ಆಕ್ರಮ ಅಡಿಗೆ ಅನೀಲ ಸಿಲೇಂಡರ ಮಾರಾಟ ಮಾಡುತ್ತಿದ್ದವನ ಬಂಧನ :
ಗ್ರಾಮೀಣ ಠಾಣೆ : ದಿನಾಂಕ: 20-9-11 ರಂದು ಠಾಣಾ ವ್ಯಾಪ್ತಿಯ ರಾಮನಗರ ದಲ್ಲಿರುವ ರಾಘವೇಂದ್ರ ನಿಲಿಯದ ಮಾಲಿಕನು ಅಕ್ರಮವಾಗಿ ಪರವಾಣಿಗೆ ಇಲ್ಲದೆ ಅಡುಗೆ ಅನಿಲ ಸಿಲೆಂಡರ ಗಳನ್ನು ಜನರಿಗೆ ಮೋಸ ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಮಾನ್ಯ ಡಿವೈಎಸ್‌ಪಿ ಸಾಹೇಬರು ಗ್ರಾಮೀಣ ಉಪ ವಿಭಾಗ ಹಾಗೂ ಮಾನ್ಯ ಸಿಪಿಐ ಗ್ರಾಮೀಣವೃತ್ತ ಗುಲಬರ್ಗಾ ರವರುಗಳ ನೇತೃತ್ವದಲ್ಲಿ ದಾಳಿ ಮಾಡಿ ಮಂಜುನಾಥ ತಂ/ ಸುಭಾಷ ಬೆಳಕೋಟಾ ವ:25 ಜಾ:ಪೂಜಾರಿ ಸಾ: ರಾಮನಗರ ಗುಲ್ಬರ್ಗಾ ಇವನನ್ನು ವಶಕ್ಕೆ ತೆಗೆದುಕೊಂಡು ಅವನ ಹತ್ತಿರದಿಂದ2 ತುಂಬಿದ ಬಾರತ ಗ್ಯಾಸ 14.2 ಕೆಜಿ ಹಾಗೂ 2 ತುಂಬಿದ ಬಾರತ ಗ್ಯಾಸ ಕಮರ್ಸಿಲ ಗ್ಯಾಸ ಸಿಲೇಂಡ 19 ಕೆಜಿ 2 ತುಂಬಿದ ಇಂಡಿಯನ ಗ್ಯಾಸ ಸಿಲೆಂಡರ, 1 ಖಾಲಿ ಸಿಲೆಂಡರ್ 2 ಖಾಲಿ ಹೆಚ್‌ಪಿ ಕಮರ್ಸಿಯಲ್ ಸಿಲೆಂಡರ್‌ಗಳು 1 ಖಾಲಿಇರುವ ಉರ್ಜಾ ಸಿಲೆಂಡರ ಹಾಗೂಗ್ಯಾಸ ಅಳತೆ ಮಾಡುವ ತೂಕಾ 1 ಹೆಚ್‌ಪಿ ಗ್ಯಾಸ ತುಂಬುವ ಮೋಟಾರ ವೈರ ಸಮೇತ ಹಾಗೂ ಇತರೆ ಸಾಮಾನುಗಳು ಹೀಗೆ ಒಟ್ಟು 15870/-ರೂ ಬೆಲೆಬಾಳುವ ಸಾಮಾನುಗಳನ್ನು ಜಪ್ತಿ ಪಡಿಸಿಕೊಂಡಿದ್ದು ಸದರಿಯವನ ಮೇಲೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಆಳಂದ ಠಾಣೆ : ದಿನಾಂಕ 20-9-211 ರಂದು ರಾತ್ರಿ ಸಂತೋಷ ರಾಠೋಡ ಸಾ/ ಮುಗಳನಾಗಾಂವ ರವರು ತನ್ನ ಹೆಡಂತಿಯೊಂದಿಗೆ ಸಂಸಾರಿಕ ವಿಷಯದಲ್ಲಿ ಬಾಯಿ ಮಾತಿನಿಂದ ತಕರಾರು ಮಾಡುತ್ತಿದ್ದಾಗ ನಾನು ಎದ್ದು ರೋಡಿನ ಕಡೆ ನಡೆದಾಗ ನನ್ನ ಅತ್ತೆಯಾದ ಅನಿತಾ ಗಂಡ ಗೋಪಿ ಸಂಗಡ 3 ಜನರು ಕುಡಿಕೊಂಡು ನನಗೆ ಎಲ್ಲಿಗೆ ಹೊಗುತ್ತಿಯ ಅಂತ ತಡೆದು ನಿಲ್ಲಿಸಿ ವಿನಾ ಕಾರಣವಾಗಿ ಅವಾಚ್ಯ ಶಬ್ದಗಳಿಂದ ಬೈಯ್ದ ಕೈಯಿಂದ ಹೊಡೆದು ನಿನ್ನಗೆ ಇವತ್ತು ಜೀವ ಸಹಿತ ಬಿಡುವುದಿಲ್ಲ ಅಂತ ಅಂಗಿ ಹಿಡಿದು ಎಳೆದಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 20-9-11 ರಂದು ಶ್ರೀ. ಲೋಮೋಕಾಂತ ತಂದೆ ಗುಂಡಪ್ಪ ಸಿಂಗೇ ಸಾ: ಡೊಂಗರಗಾಂವ ತಾ: ಜಿ: ಗುಲಬರ್ಗಾ ಮತ್ತು ಆತನ ಗೆಳೆಯರು ಡೊಂಗರ ಗಾಂವಕ್ಕೆ ಹೋಗುವ ಕುರಿತು ಕ್ರೋಜರ ಜೀಪ ನಂ ಎಪಿ 23 /0751 ನೇದ್ದರಲ್ಲಿ ಕುಳಿತು ಹೊರಟಾಗ ಏರಿಲೈನ್ಸ್ ಧಾಬಾದ ಮುಂದೆ ಹೊರಟಾಗ ಸದರಿ ಜೀಪ ಚಾಲಕನು ಜೀಪನ್ನು ಅತೀವೇಗದಿಂದ ನಡೆಯಿಸಿಕೊಂಡು ಹೋಗಿ ಮುಂದೆ ಹೊರಟು ಕೋಳಿಗಳನ್ನು ಸಾಗಿಸುವ ಟೆಂಪೊ ನಂ ಕೆಎ 32 ಬಿ-2528 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ನನ್ನ ಬಲಗಾಲ ಮೋಣಕಾಲ ಕೆಳಗೆ ಗಾಯವಾಗಿರತುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment