣೆಯ ಬಸವರಾಜ, ರಫೀಕ ಹಾಗೂ ಎಂ.ಬಿ. ನಗರ ಠಾಣೆಯ ಪ್ರಭಾಕರ ಪಿಸಿ ರವರೊಂದಿಗೆ ಆರೋಪಿತರ ಪತ್ತೆಗಾಗಿ ಪೆಟ್ರೊಲಿಂಗ ಮಾಡುತ್ತಾ ಶರಣ ಶಿರಸಗಿ ಹತ್ತಿರ ಹೋಗಿರಬಹುದೆಂದು ಸಂಶಯ ಮೇರೆಗೆ ಹೋದಾಗ ಶರಣ ಶಿರಸಗಿ ಗ್ರಾಮದ ಹತ್ತಿರ ಸುಣ್ಣದ ಬಟ್ಟಿ ಹತ್ತಿರ ಇರುವ ಗುಂಪಾದಲ್ಲಿ ಶರಣಪ್ಪ ಸಗರ ಇತನು ಆರೋಪಿ ಛೊಟ್ಯಾ ಊರ್ಫ ಆನಂದ ಊರ್ಪ ಪ್ರಿಯದರ್ಶನ ಇತನ ಸಹಚರರನ್ನು ಆಶ್ರಯ ಕೊಟ್ಟಿದ್ದರ ಬಗ್ಗೆ ತಿಳಿದು ಬಂದಿದ್ದು ಅಲ್ಲದೆ ಆರೋಪಿತನು ಸುಲಿಗೆ ಮಾಡಿಕೊಂಡು ಬಂದ ಹೊಂಡಾ ಎಕ್ಟೀವ್ ಕೆಎ 32 ಎಕ್ಷ 8038 ನೇದ್ದು ಗುಂಪಾದ ಹೊರೆಗೆ ನಿಲ್ಲಿಸಿದ್ದನ್ನು ನೋಡಿ ಆರೋಪಿತರು ಒಳಗೆ ಗುಂಪಾದಲ್ಲಿ ಇರುವ ಬಗ್ಗೆ ಸಂಶಯಗೊಂಡು ಅವರನ್ನು ದಸ್ತಗಿರಿ ಮಾಡಲು ಹೋಗುವ ಕಾಲಕ್ಕೆ ಗುಂಪಾದಿಂದ ಛೋಟ್ಯಾ ಹಾಗೂ ಇತರೆ ಸಹಚರರು ಒಮ್ಮೇಲೆ ಹೊರೆಗೆ ಬಂದು ದಸ್ತಗಿರಿ ಮಾಡಲು ನಿಂತಿದ್ದ ನನ್ನ ಹಾಗೂ ಪಿ.ಎಸ್.ಐ. ಪಂಡಿತ ವಿಶ್ವ ವಿದ್ಯಾಲಯ ಠಾಣೆ ಮತ್ತು ಸಿಬ್ಬಂದಿಯವರ ಮೇಲೆ ಛೋಟ್ಯಾ ಹಾಗೂ ಆತನ ಸಂಗಡವಿದ್ದ 3 ಜನ ಸಹಚರರು ತಮ್ಮ ಕೈಯಲ್ಲಿದ್ದ ಹರಿತವಾದ ತಲವಾರಗಳಿಂದ ನನಗೆ ಹಾಗೂ ಪಿ.ಎಸ್.ಐ. ಪಂಡಿತ ಮತ್ತು ಮನೋಹರ ಹೆಚ.ಸಿ ಗೆ ತಲವಾರ ದಿಂದ ಹೊಡೆಯುವ ಕಾಲಕ್ಕೆ ನಾವು ಸದರಿ ಹೆಚಸಿ ಮನೋಹರ ರವರನ್ನು ರಕ್ಷಿಸಿದೆವು. ಸದರಿ ಆರೋಪಿತರು ಪುನ: ಮುಂದುವರೆದು ಛೋಟ್ಯಾ ಹಾಗೂ ಆತನ ಸಹಚರರು ನಮ್ಮ ಮೇಲೆ ದಾಳಿ ಮಾಡಲು ಬಂದಾಗ ನನ್ನ ಹಾಗೂ ಪಿ.ಎಸ್.ಐ. ಮತ್ತು ಸಿಬ್ಬಂದಿಯವರ ಆತ್ಮ ರಕ್ಷಣೆಗಾಗಿ ನನ್ನಲ್ಲಿದ್ದ ಸರ್ವಿಸ ಪಿಸ್ತೂಲದಿಂದ ಗಾಳಿಯಲ್ಲಿ ಹಾಗೂ ನೆಲದ ಕಡೆಗೆ 3 ಸುತ್ತು ಗುಂಡು ಹಾರಿಸಿದೆನು. ಆಗ ಸದರಿ ಛೋಟ್ಯಾ ಊರ್ಫ ಆನಂದ ಊರ್ಫ ಪ್ರಿಯದರ್ಶನ ಇತನು ತಪ್ಪಿಸಿಕೊಂಡು ಕತ್ತಲಲ್ಲಿ ಓಡಿ ಹೋದೆನು. ಉಳಿದ ಮೂರು ಜನ ಆರೋಪಿತರನ್ನು ಹಿಡಿದುಕೊಂಡು ಅವರ ಹೆಸರು ಹಾಗೂ ವಿಳಾಸ ವಿಚಾರಿಸಲಾಗಿ ರವಿ ತಂದೆ ಮಾರುತಿ ಗಾರನ ವಯ : 27 ವರ್ಷ ಜಾತಿ ಕಬ್ಬಲಿಗೇರ ಉ:ಗೌಂಡಿ ಕೆಲಸ ಸಾ: ಬೆಂಗಳೂರ ಹಾ:ವಸ್ತಿ ಐನಾಪೂರ ತಾ: ಚಿಂಚೋಳಿ ಸಧ್ಯ ಶರಣ ಶಿರಸಗಿ, ಯಲ್ಲಾಲಿಂಗ ತಂದೆ ಮಾರುತಿ ಅಣ್ಣಿಗೇರ ವಯ :19 ವರ್ಷ ಜಾ: ಬೇಡರ ಉ:ಸೆಂಟ್ರಿಂಗ ಕೆಲಸ ಸಾ: ಶರಣ ಶಿರಸಗಿ ತಾ:ಜಿ: ಗುಲಬರ್ಗಾ, ಸುನೀಲ ತಂದೆ ಮಲ್ಲಿಕಾರ್ಜುನ ವಯ:19 ವರ್ಷ ಜಾತಿ ಹರಿಜನ ಉ:ಗೌಂಡಿ ಕೆಲಸ ಸಾ: ಚಿಮ್ಮು ಇದಲಾಯಿ ತಾ: ಚಿಂಚೋಳಿ ಹಾ:ವ|| ಪಂಚಶೀಲ ನಗರ ಗುಲಬರ್ಗಾ ಅಂತಾ ಹೇಳಿದರು, ಸದರಿ ಅರೋಪಿತರು ಛೊಟ್ಯಾ ಊರ್ಫ ಆನಂದ ಊರ್ಫ ಪ್ರಿಯದರ್ಶನ ಗಾಯಕವಾಡ ಮತ್ತು ಆತನ ಸಹಚರರು ನಮ್ಮ ಸಿಬ್ಬಂದಿ ಜನರ ಮೇಲೆ ಹಾಗೂ ನನ್ನ ಮೇಲೆ ತಲವಾರದಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಅರೋಪಿತರನ್ನು ಮತ್ತು ತಲವಾರಗಳು, ಹಾಗೂ ಹೊಂಡಾ ಎಕ್ಟೀವ ಕೆ.ಎ.32 ಎಕ್ಸ.8038 ಮತ್ತು 3 ಮೋಬಾಯಿಲಗಳು ವರದಿಯೊಂದಿಗೆ ಹಾಜರು ಪಡಿಸಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: