ಕೊಲೆ ಪ್ರಕರಣ :
ಗ್ರಾಮೀಣ ಠಾಣೆ :ಶ್ರೀ. ಸೂರ್ಯಕಾಂತ ತಂದೆ ರತ್ನಪ್ಪ ಸೋಲಾಪೂರೆ ಸಾ:ಮಾಹಾಗಾಂವ ತಾ:ಜಿ: ಗುಲಬರ್ಗಾ ರವರ ಮಗಳಾದ ಶ್ರುತಿ ಇವಳನ್ನು ತಮ್ಮ ಗ್ರಾಮ ಮಹಾಗಾಂವದ ಸಂಜು @ ಸಂಜುಕುಮಾರ ಹುಡಗಿ ಇತನು ಸುಮಾರು 8-9 ತಿಂಗಳ ಹಿಂದೆ ಪ್ರೀತಿಸಿ ಓಡಿ ಹೋಗಿ ನಂತರ ಪ್ರೀತಿಸಿದವನೊಂದಿಗೆ ಮದುವೆ ಮಾಡಿಕೊಂಡು ಹುಮನಾಬಾದ ರಿಂಗ ರೋಡದ ಹತ್ತಿರ ಇರುವ ರಾಮನಗರ ಕಾಲನಿಯಲ್ಲಿ ಮನೆಯ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದು ದಿನಾಂಕ 9-9-2011 ರಂದು ರಾತ್ರಿವೇಳೆಯಲ್ಲಿ ಸಂಜು @ ಸಂಜುಕುಮಾರ ಹುಡಗಿ ಹಾಗೂ ಅವನ ತಾಯಿ ಹಾಗೂ ಅಣ್ಣ, ಅತ್ತಿಗೆ ಇವರುಗಳ ಸಹಕಾರದಿಂದ ತಮ್ಮ ಮಗಳು ಶ್ರುತಿ ಇವಳಿಗೆ ಮೈಗೆ ಬೆಂಕಿ ಹಚ್ಚಿದ್ದು ನಂತರ ಅವಳನ್ನು ಉಪಚಾರ ಕುರಿತು ರಾತ್ರಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಮಗಳು ಶ್ರುತಿ ಮುಂಜಾನೆ 7:30 ಗಂಟೆಗೆ ಮೃತ್ತಪಟ್ಟ ನಂತರ ಸಂಜು @ ಸಂಜುಕುಮಾರ ಇತನು ಓಡಿ ಹೋಗಿದ್ದು ಇರುತ್ತದೆ. ಕಾರಣ ಸಂಜು @ ಸಂಜುಕುಮಾರ ಹುಡಗಿ ಹಾಗೂ ಅವನ ಸಂಬಂದಿಕರು ತಮ್ಮ ಮಗಳ ಕೊಲೆಗೆ ಕಾರಣರಾಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟ ನಿರತ 4 ಜನರ ಬಂಧನ :
ರಾಘವೇಂದ್ರ ನಗರ ಠಾಣೆ :ದಿನಾಂಕ 10-09-2011 ರಂದು ಸಾಯಂಕಾಲ 7-30 ಗಂಟೆಗೆ ಬ್ರಹ್ಮಪೂರ ಬಡಾವಣೆಯ ಕೊಂಡದ ಗಲ್ಲಿಯ ಸಾರ್ವಜನಿಕ ಸ್ಥಳದಲ್ಲಿ, ಅಂದರ ಬಹಾರ ಇಸ್ಪೆಟ್ ಜೂಜಾಟದಲ್ಲಿ ಕೆಲವು ಜನರು ತುಡಗಿದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ 1ರಾಘವೇಂದ್ರ ತಂದೆ ವೆಂಕಟರಾವ ಕುಲಕರ್ಣಿ 2.ನಾಗರಾಜ ತಂದೆ ಚನ್ನಬಸಪ್ಪ ಕಲಶಟ್ಟಿ 3.ಸುನಿಲ್ ತಂದೆ ಸಿದ್ದಪ್ಪ ಕಟ್ಟಿಮನಿ, 4ಶಿವಕುಮಾರ ತಂದೆ ದಶರಥ ಕಲ್ಯಾಣಕರ್ ರವ.ರನ್ನು ದಸ್ತಗೀರ ಮಾಡಿಕೊಂಡು ಸದರಿಯವರಿಂದ ನಗದು ಹಣ 3660/-ರೂಪಾಯಿಗಳು, 52 ಇಸ್ಪೆಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಠಾಣೆಗೆ ಬಂದು ಸದರಿಯವರ ವಿರುದ್ಧ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ದೇವಲಗಾಣಗಾಪೂರ ಠಾಣೆ :ದಿನಾಂಕ 10-09-2011 ರಂದು ಬೆಳಿಗ್ಗೆ ಹಸರಗುಂಡಗಿ ಗ್ರಾಮದ ಕ್ರಾಸ್ ಹತ್ತಿರ ಆಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ನಿಂಗಪ್ಪ ತಂದೆ ಶೇಖಪ್ಪ ರುಮ್ಮಗೋಳ, ಸಾ:ಹಸರಗುಂಡಗಿ ಇವನನ್ನು ದಸ್ತಗೀರ ಮಾಡಿ ಸದರಿಯವನಿಂದ ಅಂದಾಜು 2000/- ರೂ ಕಿಮ್ಮತ್ತು 180 ಎಮ್ಎಲ್ ನ ಯು ಎಸ್ ವಿಸ್ಕಿ 50 ಬಾಟಲಗಳನ್ನು ವಶಪಡಿಸಿಕೊಂಡು ಸದರಿಯವನ ವಿರುದ್ಧ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
No comments:
Post a Comment