ಮಾರಣಾಂತಿಕ ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ :ಶ್ರೀ ರಾಮು ತಂದೆ ಈರಪ್ಪ ಹಿಂದಿನಮನಿ ಸಾ: ಸಾಥಖೇಡ ಇವರ
ಕಾಕನ ಮನೆಯ ಮುಂದೆ ಶಿವಪ್ಪ ತಂದೆ ಬಸರಾಜ ದೊಡ್ಡಮನಿ ಇತನು ಸುಮಾರು ದಿವಸಗಳಿಂದ ಸೈಕಲ ಮೇಲೆ ತಿರುಗಾಡುವುದು ಮತ್ತು ಕಾಕನ ಮಗಳು ಈರಮ್ಮ ಇವಳಿಗೆ ಚೂಡಾಯಿಸುವುದು ಮಾಡುತ್ತಿದ್ದ ಅವನಿಗೆ ಬುದ್ದಿ ಮಾತು ಹೇಳಿದರೆ ನಮ್ಮ ಕಾಕ ಬಸಂತನಿಗೆ ನಿನ್ನಗೆ ಮುಂದೋಂದು ದಿನ ಒಂದು ಕೈ ನೋಡಿಕೊಳ್ಳುತ್ತೇನೆ ಅಂತಾ ಜಗಳ ಮಾಡಿದ್ದು ಇರುತ್ತದೆ. ದಿನಾಂಕ: 16-09-2011 ರಂದು ಸಾಯಂಕಾಲ ನಾನು ಮತ್ತು ನಮ್ಮ ಕಾಕ ಬಸಂತ ಇಬ್ಬರೂ ನಮ್ಮೂರ ಹಳ್ಳದ ಪುಲಿನ ಹತ್ತಿರ ಮನೆಗೆ ಬರುತ್ತಿದ್ದಾಗ ಶಿವಪ್ಪ ಇತನು ತನ್ನ ಸೈಕಲದೊಂದಿಗೆ ಜಗಳ ಮಾಡುವ ಉದ್ದೇಶದಿಂದ ನಮ್ಮ ಕಾಕನಿಗೆ ಸೈಕಲ ಹಾಯಿಸಿ ಹಾಗೆ ಹೋಗಿದ್ದು ರಾತ್ರಿ ನಮ್ಮ ಮನೆ ಮುಂದೆ ಕಾಕ ಬಸಂತ ಇತನು ಶಿವಪ್ಪ ತಂದೆ ಬಸವರಾಜ ದೊಡ್ಡಮನಿ ಇತನಿಗೆ ಯಾಕೆ ನನಗೆ ಸೈಕಲ ಹಾಯಿಸಿ ಬಂದಿದ್ದಿ ಅಂತಾ ಕೇಳಿದಕ್ಕೆ ಅವನು ಕೊಲೆ ಮಾಡುವ ಉದ್ದೇಶದಿಂದ ಕೈಯಿಂದ ಮುಖದ ಮೇಲೆ ಮತ್ತು ಅವನಿಗೆ ಕೆಳಗೆ ಬಿಳಿಸಿ ಶಿವಪ್ಪನು ತನ್ನ ಕೈಯಲ್ಲಿದ್ದ ಕಬ್ಬಿಣದ ಮಳಿಯಿಂದ ಕಾಕ ಬಸಂತ ಇತನ ಮರ್ಮಾಂಗದ ಹತ್ತಿರ ಚುಚ್ಚಿ ರಕ್ತ ಗಾಯ ಪಡಿಸಿ ಕೊಲೆಗೆ ಪ್ರಯತ್ನ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Police Bhavan Kalaburagi
Sunday, September 18, 2011
Gulbarga District Reported Crimes
Subscribe to:
Post Comments (Atom)
No comments:
Post a Comment