Police Bhavan Kalaburagi

Police Bhavan Kalaburagi

Wednesday, September 7, 2011

GULBARGA DIST REPORTED CRIMES

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಹರಿಶಕುಮಾರ ತಂದೆ ಮಚ್ಛೇಂದ್ರರಾವ್ ಪೊದ್ದಾರ || ಡಿಸಿ ಆಫಿಸಿನ ಆಹಾರ ಶಾಖೆಯಲ್ಲಿ ಕಂಪ್ಯೂಟರ್ ಕೆಲಸ ಸಾ|| ಮಿನಿ ವಿಧಾನ ಸೌದ ಗುಲಬರ್ಗಾರವರು ನಾನು ಬೆಳಗ್ಗೆ 10.30 ಗಂಟೆಗೆ ಪ್ರತಿ ದಿವಸದಂತೆ ಕೆಲಸದ ನಿಮಿತ್ಯ ಮಿನಿ ವಿಧಾನ ಸೌದದಲ್ಲಿ ನನ್ನ ಹೀರೊ ಹೊಂಡಾ ಪ್ಯಾಶನ ನಂ ಕೆ.ಎ 39 ಜೆ 1981 ನಿಲ್ಲಿಸಿ ನನ್ನ ಕರ್ತವ್ಯ ಮುಗಿಸಿಕೊಂಡು ಸಾಯಂಕಾಲ 6.30 ಗಂಟೆಗೆ ಬಂದು ನೋಡಲು ನನ್ನ ವಾಹನ ಇರಲಿಲ್ಲಾ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಪ್ರಕರಣ :

ಎಂ.ಬಿ.ನಗರ ಪೊಲೀಸ್ ಠಾಣೆ. ಶ್ರೀ ಅನುಸೂಯ ಗಂಡ ಧರ್ಮವೀರ ವಣಕೆ ಸಾ; ಖಂಡ್ರೆ ಗಲ್ಲಿ ಬಾಲ್ಕಿ ತಾಃಜಿಃ ಬೀದರ ರವರು ನಾನು ಮತ್ತು ನನ್ನ ಅಕ್ಕ ಸುಜಾತಾ ಇಬ್ಬರೂ ಕೂಡಿಕೊಂಡು ತಮ್ಮ ತಂಗಿ ಸಿದ್ದೇಶ್ವರಿ ಇವಳನ್ನು ಮಾತನಾಡಲು ನಡೆದುಕೊಂಡು ಹೋಗುತ್ತಿರುವಾಗ ಶ್ರೀ ಶಿವಶರಣಪ್ಪ ಸಾವಳಗಿ ಇವರ ಮನೆಯ ಮುಂದೆ ಹೋಗುವ ರಸ್ತೆಯಲ್ಲಿ ಹಿಂದಿನಿಂದ ಇಬ್ಬರೂ ಪಲ್ಸರ್ ಮೋಟಾರ ಸೈಕಲ ಚಲಾಯಿಸಿಕೊಂಡು ಬಂದು ನನ್ನ ಕೊರಳಲ್ಲಿದ್ದ 4 ತೊಲೆ ಬಂಗಾರದ ಮಂಗಳ ಸೂತ್ರ ಅಃಕಿಃ 1,15,000/- ರೂ. ನೇದ್ದನ್ನು ಹರಿದುಕೊಂಡು ವೇಗವಾಗಿ ಶಿವಮಂದಿರದ ಕಡೆಗೆ ಹೋದರು. ಕತ್ತಲಲ್ಲಿ ಮೋಟಾರ ಸೈಕಲ ನಂಬರ ನೋಡಲಿಲ್ಲ. ಅದರಲ್ಲಿ ಒಬ್ಬನು ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದು ಇಬ್ಬರೂ ಅಂದಾಜು 22-25 ವಯಸ್ಸಿನವರು ಇರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು.ಡಿ.ಅರ್. ಪ್ರಕರಣ :

ಮಾದನ ಹಿಪ್ಪರಗಾ ಠಾಣೆ : ಶ್ರೀಮತಿ ಸಹನಾ ಗಂಡ ಜೂಜು ಕಾಳೆ ಸಾ|| ಝಳಕಿ (ಕೆ) ಪಾರದಿ ತಾಂಡ ರವರು ನನ್ನ ಗಂಡ ಜೂಜು ಕಾಳೆ ತನಗೆ ಇದ್ದ ಹೊಟ್ಟೆ ನೋವು ತಾಳಲಾರದೇ ಮನಯೆ ಮುಂದನ ಬೇವಿನ ಗಿಡಕ್ಕೆ ಉರಲು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಯು.ಡಿ,.ಅರ್. ಪ್ರಕರಣ ದಾಖಲಾಗಿದೆ.

No comments: