Police Bhavan Kalaburagi

Police Bhavan Kalaburagi

Monday, October 17, 2011

GULBARGA DIST REPORTED CRIMES

ಪಿ.ಡಿ.ಓ ನೌಕರದಾರಳ ಆತ್ಮಹತ್ಯೆ:

ರಾಘವೇಂದ್ರ ನಗರ ಪೊಲೀಸ್ ಠಾಣೆ ಸಂಗಮೇಶ್ವರ ಕಾಲೋನಿಯ "ಬಿ" ಶಾಂಸುಂದರ ಬಡಾವಣೆಯ ಕುಮಾರಿ ಮಂದಾಕಿನಿ ತಂದೆ ಶಂಕರ ಯಕಲೂರೆ ಇವಳು ಸಣ್ಣೂರ ಗ್ರಾಮ ಪಂಚಾಯತನಲ್ಲಿ ಪಿ.ಡಿ.ಓ ಅಂತ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಅವಳಿಗೆ ಜಗದೀಶ ಪಾಟೀಲ್, ಬಸವರಾಜ್ ಹಕ್ಕಿ, ವಾಸುದೇವ ಜಾಧವ ಹಾಗು ಇತರರು ಸಾ|| ಎಲ್ಲರೂ ಸಣ್ಣೂರ ಗ್ರಾಮ ತಾ|| ಜಿ|| ಗುಲಬರ್ಗಾ ದವರು ಅವಳಿಗೆ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುವಂತೆ ಮಾನಸಿಕ ಕಿರುಕುಳ ನೀಡಿದ ಮೇರೆಗೆ, ಅವರು ಕೊಡುತ್ತಿದ್ದ ಕಿರುಕುಳ ತಾಳದೇ ದಿನಾಂಕ 16-10-2011 ರಂದು ಸಾಯಂಕಾಲ 6 ಗಂಟೆಗೆ ತನ್ನ ವಾಸದ ಮನೆಯಲ್ಲಿ ಫ್ಯಾನಿಗೆ ಸೀರೆಕಟ್ಟಿ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ. ಅಂತಾ ಅವರ ತಾಯಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :
ಎಂ.ಬಿ.ನಗರ ಪೊಲೀಸ್ ಠಾಣೆ
: ಶ್ರೀ ಸಿದ್ದು ತಂದೆ ಧರ್ಮರಾಜ ಪಾಟೀಲ್ ಸಾಃ ಜಾಗೃತಿ ಕಾಲೋನಿ ಗುಲಬರ್ಗಾ ರವರು ದಿನಾಂಕ. 16-10-2011 ರಂದು 08-30 ಎ.ಎಂ ಕ್ಕೆ ನಾನು ನನ್ನ ತಂಗಿಯನ್ನು ಕರೆದುಕೊಂಡು ಬರಲು ರೆವೂರ ಗ್ರಾಮಕ್ಕೆ ಹೋಗಿದ್ದು ಮನೆಯಲ್ಲಿ ನನ್ನ ತಾಯಿ ಉಮಾದೇವಿ ಇದ್ದರು ಅವರು 10-00 ಎ.ಎಂಕ್ಕೆ ಮನೆಗೆ ಕೀಲಿ ಹಾಕಿ ಆದರ್ಶ ನಗರಕ್ಕೆ ಹೋಗಿ ಮರಳಿ ಮಧ್ಯಾಹ್ನ ಮನೆಗೆ ಬಂದು ನೊಡಲು ಯಾರೋ ಕಳ್ಳರು ಮನೆಯ ಬಾಗಿಲ ಕೀಲಿ ಮುರಿದು ಮನೆಯ ಬೆಡ್ಡ್ ರೂಮಿನ ಅಲಮಾರಿಯಲ್ಲಿದ್ದ ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಭರಣಗಳು ಹೀಗೆ ಒಟ್ಟು ಅ.ಕಿ.2,00,000/- ಮೌಲ್ಯದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 145/2011 ಕಲಂ.454,380 ಐಪಿಸಿ. ನೆದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಜೂಜಾಟ ಪ್ರಕರಣ ;
ಗುಲಬರ್ಗಾ ಗ್ರಾಮೀಣ ಠಾಣೆ:
ಅಶೋಕ ತಂದೆ ಮಲ್ಲಣ್ಣ ಮೇಳಕುಂದಿ ಇನ್ನೂ 5 ಜನರು ಸಾ: ಎಲ್ಲರೂ ಹೀರಾಪೂರ ರವರು ದಿನಾಂಕ 16/10/11 ರಂದು ಮಧ್ಯಾಹ್ನ ಸುಮಾರಿಗೆ ಹೀರಾಪೂರ ಗ್ರಾಮದ ಮಲ್ಲಣ್ಣ ಹಡಗಿಲ ಇವರ ಬಾಳೆ ಬನದಲ್ಲಿ ಅಂದರ ಬಾಹರ ಇಸ್ಪೇಟ ಜೂಜಾಟ ವನ್ನು ಆಡುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ಪಿ.ಎಸ.ಐ ಹಾಗು ಸಿಬ್ಬಂಧಿ ಜನರು ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 6600/-, 52 ಇಸ್ಪೇಟ ಎಲೆಗಳು, ಮೂರು ಮೋಬೈಲ 1 ಹಿರೋ ಹೊಂಡಾ ಮೋಟಾರ ಸೈಕಲ ಜಪ್ತಿ ಮಾಡಿಕೊಂಡಿದ್ದರಿಂದ ಗುನ್ನೆ ನಂ: 302/2011 ಕಲಂ. 87 ಕೆಪಿ ಎಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಜೂಜಾಟ ಪ್ರಕರಣ ;
ಗುಲಬರ್ಗಾ ಗ್ರಾಮೀಣ ಠಾಣೆ:
. ರವಿ ತಂದೆ ಹಾಶಪ್ಪಗುತ್ತೇದಾರ ಇನ್ನೂ 10 ಜನರು ಸಾ: ಎಲ್ಲರೂ ಖಾದ್ರಿ ಚೌಕ ಶಾಹ ಬಜಾರ ಗುಲಬರ್ಗಾ ರವರು ದಿನಾಂಕ 16/10/11 ರಂದು ಸಾಯಂಕಾಲ್ ಸುಮಾರಿಗೆ ಹೀರಾಪೂರ ಗ್ರಾಮದ ಸೀಮಾಂತರದಲ್ಲಿ ಬರುವ ದೇಶಪಾಂಡೆ ಇವರ ಮನೆಯ ಪಕ್ಕದ ಖುಲ್ಲಾ ಜಾಗೆಯಲ್ಲಿ ಅಂದರ ಬಾಹರ ಇಸ್ಪೇಟ ಜೂಜಾಟ ವನ್ನು ಆಡುತ್ತಿದ್ದಾಗ ದಾಳಿ ಮಾಡಿ ಜೂಜಾಟಕ್ಕೆ ಬಳಸಿದ ನಗದು ಹಣ 16,400/-, 52 ಇಸ್ಪೇಟ ಎಲೆಗಳು, ಒಂಬತ್ತು ಮೋಬೈಲ ಅ, ಕಿ 7800/- ರೂ, ನಾಲ್ಕು ಮೋಟಾರ ಸೈಕಲ ಗಳು ಜಪ್ತಿ ಮಾಡಿಕೊಂಡಿದ್ದರಿಂದ ಗುನ್ನೆ ನಂ: 303 /2011 ಕಲಂ. 87 ಕೆಪಿ ಎಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: