ಮಾರಣಾಂತಿಕ ಹಲ್ಲೆ ಪ್ರಕರಣ :
ರೋಜಾ ಠಾಣೆ :ದಿನಾಂಕ 13-09-2011 ರಂದು ರಾತ್ರಿ ಶ್ರೀ ಮಹಮ್ಮದ ಅಕ್ರಮ ತಂದೆ ಮಹಮ್ಮದ ಮಶ್ಯಾಕ ಸಾ:ಖಾಜಾ ಕಾಲೋನಿ ಮತ್ತು ಮಹ್ಮದ ಅಲ್ತಾಮಶ ಹಾಗೂ ಮಹ್ಮದ ರಪಿ ಕೂಡಿಕೊಂಡು ಕೆಬಿಎನ್ ದರ್ಗದಿಂದ ಮಹಿಬೂಬ ನಗರ ಕಾಲೋನಿಗೆ ಹೋಗುತ್ತಿದ್ದಾಗ ದಾರಿಯಲ್ಲಿ ಹುಸೇನಿ ಆಲಂ ಮಜೀದ ಮುಂದೆ ಅಬ್ದುಲ ಗಪಾರ ತಂದೆ ಅಬ್ದುಲ ಲತೀಪ ಅವರ ತಮ್ಮ ರಹೀಮಾನ ಮತ್ತು ಸದ್ದಾಮ 3 ಜನರು ಕೋಡಿಕೊಂಡು ತಡೆದು ನಿಲ್ಲಿಸಿ ಅವಾಚ್ಯಶಬ್ದಗಳಿಂದ ಬೈದು ನಮ್ಮ ಹೋಟಲ ಮುಂದಿನಿಂದ ಯಾಕೆ ಹೋಗುತ್ತಿರಿ ಅಂತಾ ಜಗಳ ತೆಗೆದು ಕೈಯಿಂದ ಮತ್ತು ಚಾಕುವಿನಿಂದ ಬೆನ್ನಿನಲ್ಲಿ ಜೋರಾಗಿ ಹೊಡೆದು ಭಾರಿ ರಕ್ತಗಾಯಪಡಿಸಿ ಕೋಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ಪ್ರಕರಣ :
ಮಹಿಳಾ ಠಾಣೆ :ಶ್ರೀಮತಿ ಶಕುಂತಲಾ ಗಂಡ ಕಾಡಪ್ಪಾ ಸಾ: ಗುಬ್ಬಿ ಕಾಲೂನಿ ಗುಲಬರ್ಗಾ ಇವರ ಗಂಡ ದಿನಾಂಕ 05-09-2011 ರಂದು ರಾತ್ರಿ ಕುಡಿದು ಬಂದು ನಿನಗೆ ಅಡುಗೆ ಮಾಡಲು ಬರುವುದಿಲ್ಲಾ ಊಟಕ್ಕೆ ಎನು ಮಾಡಿರುವುದಿಲ್ಲಾನಿನಗೆ ಬಹಳ ಸೂಕ್ಕು ಬಂದಿದೆ ಅಂತಾ ವಿ:ನಾಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ತಲವಾರದಿಂದ ಹೋಡೆದು ಭಾರಿ ರಕ್ತಗಾಯಪಡಿಸಿರುತ್ತಾನೆ ಮತ್ತು ಮಾನಸಿಕ ದೈಹಿಕ ಕಿರುಕಳ ನಿಡೀರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment