ಜೂಜಾಟ ಪ್ರಕರಣ: ಶಹಾಬಾದದ ಠಾಣಾ ವ್ಯಾಪ್ತಿಯಲ್ಲಿ ಬರುವ ಶಾಂತನಗರ ಭಂಕೂರದ ಈಶ್ವರ ಯಾದಿಗರ ರವರ ಪಾಲೀಸ ಮಶೀನದ ಎದರುಗಡೆ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೀಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಪಿ.ಐ ವಿಜಯಕುಮಾರ ಹಾಗೂ ಸಿಬ್ಬಂದಿಯವರಾದ ಶ್ರೀ ಕಾಶಿನಾಥ ಎ.ಎಸ.ಐ , ಶ್ರೀ ಯೆಜಿಕಲ್ ಪಿಸಿ, ಶ್ರೀ ಗುಂಡಪ್ಪಾ ಪಿಸಿ, ಶ್ರೀ ಬಸವರಾಜ ಸಿಪಿಸಿ ರವರೊಂದಿಗೆ ಅಂದರ ಭಾಹರ ಇಸ್ಪೀಟ ಆಡುತ್ತಿರುವವರ ಮೇಲೆ ದಾಳಿ ಮಾಡಿ ಹೆಸರು ವಿಚಾರಿಸಲಾಗಿ ವೆಂಕಟೇಶ ತಂದೆ ಅಂಭಾಜಿ ಪವಾರ, ವಾಜೀದ ತಂದೆ ವಾಹೀದ ಪಟೇಲ, ಮಹಿಬೂಬ ಪಟೇಲ ತಂದೆ ಭಾಬಾಸಾಬ, ಭೀಮಾಶಂಕರ ತಂದೆ ಮಲ್ಲಿಕಾರ್ಜುನ, ನಾಗೇಂದ್ರ ತಂದೆ ರಾಮಲಿಂಗ, ವಿಶ್ವನಾಥ ತಂದೆ ಶೀವಪ್ಪಾ, ಖಾಲೀದ ಪಟೇಲ ತಂದೆ ಲಾಡ್ಲೆ ಪಟೇಲ, ಉಮೇಶ ತಂದೆ ಬೀಡಪ್ಪಾ ಸಾ: ಎಲ್ಲರೂ ಶಾಂತ ನಗರ ಭಂಕೂರ ರವರನ್ನು ವಶಕ್ಕೆ ತೆಗೆದುಕೊಂಡಿದ್ದು ಅವರಿಂದ ನಗದು ಒಟ್ಟು 6050/- ಮತ್ತು ಇಸ್ಟೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರ ಮೇರೆಗೆ ಶಹಾಬಾದ ನಗರ ಪೊಲೀಸ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ: ಶ್ರೀ.ರಾಮಲಿಂಗಪ್ಪ ತಂದೆ ನಾಗಪ್ಪ ಮಲಶೆಟ್ಟಿ, ಸಾ|| ಮನೆ ನಂ:2-299 ಹನುಮಾನ ಮಂದಿರ ಹತ್ತಿರ ಜಗತ ಗುಲಬರ್ಗಾ ರವರು ನಾನು ನಿನ್ನೆ ದಿನಾಂಕ: 04/09/11 ರಂದು ರಾತ್ರಿ ಸುಮಾರಿಗೆ ಸಿದ್ದಾರೂಢ ಮಠದಿಂದ ಪ್ರವಚನ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಬರುತ್ತಿರುವಾಗ ಸೈನ್ಸ ಸೆಂಟರ ಮತ್ತು ದೋಭಿ ಘಾಟ ಮದ್ಯದ ರೋಡಿನ ಮೇಲೆ ಬರುತ್ತಿದ್ದಂತೆ ಅಪರಿಚಿತ 2 ಜನರು ಬಂದು ನನ್ನ ಕಪಾಳ ಮೇಲೆ ಹೊಡೆದು ನನ್ನಲ್ಲಿದ್ದ ಒಂದು ತೊಲೆ ಬಂಗಾರದ ಉಂಗುರ ಅ||ಕಿ|| 25,000/-, 3 ತೊಲೆ ಬೆಳ್ಳಿಯ ಲಿಂಗದ ಕಾಯಿ ಅ||ಕಿ|| 1500/-, ಒಂದು ಕೈ ಗಡಿಯಾರ ಅ||ಕಿ|| 100/-, ನಗದು ಹಣ 40/- ರೂಪಾಯಿ, ಹೀಗೆ ಒಟ್ಟು 26,640/- ರೂಪಾಯಿ ಬೆಲೆಬಾಳುವ ಸಾಮಾನುಗಳನ್ನು ಜಬರ ದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment