Police Bhavan Kalaburagi

Police Bhavan Kalaburagi

Wednesday, October 12, 2011

GULBARGA DIST REPORTED CRIMES

ಉದ್ದೇಶಪೂರ್ವಕವಾಗಿ ಗೊಡೆ ಕೆಡುವಿದ ಬಗ್ಗೆ

ಗುಲಬರ್ಗಾ ಗ್ರಾಮೀಣ ಠಾಣೆ :ಶ್ರೀ ಯೋಗೇಶ ತಂದೆ ಸುಭಾಶ್ಚಂದ್ರ ಬಿರಾದಾರ ಸಾ: ಹೀರಾಪೂರ ತಾ:ಜಿ: ಗುಲಬರ್ಗಾ ರವರು ಹೀರಾಪೂರ ಗ್ರಾಮದ ಸರ್ವೆ ನಂ. 6/1 ರಲ್ಲಿ ಹಿಂದು ಸ್ಮಶಾನ ಭೂಮಿ ಇದ್ದು, ಸದರಿ ಸ್ಮಶಾನ ಭೂಮಿಯ ರಕ್ಷಣೆಗಾಗಿ ಕಾನೂನಿನ ಪ್ರಕಾರ ಕಂಪೌಂಡ ಗೋಡೆ ನಿರ್ಮಿಸಿದ್ದು ಆದರೆ ಶ್ರೀ ಸಜ್ಜಾದ ಅಲಿ ಮಾಹಾ ನಗರ ಪಾಲಿಕೆ ಸದಸ್ಯರು ಸಂಗಡ 9 ಜನರು ಹಾಗೂ ಇನ್ನು ಕೆಲವರು ಕೂಡಿಕೊಂಡು ನಿನ್ನೆ ದಿನಾಂಕ 10-10-2011 ರಂದು ರಾತ್ರಿ 11-30 ನಿಮಿಷಕ್ಕೆ ಸದರಿ ಕಂಪೌಂಡ ಗೋಡೆಯನ್ನು ಕೆಡವಿದ್ದಾರೆ ಇದರಿಂದ ಅಲ್ಲಿ ಹಿಂದು-ಮುಸ್ಲಿಂ ಭೇದ ಭಾವ ಮಾಡುವ ದೃಷ್ಟಿಯಿಂದ ಈ ಕೃತ್ಯ ನಡೆಸುತ್ತಿರುವುದು ಗೋಚರವಾಗುತ್ತಿದೆ. ಸಜ್ಜಾದ ಅಲಿ ಮಾಹಾ ನಗರ ಪಾಲಿಕೆ ಸದಸ್ಯ ಹೀರಾಪೂರ ಗ್ರಾಮಕ್ಕೆ ಬಂದು ಜಾತಿ ವಿಷಯ ಬೀಜ ಬಿತ್ತಿ ಹಿಂದು ಮತ್ತು ಮುಸ್ಲಿಂರ ಮಧ್ಯೆ ಕೋಮು ಗಲಭೆ ಮಾಡಲು ಪ್ರಯತ್ನಿಸುತ್ತಿದ್ದಾನೆ. ಅಲ್ಲದೇ ಸ್ಮಶಾನ ಭೂಮಿಯಲ್ಲಿ ಹಿಂದಿನಿಂದಲೂ ಯಾವುದೇ ರೀತಿಯ ರಸ್ತೆ ವ್ಯವಸ್ಥೆ ಹೊಂದಿರುವುದಿಲ್ಲಾ. ಆದರೆ ಈಗ ಈತನು ವಿಷ ಬೀಜ ಬಿತ್ತಿ ಅಲ್ಲಿ ರಸ್ತೆ ಬೇಕು ಅಂತಾ ಹಟಮಾರಿ ಧೋರಣೆ ಮಾಡುತ್ತಿ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 295/11 ಕಲಂ ಕಲಂ 143, 147, 447, 427, 153 ಎ ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:

ಅಪಘಾತ ಪ್ರಕರಣ : ಶ್ರೀ ಚಂದ್ರಹಾಸ ತಂದೆ ಯಲ್ಲಪ್ಪ ಜಾಲಿಹಾಳ ಉಪನ್ಯಾಸಕ ಸಾ: ವಿಜಯ ನಗರ ಕಾಲೋನಿ ಪ್ಲಾಟ ನಂ:50 ಆಳಂದ ರೋಡ ಗುಲಬರ್ಗಾ ರವರು ದಿನಾಂಕ: 11-10-2011 ರಂದು ಹೈಕೋರ್ಟ ದಿಂದ ಜೇವರ್ಗಿ ರಿಂದ ರೋಡನಲ್ಲಿ ಬರುವ ಕರುಣೇಶ್ವರ ನಗರ ಮಾ ಹಾರಾಜ ಲೇಔಟನಲ್ಲಿ ಸೇತುವೆ ಹತ್ತಿರ ರೋಡಿನ ಮೇಲೆ ಕಾರ ನಂ:ಕೆಎ 32 ಎಮ್. 9842 ನೆದ್ದರ ಚಾಲಕ ಹೈಕೋರ್ಟ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನನ್ನ ಹೊಂಡಾ ಎಕ್ಟಿವಾ ಮೋ/ಸೈಕಲ್ ನಂ:ಕೆಎ 32ವಿ 4511 ನೆದ್ದಕ್ಕೆ ಬಲಗಡೆ ಡಿಕ್ಕಿ ಪಡಿಸಿ ಅದೆ ವೇಗದಲ್ಲಿ ಮುಂದೆ ಹೋಗಿ ರೋಡಿನ ಬಾಜು ಇದ್ದ ಗೂಟ ಗಲ್ಲಿಗೆ ಡಿಕ್ಕಿ ಪಡಿಸಿ ರೋಡಿನ ಕೆಳಗೆ ಕಾರ ಚಲಾಯಿಸಿಕೊಂಡು ಹೋಗಿ ವಿದ್ಯತ ಕಂಬಕ್ಕೆ ಡಿಕ್ಕಿ ಪಡಿಸಿ ಕಾರ ಪಲ್ಟಿಮಾಡಿದ್ದು . ಸದರಿ ಘಟನೆಯಲ್ಲಿ ನನಗೆ ಸಾದಾಗಾಯ ಮತ್ತು ಕಾರಿನಲ್ಲಿದ್ದ ವಿವೇಕ ಈತನಿಗೆ ಭಾರಿಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 129/11 ಕಲಂ: 279 .337,338 ಐ.ಪಿ.ಸಿ sಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ .

ಕಳ್ಳತನ ಪ್ರಕರಣ :

ದೇವಲಗಾಣಗಾಪೂರ ಠಾಣೆ:: ಶ್ರೀ ಪ್ರಭುಲಿಂಗ ತಂದೆ ಶಿವಪ್ಪ ನಂದೂರ ಸಾ|| ಗೊಬ್ಬುರ(ಬಿ) ರವರು ದಿ|| 09/10/2011 ರಂದು ನಾನು ಎಂದಿನಂತೆ ಮುಂಜಾನೆ ಸುಮಾರಿಗೆ ಕೂಲಿ ಕೆಲಸಕ್ಕಾಗಿ ನಮ್ಮ ತಂದೆ ಶಿವಪ್ಪ ತಾಯಿ ಕಸ್ತೂರಬಾಯಿ ಇವರು ಕೂಲಿ ಕೆಲಸಕ್ಕಾಗಿ ಹೋಗಿದ್ದರು. ನಮ್ಮ ತಂದೆಯವರು ಹೊಲದಿಂದ ಊಟಕ್ಕೆ ಬರುವರೆಂದು ನಮ್ಮ ಮನೆಯ ಪಡಶಾಲೆಯ ಕೀಲಿ ಅಲ್ಲೆ ಪಕ್ಕದಲ್ಲಿರುವ ಮಾಡದಲ್ಲಿ ಇಟ್ಟು ಹೋಗಿದ್ದರು. ನಮ್ಮ ತಂದೆಯವರು ಸಂಜೆ 5-00 ಗಂಟೆ ಸುಮಾರಿಗೆ ಹೊಲದ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮನೆಯ ಕೀಲಿ ತೆರೆದಾಗ ದೇವರ ಮನೆಯಲ್ಲಿದ್ದ ಕಬ್ಬಿಣದ ಟ್ರಂಕಿನಲ್ಲಿದ್ದ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ ಅದರಲ್ಲಿದ್ದ ಬಂಗಾರದ ಬಂಗಾರದ ಆಆಭರಣಗಳು ಮತ್ತು ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 23,500=00 ರೂ. ಕಿಮ್ಮತ್ತಿನ ಒಡುವೆಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ:96/2011 ಕಲಂ.454, 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ..
ಕಳ್ಳತನ ಪ್ರಕರಣ :

ಫರಹತಾಬಾದ ಠಾಣೆ :ಶ್ರೀ ಶಾಂತಯ್ಯ ತಂದೆ ರಾಮಯ್ಯ ಗುತ್ತೇದಾರ ಸಾ: ಹತಗುಂದಾ ತಾ:ಜಿ: ಗುಲಬರ್ಗಾ ರವರು ಈಗ ಸುಮಾರು 4 ತಿಂಗಳ ಹಿಂದೆ ದಿನಾಂಕ: 4-6-2011 ರಂದು ನಾನು ನನ್ನ ಹೀರೋ ಹೋಂಡಾ ಮೊಟಾರ ಸೈಕಲ ನಂ: ಕೆಎ-03 ಎಸ್-5523 ನೇದ್ದು ತಗೆದುಕೊಂಡು ಗುಲಬರ್ಗಾದಿಂದ ನಮ್ಮ ಹೊಲಕ್ಕೆ ಹೋಗಿದ್ದು, ಸದರಿ ಮೋಟಾರ ಸೈಕಲ ಕೆಟ್ಟು ಹೋಗಿದ್ದರಿಂದ ನಮ್ಮ ಗೆಳೆಯನಾದ ಬಸವರಾಜ ನಾಯಿಕೋಡಿ ಸಾ: ಹುಣಸಿಹಡಗಿಲ ಇವರ ಮನೆಯಲ್ಲಿ ಹಚ್ಚಿ ಹೋಗಿದೇನು. ನಂತರ ಅದೇ ದಿವಸ ಯಾರೋ ಕಳ್ಳರು ನನ್ನ ಗೆಳೆಯನ ಮನೆಯ ಮುಂದೆ ನಿಲ್ಲಿಸಿದ ನನ್ನ ಮೊಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅದರ ಇಂಜನ್ ನಂ: ಸಿ-10-ಸಿ-117190 ಅಂತಾ ಇದ್ದು ಅದರ ಕಿಮ್ಮತ್ತು 30,000=00 ರೂ ಬೆಲೆ ಇರುತ್ತದೆ. ದಿನಾಂಕ: 7-10-2011 ರಂದು ನಮ್ಮ ಗೆಳೆಯನಾದ ಬಸವರಾಜ ಈತನು ಪ್ರಜಾವಾಣಿ ದಿನಪ್ರತಿಕೆಯಲ್ಲಿ ಅಪರಾಧ ಮಾಡಿದ ಸುದ್ದಿ ಬಂದಿದ್ದು, ನಂತರ ನಾನು ಠಾಣೆಗೆ ಹೋಗಿ ನಮ್ಮ ಮೊಟಾರ ಸೈಕಲ ನೋಡಿ ಗುರ್ತಿಸಿದೇನು. ಸದರಿ ಮೊಟಾರ ಸೈಕಲ ನಮ್ಮದೆ ಆಗಿರುತ್ತದೆ. ಸದರಿ ಮೊಟಾರ ಸೈಕಲನ್ನು ನ್ಯೂಸ್ ಪೇಪರದಲ್ಲಿದ್ದ ಆರೋಪಿತಾರದ ದಿಲೀಪ ಚವ್ಹಾಣ, ಅನೀಲ ಚವ್ಹಾಣ, ಶಿವಾಜಿ ಚವ್ಹಾಣ, ಅರುಣ ಚವ್ಹಾಣ ರವರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ 195/2011 ಕಲಂ, 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಅಪಘಾತ ಪ್ರಕರಣ

ಫರಹತಾಬಾದ ಠಾಣೆ : ಶ್ರೀ ದಸ್ತಗಿರ ತಂದೆ ಮುಕ್ತುಮಸಾಬ ಬಂದರವಾಡ ಸಾ: ಮೇಳಕುಂದಾ(ಕೆ) ರವರು ದಿನಾಂಕ: 11-10-2011 ರಂದು ಬೆಳಗ್ಗೆ 8-30 ಗಂಟೆ ಸುಮಾರಿಗೆ ನಮ್ಮೂರಿನ ಟಂ ಟಂ ನಂ: ಕೆಎ-32 ಎ-5310 ನೇದ್ದರಲ್ಲಿ ನಾನು ಮತ್ತು ನಮ್ಮೂರಿನ ಹೈಯಾಳಿ ಪೂಜಾರಿ, ಖಾಜಾಸಾಬ ಸಾವಳಗಿ ಕೂಡಿಕೊಂಡು ಕಡಣಿ ಮಾರ್ಕೆಟದಿಂದ ಮೇಳಕುಂದಾ(ಕೆ) ಗ್ರಾಮಕ್ಕೆ ಹೋಗುವ ಕುರಿತು ಸದರಿ ಟಂ ಟಂ ದಲ್ಲಿ ಹೋಗುತ್ತಿದ್ದೇವು. ಸದರಿ ಟಂ ಟಂ ಭೀಮಯ್ಯ ಗುತ್ತೇದಾರ ಈತನು ಚಲಾಯಿಸುತ್ತಿದ್ದನು. ಹಾರುತಿ ಹಡಗಿಲ ಕ್ರಾಸ ಹತ್ತಿರ ಮುಂದೆ ಹೋಗುತ್ತಿದ್ದಾಗ ಮೇಳಕುಂದಾ ರಸ್ತೆಯ ಕಡೆಯಿಂದಾ ಒಬ್ಬ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರವ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಗೆ ಹೋಗುತ್ತಿದ್ದ ಟಂ ಟಂ ಕ್ಕೆ ಡಿಕ್ಕಿ ಪಡಿಸಿದನು. ಅದರಿಂದ ನನಗೆ ತಲೆಗೆ ಮತ್ತು ಬಲಗಾಲ ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ. ಅಲ್ಲದೆ ಟಂ ಟಂ ಚಲಾಯಿಸುತ್ತಿದ್ದ ಭೀಮಯ್ಯ ಗುತ್ತೇದಾರ ಇವನಿಗೆ ಎಡಗೈ ಮುಂಗೈ ಮತ್ತು ಬಲಗಾಲ ಮೊಳಕಾಲ ಹತ್ತಿರ ರಕ್ತ ಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ : 196/11 ಕಲಂ 279, 337 ಐಪಿಸಿ & 187 ಐಎಂವಿ ಆಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

No comments: