Police Bhavan Kalaburagi

Police Bhavan Kalaburagi

Thursday, September 1, 2011

GULBARGA DIST

ಗುಲಬರ್ಗಾ ಜಿಲ್ಲಾ ಪೊಲೀಸ್ ರಿಂದ 41 ಮೋಟಾರ ಸೈಕಲ್ ಗಳ ಕಳ್ಳರ ಬಂದನ

ಗುಲಬರ್ಗಾ ನಗರದ ಮಹಾತ್ಮ ಬಸವೇಶ್ವರ ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿ ಜನರು ಖಚಿತ ಮಾಹಿತಿಯನ್ನು ಆಧರಿಸಿ ಮೂವರು ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ ಸುಮಾರು 20 ಲಕ್ಷದ ಒಟ್ಟು 41 ವಿವಿಧ ಕಂಪನಿಯ ಮೋಟಾರ ಸೈಕಲ್ ಗಳು, ಮತ್ತು ನಗದು ಹಣ ಮೊಬಾಯಿಲ್ ಪೋನಗಳು ಮತ್ತು ನಕಲಿ ಕೀಲಿ ಕೈಗಳು ಜಪ್ತಿ ಮಾಡಿಕೊಂಡು ತನಿಖೆ ಮುಂದುವರೆಸಿರುತ್ತಾರೆ .
ಶ್ರೀ ಪ್ರವೀಣ ಮಧುಕರ ಪವಾರ ಐ.ಪಿ.ಎಸ. ಪೊಲೀಸ್ ಅಧೀಕ್ಷಕರು ಗುಲಬರ್ಗಾ , ಅಪರ ಪೊಲೀಸ್ ಅಧೀಕ್ಷಕರು ಶ್ರೀ ಕಾಶೀನಾಥ ತಳಕೇರಿ ಹಾಗು ಶ್ರೀ ಹೆಚ. ತಿಮ್ಮಪ್ಪಾ ಡಿ.ಎಸ.ಪಿ ಗ್ರಾಮೀಣ ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು ದಿನಾಂಕ; 29-08-2011 ರಂದು ಬೆಳಗಿನ ಜಾವ ನಿಖರವಾದ ಮಾಹಿತಿಯಂತೆ ದಾಳಿ ಮಾಡಿ ಆರೋಪಿತರಾದ ಶ್ರೀ ಆರೀಪಖಾನ ತಂದೆ ಆಲಂಖಾನ ವ|| 40 ವರ್ಷ ಉ|| ಮೋಟಾರ ಸೈಕಲ್ ಮೇಕ್ಯಾನಿಕ್, ಶಪೀ @ ಮಹಮದ ಶಪೀಯೋದ್ದಿನ ತಂದೆ ಅಬ್ದುಲ್ ರಸೀದ ವಯ|| 38 ವರ್ಷ ಉ|| ಟಿ.ವಿ ಮೆಕ್ಯಾನಿಕ ಸಾ|| ಲೋಹರ ಗಲ್ಲಿ ಹಾ|ವ|| ಸೋನಿಯಾ ಗಾಂಧಿ ನಗರ ಇವರನ್ನು ದಸ್ತಿಗಿರ ಮಾಡಿ ತನಿಖೆಗೆ ಒಳಪಡಿಸಿದ್ದರಿಂದ ಇನ್ನೋರ್ವ ಆರೋಪಿತನಾದ ಆಸ್ಮತ ಅಲಿ ತಂದೆ ಅಬ್ದುಲ್ ಸುತಾರ ವ|| 24 ಉ|| ಮೋಟಾರ ಸೈಕಲ್ ಮೇಕಾನಿಕ್ ಸಾ|| ಅಗರಖೇಡ ತಾ|| ಇಂಡಿ ಹಾಲಿ ಮದಿನಾ ನಗರ ಇಂಡಿ ಇವರೆಲ್ಲರೂ ಕೂಡಿ ಗುಲಬರ್ಗಾ ನಗರ ಇಂಡಿ ನಗರ ಹಾಗು ಇತರೆ ಭಾಗಗಳಲ್ಲಿ ಕಳೆದ ಎರಡು ವರ್ಷಗಳಿಂದ ಮೋಟಾರ ಸೈಕಲಗಳು ಕಳ್ಳತನ ಮಾಡಿ ಬಿಜಾಪೂರ ಜಿಲ್ಲೆಯ ಇಂಡಿ, ತಾಂಬಾ, ತಡವಲಗಾ, ಜೊಡುಗುಡಿ, ಸಿಂದಗಿ ಮುಂತಾದ ಕಡೆಗಳಲ್ಲಿ ಮಾರಾಟ ಮಾಡಿದ ಬಗ್ಗೆ ತಿಳಿಸಿದ್ದು, ಹಾಗು ತನಿಖೆಯ ಕಾಲಕ್ಕೆ ಮೂರು ಜನ ಆರೋಪಿತರು ಈ ಮೋಟಾರ ಸೈಕಲಗಳು ವಿವಿಧ ಬ್ಯಾಂಕುಗಳಲ್ಲಿ ವಾಹನದ ಮಾಲಿಕರು ಸಾಲ ಪಾವತಿಸಿದ ಕಾರಣ ಬ್ಯಾಂಕಿನಿಂದ ಜಪ್ತು ಮಾಡಿದ ವಾಹನಗಳು ಇರುತ್ತವೆ. ಮೋಟಾರ ಸೈಕಲಗಳ ಕಾಗದ ಪತ್ರಗಳು ನಂತರ ತಮಗೆ ತಂದು ಕೊಡುತ್ತೆವೆ ಅಂತಾ ಜನರನ್ನು ನಂಬಿಸಿ ಕಳವು ಮಾಡಿದ ಮೋಟಾರ ಸೈಕಲ್ ಗಳ ನಂಬರ ಪ್ಲೇಟಗಳು ಸಹ ಬದಲಾಯಿಸಿದ ಮಾರಾಟ ಮಾಡಿದ ಬಗ್ಗೆ ತನಿಖೆ ಕಾಲಕ್ಕೆ ತಿಳಿದು ಬಂದಿರುತ್ತದೆ .

ಗುಲಬರ್ಗಾ ನಗರದ ಬ್ರಹ್ಮಪೂರ, ಅಶೋಕ ನಗರ, ಸ್ಟೆಶನ ಬಜಾರ, ಚೌಕ, ಎಂಬಿ.ನಗರ ಠಾಣೆ ಗುಲಬರ್ಗಾ ಮತ್ತು ಇಂಡಿ ಪೊಲೀಸ್ ಠಾಣೆಗಳಲ್ಲಿ ಈ ವಾಹನಗಳು ಕಳುವಾದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತೆವೆ. ಸದರಿ ಮೋಟಾರ ಸೈಕಲಗಳು ನಗರದ ಸುಪರ ಮಾರ್ಕೆಟ, ನೆಹರು ಗಂಜ್, ರೇಲ್ವೆ ನಿಲ್ದಾಣ, ಬಸ್ಸ ನಿಲ್ದಾಣ, ಹಾಗು ನಗರದ ಇತರೆ ಬಡಾವಣೆಗಳಿಂದ ಕಳ್ಳತನ ಮಾಡಿರುತ್ತಾರೆ. ಮುಖ್ಯವಾಗಿ ಹಿರೋ ಹೊಂಡಾ ಕಂಪನಿಯ ಮೋಟಾರ ಸೈಕಲಗಳು ಗುರಿಯಾಗಿಟ್ಟುಕೊಂಡು ವೃತ್ತಿ ಪರವಾಗಿ ಕಳ್ಳತನ ಮಾಡುತ್ತಿದ್ದ ಬ್ಗಗೆ ತಿಳಿಸಿದ್ದು, ಸುಮಾರು 20 ಲಕ್ಷದ ಮೌಲ್ಯದ 41 ಮೋಟಾರ ಸೈಕಲಗಳು, ನಗದು ಹಣ, ಮೊಬಾಯಿಲ್ ಪೋನಗಳು ಜಪ್ತಿ ಮಾಡಿಕೊಂಡಿದ್ದು ತನಿಖೆ ಮುಂದುವರೆದಿರುತ್ತದೆ .

ಮಾನ್ಯ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳಾದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಂ.ಬಿ. ನಗರ ಇವರ ನೇತ್ರತ್ವದಲ್ಲಿ ಪಂಡಿತ ಸಾಗರ ಪಿ.ಎಸ.ಐ ವಿಶ್ವವಿಧ್ಯಾಲಯ ಠಾಣೆ, ಶ್ರೀ ಭೊಜರಾಜ ರಾಠೋಢ ಪಿ.ಎಸ.ಐ ಫರತವಾದ ಠಾಣೆ , ಶ್ರೀ ಶಾಂತಿನಾಥ ಪಿ.ಎಸ.ಐ ಕಮಲಾಫೂರ ಠಾಣೆ , ಸಿಬ್ಬಂದಿಯವರಾದ ಶಿವಪುತ್ರಸ್ವಾಮಿ ಹೆಚ.ಸಿ, ಯಲ್ಲಪ್ಪಾ ಭಜಂತ್ರಿ ಪಿಸಿ, ಅಶೋಕ ಪಿಸಿ, ಗಂಗಾಧರ ಸ್ವಾಮಿ ಪಿಸಿ, ಲೈಕೊದ್ದಿನ ಪಿಸಿ, ಹಣಮಂತ ಪಿಸಿ, ಹೇಮಂತ ಪಿಸಿ, ಚಂದ್ರಕಾಂತ ಪಿಸಿ, ಶಿವಾನಂದ ಪಿಸಿ, ಪ್ರಭಾಕರ್ ಪಿಸಿ ಮತ್ತು ಇಮ್ತಿಯಾಜ್ ಎಪಿಸಿ ರವರೆಲ್ಲರೂ ದಾಳಿಯಲ್ಲಿ ಪಾಲ್ಗೊಂಡಿದ್ದರಿಂದ ಎಸ.ಪಿ ಸಾಹೇಬರು ಅಧಿಕಾರಿ ಮತ್ತು ಸಿಬ್ಬಂಧಿಯವರ ಕರ್ತವ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಿರುತ್ತಾರೆ.

No comments: