Police Bhavan Kalaburagi

Police Bhavan Kalaburagi

Monday, September 26, 2011

Gulbarga District Reported Crime

ಅಪಘಾತ ಪ್ರಕರಣ :

ಕಮಲಾಪೂರ ಠಾಣೆ :ಶ್ರೀ. ಚಂದ್ರಕಾಂತ ತಂದೆ ಮರೇಪ್ಪಾ ಹೊಳ್ಕರ ಸಾಃ ಡೋರಜಂಬಗಾ ತಾ;ಜಿ;ಗುಲಬರ್ಗಾ ಇವರು ದಿನಾಂಕ 25-09-2011 ರಂದು ಸಾಯಂಕಾಲ ರೋಡಕಿಣ್ಣಿ ಗ್ರಾಮದ ವಸಂತ ತಂದೆ ಗೌಡಪ್ಪಾ ಪಾಟೀಲ ಇವರ ಮನೆಯಲ್ಲಿ ಟಿವಿ ರೀಪೆರಿ ಮಾಡಲು ಬಂದಿದ್ದು. ರಾತ್ರಿ 11-00 ಗಂಟೆಯವರೆಗೆ ರಿಪೇರಿ ಮಾಡಿ, ಮರಳಿ ಉರಿಗೆ ಹೋಗಲು ನಾವು ಇಬ್ಬರು ಕೂಡಿಕೊಂಡು ರೋಡಕಿಣ್ಣಿ ಗ್ರಾಮದ ಬಸ್ಸ ಸ್ಟ್ಯಾಂಡದ ಹತ್ತಿರ ಬಂದು ನಿಂತುಕೊಂಡಾಗ ಗುಲಬರ್ಗಾ ಹುಮನಾಬಾದ 218 ರೋಡಿನ ಮುಲ್ಲಾಮಾರಿ ಸೇತುವೆ ಮೇಲೆ ಗುಲಬರ್ಗಾ ಕಡೆಯಿಂದ ಲಾರಿ ನಂ. ಜಿಜೆ:10, ಡಬ್ಲೂ:7745ನೇದ್ದರ ಚಾಲಕ ಇಕ್ಬಾಲ ತಂದೆ ಇಸಾಕಭಾಯಿ ಜೌಂಧಿಯಾ ಸಾಃಜಾಮನಗರ ಕೋಜಾಗೇಟ ಗುಜರಾತ ಮತ್ತು ಹುಮನಾಬಾದ ಕಡೆಯಿಂದ ಲಾರಿ ನಂ. ಎಂಹೆಚ್:04, ಹೆಚ್:9245 ನೇದ್ದರ ಚಾಲಕ ಸಮೀರುದ್ದಿನ್ ತಂದೆ ಮಹ್ಮದ ಉಸ್ಮಾನಸಾಬ ದುಬೈವಾಲೇ ಸಾಃ ನೌಬಾದ ಬೀದರ ಇವರು ತಮ್ಮ ತಮ್ಮ ವಾಹನಗಳನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮುಲ್ಲಾಮಾರಿ ಸೇತುವೆ ನಾನು ಮೊದಲು ತಾನು ಮೊದಲು ಅಂತಾ ಸೇತುವೆ ಮಧ್ಯಭಾಗಕ್ಕೆ ಬಂದು ಒಬ್ಬರಿಗೊಬ್ಬರು ಲಾರಿಗಳನ್ನು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ್ದರಿಂದ ಸೇತುವೆ ಸುಕ್ಷತೆಗಾಗಿ ಕಲ್ಲಿನಿಂದ ಕಟ್ಟಿದ ತಡೆಗೋಡೆ ಸುಮಾರು 30 ಫೀಟ್ ಉದ್ದಳತೆಯ ಗೋಡೆ ಕೆಡುವಿ ಹಾನಿಪಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: