Police Bhavan Kalaburagi

Police Bhavan Kalaburagi

Monday, September 5, 2011

GULBARGA DIST REPORTED CRIMES

ಆಭರಣಗಳು ಕಳ್ಳತನ :
ಚೌಕ ಪೊಲೀಸ್ ಠಾಣೆ :
ಶ್ರೀ ಮಹೇಬೂಬ ಶಹಾ ತಂದೆ ಸಲ್ಲಾಶಹಾ ಸಾಃ ಮುಸ್ಲಿಂ ಸಂಘ ಗುಲಬರ್ಗಾ ರವರು ದಿನಾಂಕ 17.08.2011 ರಿಂದ 19.08.2011 ರ ಮಧ್ಯದಲ್ಲಿ ಬಂಗಾರದ ಆಭರಣಗಳು 1.1/2 ತೊಲೆ ಬಂಗಾರದ ನಕ್ಲೇಸ, 8 ಗ್ರಾಮ ಬಂಗಾರದ ಕಿವಿಯಲ್ಲಿಯ ಹೂಗಳು, 4 ಗ್ರಾಮ ಬಂಗಾರದ ಉಂಗುರ, 3 ಗ್ರಾಮ ಉಂಗುರು, 2 ಬಂಗಾರದ ಕಿವಿಯಲ್ಲಿಯ  ರಿಂಗ, ಹೀಗೆ ಒಟ್ಟು 60-65 ಸಾವಿರ ಮೌಲ್ಯದ ಬಂಗಾರದ ಆಭರಣಗಳು ನಮ್ಮ ವಟಾರದ 5 ಕುಟುಂಬದ ಸದಸ್ಯರಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ:
ಶ್ರೀಮತಿ ಶಕೀನಾ ಗಂಡ ಅಸ್ಫಾಕ ಶೇಕ ಸಾ: ಸೂರತ ಗುಜರಾತ ರಾಜ್ಯ ರವರು ನಾನು, ನನ್ನ ಗಂಡ ಮತ್ತು ಮಕ್ಕಳು ಕುಡಿಕೊಂಡು ದಿನಾಂಕ 4/9/11 ರಂದು ಮುಂಜಾನೆ ನಮ್ಮ ಮಾರುತಿ ಎಸ್‌ಟೀಮ್‌ ಕಾರ ನಂ ಜಿಜೆ-07 ಎ-4006 ನೇದ್ದರಲ್ಲಿ ಸೂರತ ದಿಂದ ಗುಲಬರ್ಗಾದ ಕಡೆಗ ಬರುತ್ತಿದ್ದಾಗ ಜವಳಿ ಹೊಲದ ಮುಂದೆ ಹೊರಟ ನೀರಿನ ಟ್ಯಾಂಕರ ನಂ ಕೆಎ 32 2036 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ನನ್ನ ಗಂಡನಿಗೆ ಮಕ್ಕಳಿಗೆ ಗಾಯ ಮತ್ತು ಬಾರಿ ರಕ್ತಗಾಯಗಳು ಆಗಿರುತ್ತವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ .

ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ:
ಶ್ರೀ ಮಹಾದೇವ ತಂದೆ ಶಂಕರ ಸಾಗರ ವ: 37 ವರ್ಷ ಉ: ಶಿಕ್ಷಿಕ ಸಾ: ಪೊಲೀಸ ಕ್ವಾರ್ಟಸ ಗುಲಬರ್ಗಾ ರವರು ನಾನು ಸಾಯಂಕಾಲ ಸುಮಾರಿಗೆ ನನ್ನ ಮೋಟಾರ ಸೈಲಕ ನಂ ಕೆಎ 32 ಆರ್‌ 5290 ನೇದ್ದರ ಮೇಲೆ ನನ್ನ ಅತ್ತೆ ಚಂದ್ರಭಾಗ ಗಂಡ ಲಾಗೇಶ ಇವರನ್ನು ತಾಜ ಸುಲ್ತಾನಪೂರದ ಹತ್ತಿರ ಇರುವ ಪ್ಲಾಟ ನೋಡಲು ಕೂಡಿಸಿಕೊಂಡು ಹೊರಟಾಗ ತಾಜ ಬಿಎಡ್‌ ಕಾಲೇಜ ಸಮೀಪ ಹಿಂದಿನಿಂದ ಮೋಟರ ಸೈಕಲ ನಂ ಕೆಎ 32 ಡಬ್ಲು 5866 ನೇದ್ದರ ಚಾಲಕ ಅತೀವೇಗ ದಿಂದ ನಡೆಸುತ್ತಾ ಬಂದು ನನ್ನ ಮೋಟಾರ ಸೈಕಲ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಚಂದ್ರಭಾಗ ಇವರಿಗೆ ಕೈಗೆ ಬಾರಿ ರಕ್ತಗಾಯವಾಗಿದ್ದು ಇರುತ್ತದೆ ಅಂತಾ     ದೂರು ಸಲ್ಲಿಸಿದ ಮೇರೆಗೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ .

ಅಪಘಾತ ಪ್ರಕರಣ:
ಫರಹತಾಬಾದ ಠಾಣೆ :
ಶ್ರೀ ಹಣಮಂತರಾಯ ತಂದೆ ಶಿವರಾಚಪ್ಪಾ ಹದ್ದರಿ ವಯ: 30 ವರ್ಷ ಸಾ: ವಾಗ್ದರಗಿ ತಾ: ಆಳಂದ ರವರು ನನ್ನ ಹೆಂಡತಿಯ ಅಕ್ಕನಾದ ಸಂಗೀತಾ ಮತತು ಅವಳ ಗಂಡ ಶಿವಕುಮಾರ ರವರು ಗುಲಬರ್ಗಾದನಲ್ಲಿನ ನನ್ನ ಮನೆಗೆ ಬಂದ್ದಿದ್ದು, ನಾವು ನಮ್ಮ ಮನೆಯ ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಅಂತಾ ಹೇಳಿ ನನ್ನ ಮೊಟಾರ ಸೈಕಲ ನಂ: ಕೆಎ 32 ಎಕ್ಸ್ 6155 ನೇದ್ದು ತಗೆದುಕೊಂಡು ಇಬ್ಬರು ಕೂಡಿ ಮೊಟಾರ ಸೈಕಲ ಮೇಲೆ ಹಲಕಟಾಕ್ಕೆ ಗ್ರಾಮಕ್ಕೆ ಹೋಗಿ ಮರಳಿ ದಿನಾಂಕ: 4-9-2011 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಗುಲಬರ್ಗಾಕ್ಕೆ ಬರುತ್ತಿರುವಾಗ ಎದುರುಗಡೆಯಿಂದ ಕೆ.ಎಸ್.ಆರ್.ಟಿ ಬಸ್  ಕೆಎ 33 ಎಫ್ 35 ನೇದ್ದರ ಚಾಲಕ ತನ್ನ ಬಸ್ಸ ನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲ ಕ್ಕೆ ಡಿಕ್ಕಿ ಪಡಿಸಿದ್ದರಿಂದ ಶಿವಕುಮಾರ ಹಾಗೂ ಅವನ ಹೆಂಡತಿ ಸಂಗೀತಾ ಇವರು ತಲೆ, ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದ್ದಲಿಯೇ ಮೃತ ಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: