Police Bhavan Kalaburagi

Police Bhavan Kalaburagi

Friday, September 2, 2011

GULBARGA DIST REPORTED CRIMES

ಹಲ್ಲೆ ಪ್ರಕರಣ :
ಕಮಲಾಪೂರ ಪೊಲೀಸ ಠಾಣೆ :
ಪುಷ್ಪರಾಜ ತಂದೆ ಕರಬಸಪ್ಪಾ ಪಾಟೀಲ ಸಾಃ ಡೊಂಗರಗಾಂವ ರವರು ನಾನು ನಿನ್ನೆ ಮಧ್ಯಾಹ್ನ ನಾನು, ನನ್ನ ಮಗ ಕುಮಾರ ಮತ್ತು ಆಳು ಮಗ ರಾಜಪ್ಪ ತಂದೆ ಜಗನ್ನಾಥ ಕಲ್ಲೂರ ನಮ್ಮ ಮನೆಯ ಮುಂದೆ ಕುಳಿತ್ತಿದ್ದಾಗ ನಮ್ಮ ಮನೆಯ ಪಕ್ಕದವರಾದ ಕಾಶಪ್ಪಾ ತಂದೆ ರಾಚಪ್ಪ ಮತ್ತು ಆತನ ಮಕ್ಕಳು ಕೂಡಿಕೊಂಡು ನಮ್ಮ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಹೆಸರು ಬೆಳೆ ತಂದು ಹಾಕಿದ್ದು ನಾನು ನನ್ನ ಮಗ ಕುಮಾರ ಇಬ್ಬರು ಕೂಡಿ ಅವರಿಗೆ ಹೆಸರು ಬೆಳೆ ಹಾಕಬೇಡ ಅಂತಾ ಹೇಳಿದಕ್ಕೆ ತಕರಾರು ಮಾಡಿರುತ್ತಾರೆ ನನ್ನ ತಮ್ಮ ಮಹೇಶ ಪಾಟೇಲ ಇತನೊಂದಿಗೆ ನಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದಾಗ ರಾತ್ರಿ ಕಾಶಪ್ಪ ತಂದೆ ರಾಚಪ್ಪಾ ಪಾಟೀಲ ಮತ್ತು ಆತನ ಮಕ್ಕಳಾದ ರಾಚಪ್ಪ ತಂದೆ ಕಾಶಪ್ಪಾ, ವಿಜಯಕುಮಾರ ತಂದೆ ಕಾಶಪ್ಪಾ ಎಲ್ಲರೂ ಕೂಡಿಕೊಂಡು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಕಮಲಾಪೂರ ಪೊಲೀಸ ಠಾಣೆ :
ಶ್ರೀ ರಾಚಪ್ಪಾ ತಂದೆ ಕಾಶಪ್ಪಾ ಪೂಲೀಸ ಪಾಟೀಲ ಸಾ:ಡೊಂಗರಗಾಂವ ತಾಃಗುಲಬರ್ಗಾ ನಾನು ನನ್ನ ತಂದೆ ಕಾಶಪ್ಪಾ ತಮ್ಮ ವಿಜಯಕುಮಾರ ಎಲ್ಲರೂ ಮನೆಯಲ್ಲಿ ಊಟ ಮಾಡುತ್ತಾ ಕುಳಿತಾಗ ಪುಷ್ಪರಾಜ ತಂದೆ ಕರಬಸಪ್ಪಾ ರವೀಂದ್ರ ತಂದೆ ಕರಬಸಪ್ಪಾ ಮಹೇಶ ತಂದೆ ಕರಬಸಪ್ಪಾ ಕುಮಾರ ತಂದೆ ಪುಷ್ಪರಾಜ ರಾಜಪ್ಪಾ ತಂದೆ ಜಗನ್ನಾಥ ಕಲ್ಲೂರ ಅಂಬ್ರೇಶ ತಂದೆ ಭೀಮಶ್ಯಾ ಪಂಡಿತ ತಂದೆ ಶರಣಪ್ಪಾ ರೇವಪ್ಪಾ ತಂದೆ ಗೌಡಪ್ಪಾ ರಾಂಪೂರೆ ರೇವಣಸಿದ್ದಪ್ಪಾ ತಂದೆ ಸಿದ್ರಾಮಪ್ಪಾ ರಾಂಪೂರೆ 1ಹೊನ್ನಪ್ಪಾ ತಂದೆ ಶರಣಪ್ಪಾ ಎಲ್ಲರೂ ಗುಂಪು ಕಟ್ಟಿಕೊಂಡು ಬಂದು ನಮ್ಮ ಮನೆಯ ಎದುರುಗಡೆ ಇರುವ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಅವಾಚ್ಯವಾಗಿ ಬೈದು ಬಡಿಗೆಯಿಂದ, ಕಬ್ಬಿಣದ ಸಲಾಯಿಕೆಯಿಂದ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 


 


 


 

No comments: