ಕೊಲೆ ಪ್ರಕರಣ: 
ಮಾದನ ಹಿಪ್ಪರಗಾ ಠಾಣೆ : ಶ್ರೀ  ಕಲ್ಲಪ್ಪ ತಂದೆ ನಿಂಗಪ್ಪ  ಕೆರೂರ್ ವಯಾ 28 ವರ್ಷ ಉ : ಒಕ್ಕಲುತನ    ಸಾ: ಮಾದನ ಹಿಪ್ಪರಗಾ  ರವರು  ನಾನು  ನನ್ನ  ಅಣ್ಣ ಗುಂಡಪ್ಪ ಕೂಡಿ ದಿನಾಂಕ;05/09/2011 ರಂದು  ಸಾಯಂಕಾಲ 4 ಗಂಟೆ ಸುಮಾರಿಗೆ ಹೊಲಕ್ಕೆ  ಹಾಲು ಹಿಂಡಿಕೊಂಡು ಬರಲು ಹೊದೆವು  ಹಾಲು ಹಿಂಡಿದ  ನಂತರ ಅಂದಾಜು 6:30 ಸುಮಾರಿಗೆ  ನನ್ನ ಅಣ್ಣ ಸೈಕಲ್ ಮೇಲೆ ಮುಂದೆ ಮುಂದೆ ಹೊರಟನು  ನಾನು  ಹಿಂದೆ ಹಿಂದೆ  20 ರಿಂದ 30  ಮಾರು ಅಂತರದಲ್ಲಿ  ಹಿಂದೆ ಬರುತ್ತಿದ್ದೆನು.  ಅಷ್ಷರಲ್ಲಿ ಮಲ್ಕಾಜೆಪ್ಪ  ಕಲಶೇಟ್ಟಿ  ಬಂದಾರಿಯ  ಕಾಲು ರಸ್ತೆಯಲ್ಲಿ ಹೊಗುವಾಗ  ನನ್ನ ಅಣ್ಣ  ಚಿರಿದ ಸಪ್ಪಳ ಕೇಳಿಸಿತು.  ನಾನು ಎನು ಅಂತಾ  ನೊಡುವಾಗ  ಶಿವಪುತ್ರಪ್ಪ  ತನ್ನ ಕೈಯಲ್ಲಿದ್ದ ಕೊಡೆಲೆಯಿಂದ  ನನ್ನ ಅಣ್ಣನ ತಲೆಗೆ ಹೊಡೆದೆನು  ಹೊಡೆಯ ಬೇಡಿರಿ ಅಂತಾ ನಾನು ಚಿರಿದೆನು  ಅಷ್ಷರಲ್ಲಿ  ಅಲ್ಲಯೇ  ಜೊತೆಗೆ ಇದ್ದ ಮಾಳಪ್ಪ ಇವನು  ಕೂಡಾ ತನ್ನ ಕೈಯಲ್ಲಿರುವ ಕೊಡಲಿಯಿಂದ ಗುಂಡಪ್ಪನಿಗೆ  ಹೊಡೆದನು  ಆಗ ಅಲ್ಲಯೆ ಇದ್ದ  ಮಹಾದೇವ ತಂದೆ  ಶರಣಪ್ಪ, ಬೀರಪ್ಪ ತಂದೆ  ಸಿದ್ದಪ್ಪ , ಶರಣಪ್ಪ ತಂಧೆ ಬೀರಪ್ಪ  ಶಿಲಿಂಗಪ್ಪ ತಂಧೆ  ಬೀರಪ್ಪ  ಶಾಂತಪ್ಪ ತಂದೆ  ಬೀರಪ್ಪ  ಈರಣ್ಣಾ  ತಂದೆ  ಶರಣಪ್ಪ  ಬಸಪ್ಪ ತಂದೆ ಮಾಹಾದೇವ  ಸಾ|| ಎಲ್ಲರೂ ಮದಾನ ಹಿಪಪರಗಾ ಇವರೆಲ್ಲರೂ ಕೂಡಿ  ಹೊಡಿ ಸೂಳಿಮಗನಿಗೆ  ಹೊಡೆಯಿರಿ  ಮುಗಿಸಿಬಿಡರಿ ಅಂತಾ  ಚಿರಾಡುತ್ತಿದ್ದರು  ಸಮೀಪ ಬಂದರೆ  ನಿನ್ನನ್ನು ಮುಗಿಸುವದಾಗಿ  ಹೆದರಿಸಿದರು  ನಾನು  ಚಿರಾಡಿಲಿಕ್ಕೆ ಹತ್ತಿದಾಗ ನಂತರು  ಈವರೆಲ್ಲರೂ  ಒಡಿಹೊದರು  ನಂತರ  ನನ್ನಅಣ್ಣನಹತ್ತಿರ  ನೊಡಲಾಗಿ ಬಲಗಡೆ  ತಲೆಗೆ  ಕಪಾಳಕ್ಕೆ  ಬಲಗೈಹೆಬ್ಬರಳಿಗೆ  ಕುತ್ತಿಗೆಗೆ  ಹೊಡೆದು  ಕೊಲೆಮಾಡಿದ್ದು  ಇರುತ್ತದೆ.  ನಮ್ಮಅಣ್ಣ  ಬರುವ.ದಾರಿಗೆ  ಗಿಡಕಂಟಿಯ  ಮರೆಯಾಗಿ  ಅಡಗಿ ಕುಳಿತು  ಎಲ್ಲಾ ಒಂಬತ್ತು ಜನರು  ಈ  ಹಿಂದೆ  ನಮ್ಮಗೂ  ಅವರಿಗೆ   ಆದ  ಜಮಿನು ತಂಟೆ  ವಿಷಯದಿಂದ  ಹೊಡೆದು  ಕೊಲೆ ಮಾಡಿರುತ್ತಾರೆ .ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಪಘಾತ ಪ್ರಕರಣ :
ಸಂಚಾರಿ ಪೊಲೀಸ್ ಠಾಣೆ : ದೇವಿಂದ್ರಕುಮಾರ ತಂದೆ ಪರಶುರಾಮ ನಡವಿನ ಮನಿ ಸಾ: ರಾಜಾಪೂರ ಏರಿಯಾ ಶಹಾಬಜಾರ ರೋಡ ಗುಲಬರ್ಗಾ ರವರು ನಾನು ನಿನ್ನೆ ನನ್ನ ಮೋಟಾರ ಸೈಕಲ ನಂ: ಕೆಎ.32 ಡಬ್ಲ್ಯೂ 3707 ನೇದ್ದರ ಮೇಲೆ ಕುಳಿತು ಸವೇರಾ ಹೋಟೆಲ ಮುಂದೆ ಬರುತ್ತಿರುವಾಗ ಹಿಂದಿನಿಂದ ಕಾರ ನಂ : ಎಮ್.ಹೆಚ. 04 ಎ.ಪಿ 6530 ನೇದ್ದರ ಚಾಲಕ ತನ್ನ ವಾಹನ ಅತೀವೇಗ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ಮೋಟರ ಸೈಕಲಗೆ ಡಿಕ್ಕಿ ಪಡಿಸಿ ವಾಹನ ಸಮೇತ ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
				
No comments:
Post a Comment