Police Bhavan Kalaburagi

Police Bhavan Kalaburagi

Monday, September 12, 2011

Gulbarga District Reported Crime

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ :
ದಿನಾಂಕ 10-09-2011 ರಂದು ಮುಂಜಾನೆ ಶ್ರೀ  ರವೀಂದ್ರಸಿಂಗ ತಂದೆ ಶೇಖರಸಿಂಗ ಠಾಕೂರ ಸಾಃ ಸಿದ್ದೇಶ್ವರ ಕಾಲೂನಿ ಗುಲಬರ್ಗಾ ಮತ್ತು ಅವರ ತಾಯಿ ಶಾಲಿನಿಬಾಯಿ ಇಬ್ಬರು ಕೂಡಿ ತಮ್ಮ ಮೋ. ಸೈ ನಂ. ಕೆ.ಎ 32 ಯು 5047 ನೇದ್ದರ ಮೇಲೆ ಕುಳಿತು ಆರ್.ಟಿ.ಓ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಕಾರ. ನಂ ಕೆ.ಎ 04 ಎಮ್.ಬಿ 3630 ನೇದ್ದರ ಚಾಲಕನು ತನ್ನ ಕಾರನ್ನು ಜಿ.ಜಿ.ಎಚ್ ಕಡೆಯಿಂದ ಅತಿವೇಗ ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ತನ್ನ ಕಾರ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಹಿಂದೆ ಕುಳಿತ ಫಿರ್ಯಾದಿ ತಾಯಿ ಶಾಲಿನಿಬಾಯಿ ಇವರಿಗೆ ತಲೆಗೆ ರಕ್ತಗಾಯ ಮತ್ತು ಕೈ ಕಾಲುಗಳಿಗೆ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 06-09-2011 ರಂದು ರಾತ್ರಿ ವವೇಕ ತಂದೆ ಅರುಣಕುಮಾರ ಎಡಕೆ ಸಾ: ಈವನ್ ಎ ಶಾಹಿ ಏರಿಯಾ ಗುಲಬರ್ಗಾ ಮತ್ತು ಅವರ ತಮ್ಮ ಅನ್ನಪೂರ್ಣ ಆಸ್ಪತ್ರ ಕ್ರಾಸ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಜಗತ್ತು ಕಡೆಯಿಂದ ಮೋಟಾರ ಸೈಕಲ್ ನಂ ಕೆಎ-32 ಯು -6506 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ವಿವೇಕ ರವರಿಗೆ ಹಿಂದಿನಿಂದ ಅಪಘಾತಪಡಿಸಿದ್ದು ವಿವೇಕ ರವರಿಗೆ ಭಾರಿಗಾಯಗಳಾಗಿ ಸೋಲ್ಲಾಪೂರ ಆಸ್ಪತ್ರೆಯಲ್ಲಿ ಉಪಚಾರ ಹೋಂದುತ್ತಾ ಚೇತರಿಕೊಳ್ಳದೆ ದಿನಾಂಕ 11-09-2011 ರಂದು ಮೃತಪಟ್ಟಿರುತ್ತಾರೆ ಅಂತಾ ಶ್ರೀಮತಿ ನಾಗವೇಣಿ ಗಂಡ ವಿವೇಕಾನಂದ ಎಡಕೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಗುರಯ್ಯ ತಂದೆ ಶಾಂತಯ್ಯ ಸ್ವಾಮಿ ಸಾ: ಜಿಡಿಎ ಆಫೀಸ ಎದುರುಗಡೆ ಗುಲಬರ್ಗಾ ರವರು ದಿನಾಂಕ 10-09-2011 ರಂದು ಮಧ್ಯಾಹ್ನ ತನ್ನ ಮೋಟಾರ ಸಕಲ್ ನಂ ಕೆಎ-48 ಹೆಚ್-6381 ನೇದ್ದರ ಮೇಲೆ ಖೂಬಾ ಕಲ್ಯಾಣ ಮಂಟಪ ರೋಡನಿಂದ ಎಸ್.ವಿ.ಪಿ ಚೌಕ ಕಡೆಗೆ ಹೋಗಲು ಲಾಹೋಟಿ ಕ್ರಾಸ ಹತ್ತಿರ ತಿರುಗುತ್ತಿದ್ದಾಗ ಮೋಠಾರ ಸೈಕಲ್ ನಂ ಕೆ-32 ಡಬ್ಲು-7121 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತೀ ವೇಗವಾಗಿ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ನನಗೆ ಅಪಘಾತಪಡಿಸಿದ್ದರಿಂದ ಇಬ್ಬರಿಗು ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣಗಳು :
ಆಳಂದ ಠಾಣೆ :ದಿನಾಂಕ 05-09-2011 ರಂದು ಸಾಯಂಕಾಲ ನಾಗನಾಥ ತಂದೆ ಶ್ಯಾಮ ಬನಶೂಡೆ ಸಾ:ಜಮಗಾ ಕೆ ಇವರ ಮಗಳಾದ ಶೀತಲ ಇವಳು ಮನೆಯಿಂದ ಹೋಲಕ್ಕೆ ಹೋಗುತ್ತಿದ್ದಾಗ ತಾಲಿಮಖಾನ ಹಿಂದೆ ದೇವಿದಾಸ ಇವರ ಮಗನಾದ ಅತೂಲ ಇತನು ನನ್ನ ಮಗಳನ್ನುಮಾಡುವ ಕೊಲೆ ಮಾಡುವ ಉದ್ದೇಶದಿಂದ ತಡೆದು ನಿಲ್ಲಿಸಿ ಆಕೆಗೆ ಪಕ್ಕದ ಸಜ್ಜೆ ಹೊಲಕ್ಕೆ ಎಳೆದುಕೊಂಡು ಒಯ್ದು ಕುತ್ತಿಗೆ ಹಿಚಕಲು ಕೈಯಿಂದ ಹಿಡಿದಿರುತ್ತಾನೆ ಮತ್ತು ಬಾಯಿಯಲ್ಲಿ ಕೈ ಹಾಕಿ ಚೂರಿರುತ್ತಾನೆ ದೇವಿದಾಸ ಅತುಲ ಮತ್ತು ಬಾನುದಾಸ ಇವರ ಕುಮ್ಮಕ್ಕಿನಿಂದ ನನ್ನ ಮಗಳ ಮೇಲ್ ಹಲ್ಲೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಫರತಾಬಾದ ಠಾಣೆ :ದಿನಾಂಕ 10-92011 ರಂದು –ಮಧ್ಯಾಹ್ನ ಶ್ರೀ ಶಂಕ್ರೇಪ್ಪಾ ತಂದೆ ರುಕ್ಕಪ್ಪಾ ಅವರಾದಿ ಸಾ: ಇಟಗಾ(ಕೆ) ಮತ್ತು ಮಗನಾದ ಚಂದ್ರಕಾಂತ ಇಬ್ಬರು ಮನೆಯಲ್ಲಿದಾಗ ನಮ್ಮ ಒಣಿಯವರಾದ ಬಾಬುರಾವ ತಂದೆ ಭೀಮಶಾ ಕಟ್ಟಿಮನಿ. ಮನೋಹರ ತಂದೆ ಬಾಬುರಾವ ಕಟ್ಟಿಮನಿ ಇವರಿಬ್ಬರು ಕೂಡಿಕೊಂಡು ನಮ್ಮ ಮನೆಗೆ ಬಂದು ನಮ್ಮ ಮನೆಯ ಅಂಗಳದ ಸಾರ್ವಜನಿಕ ರಸ್ತೆಯಲ್ಲಿ ನಿಂತು ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಮನೆಯಿಂದ ಹೋರಗಡೆ ಬಂದು ಯಾಕ್ರೆಪ್ಪಾ ಸುಮ್ಮ ಸುಮ್ಮನೆ ಬೈಯುತ್ತಿದಿರಿ ಅಂತಾ ಕೇಳಿದಾಗ ಮಗನೆ ನಿಮಗೆ ಹೋಲ ಬಹಳ ವಿದೆ ಅಂತಾ ಸೊಕ್ಕು ಬಂದಿದೆ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೆ ಬಿದಿದ್ದ ಕಲ್ಲು ತಗೆದುಕೊಂಡು ನನ್ನ  ಬಲಗಡೆ ಕಣ್ಣಿನ ಮೇಲೆ ಹೋಡೆದಿದ್ದರಿಂದ ಗುಪ್ತಗಾಯ ವಾಗಿರುತ್ತದೆ. ಮತ್ತು ಕೈ ಮುಸ್ಟಿ ಮಾಡಿ ಬೆನ್ನ ಮೇಲೆ. ಹೊಟ್ಟೆಯ ಮೇಲೆ ಹೋಡೆದಿದ್ದರಿಂದ ಗುಪ್ತಗಾಯ ಮತ್ತು ರಕ್ತಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: