Police Bhavan Kalaburagi

Police Bhavan Kalaburagi

Thursday, October 20, 2011

GULBARGA DIST REPORTED CRIMES

ವಾಡಿ ಠಾಣೆ : ಕು.ದೀಪಾ ತಂದೆ ಮಹಾಂತೆಶ ಚೌಹಣ ಸಾ|| ಲಕ್ಷ್ಮಿಪೂರವಾಡಿ ರವರು, ನಾನು ಖಣಿಯಲ್ಲಿ ಕೆಲಸ ಮಾಡುತ್ತಿದ್ದು ತನಗೆ ಪರಿಚಯಸ್ಥನಾದ ಶಹಬಾದದ ವಡ್ಡರ ರಾಜು ಈತನು ದಿನಾಂಕ 13-10-2011 ರಂದು 4-00 ಪಿ.ಎಮ್ ಕ್ಕೆ ತಮ್ಮ ಮನೆಯ ಹತ್ತಿರ ಬಂದು ತನಗೆ ಪುಸಲಾಯಿಸಿ ಗುಲಬರ್ಗಾದ ರಾಣೇಶ್ವರ ದರ್ಗಾಕ್ಕೆ ಕರೆದುಕೊಂಡು ಹೋಗಿ ತನಗೆ ಮದುವೆ ಆಗಿಲ್ಲ ಅಂತ ಹೇಳಿ ದಿನಾಂಕ 14-10-2011 ರಂದು ರಾತ್ರಿ 8-00 ಗಂಟೆ ಸುಮಾರಿಗೆ ರಾಣೇಶ್ವರ ದರ್ಗಾದ ಕೆಳಗೆ ತಗ್ಗಿಗೆ ಕರೆದುಕೊಂಡು ಹೋಗಿ ತನಗೆ ಜಬರಿ ಸಂಬೋಗ ಮಾಡಿ ನಂತರ ದಿನಾಂಕ 16-10-2011 ರಂದು ಪುನಾಕ್ಕೆ ಕರೆದುಕೊಂಡು ಹೋಗಿ ದಿನಾಂಕ 18-10-2011 ರಂದು ಶಹಬಾದಕ್ಕೆ ಬಂದು ಒಂದು ಮನೆಯಲ್ಲಿ ಇಟ್ಟು ಹೋದಾಗ ರಾಜುಗೆ ಮದುವೆ ಆಗಿದೆ ಅಂತ ಗೊತ್ತಾಗಿ ನಾನು ಹೇಳದೆ ಕೇಳದೆ ಮನೆಗೆ ಬಂದು ಇಂದು ತನ್ನ ತಾಯಿಯೊಂದಿಗೆ ಠಾಣೆಗೆ ಹಾಜರಾಗಿ ರಾಜು ಈತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಗುನ್ನೆ ನಂ. 200/2011 ಕಲಂ 366(ಎ), 506,,376 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ : ಶ್ರೀ ಸೈಯದ ಅನ್ವರ ಹುಸೇನ ತಂದೆ ಸೈಯದ ಮಹಿಬೂಬ ಸಾ:ಬುಲಂದ ಚಾಂದ ಬೀಬಿ ಬಿ.ಇಡಿ ಕಾಲೇಜ ಹತ್ತಿರ ಗುಲಬರ್ಗಾ ರವರು, ದಿನಾಂಕ 18/10/11 ರಂದು ಮದ್ಯಾಹ್ನ 4 ಗಂಟೆಯ ಸುಮಾರಿಗೆ ನಾನು ಮದುವೆಯ ಸಾಮಾನು ತರಲು ಮಾರ್ಕೆಟಿಗೆ ಹೋದಾಗ ಹಾಗೂ ಅವನ ಪತ್ನಿ ಪೂನಾಕ್ಕೆ ಲಗ್ನ ಪತ್ರ ಕೊಡಲು ಹೋದ ಸಮಯದಲ್ಲಿ ಸನಾಬೇಗಂ ಇವಳ ಮದುವೆ ನಿಶ್ಚಯವಾದ ಬೀಗರಾದ ಯದುಲ್ಲಾ ಕಾಲನಿಯ ಅತ್ತೆ ತಾಹೇರ ಬೇಗಂ ಗಂಡ ಅಲಿಸಾಬ ಸಾ: ಯದುಲ್ಲಾ ಕಾಲನಿ ಗುಲಬರ್ಗಾ ಮತ್ತು ಗಂಡ ಮೋಬಿನ ತಂದೆ ಅಲಿಸಾಬ ಸಾ: ಯದುಲ್ಲಾ ಕಾಲನಿ ಗುಲಬರ್ಗಾ ಮನೆಗೆ ಬಂದು ನನ್ನ ಮಗಳಾದ ಸನಾಬೇಗಂ ಇವಳಿಗೆ ನೀನು ಆಟೋದವನ ಸಂಗಡ ಇದ್ದಿ ನಿನ್ನ ಚರಿತ್ರೆ ಸರಿ ಇಲ್ಲ ಅಂತಾ ನಿಂದಿಸಿ ಮಾತಾಡಿದ್ದು ಹಾಗೂ ನನಗೆ ಲಗ್ನ ಮಾಡಿಕೊಳ್ಳುವುದಿಲ್ಲ ದಿನಾಂಕ 28/10/2011 ರಂದು ಮದುವೆ ನಡೆಯುವದಿಲ್ಲ ಅಂತಾ ಅವರ ಚರಿತ್ರೆಗೆ ಹೀಯಾಳಿಸಿ ಮಾತಾಡಿ ಅವಮಾನ ಮಾಡಿದ್ದರಿಂದ ನನ್ನ ಮಗಳಾದ ಸನಾಬೇಗಂ ಮಾನಸಿಕವಾಗಿ ನೊಂದು ಮನೆಯಲ್ಲಿ ಇರುವ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದ್ದು. ಉಪಚಾರದಿಂದ ಗುಣ ಮುಖ ಹೊಂದದೆ ಸನಾಬೇಗಂ ಇವಳು ದಿನಾಂಕ 19-10-11 ರಂದು 00:15 ಎಎಮ್ ಸುಮಾರಿಗೆ ಮೃತಪಟ್ಟಿರುತ್ತಾಳೆ. ಕಾರಣ ನನ್ನ ಮಗಳ ಸಾವಿಗೆ ಕಾರಣರಾದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ. 307/2011 ಕಲಂ. 504 306 ಸಂ/ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳಾ ಠಾಣೆ : ಶ್ರೀ ಅಂಬಣ್ಣ ತಂದೆ ಸೈದಪ್ಪ ತಾಳಿಕೋಟಿ ಸಾ: ಗಾಜಿಪೂರ ಗುಲಬರ್ಗಾ ರವರು, ನನ್ನ 3 ನೇ ಮಗಳಾದ ಸುಹಾಸಿನಿ ತಾಯಿಯೊಂದಿಗೆ ಸಣ್ಣ ಪುಟ್ಟ ಜಗಳ ಮಾಡಿಕೊಂಡಿದ್ದು ದಿನಾಂಕ 11.09.11 ರಂದು ನಸುಕಿನ 3 ಗಂಟೆ ಸುಮಾರಿಗೆ ನಾವು ಮಲಗಿದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಿರುತ್ತಾಳೆ. ಅವಳ ಬಗ್ಗೆ ಸಂಬಂದಿಕರ ಮನೆಗೆ ಹಾಗೂ ಸ್ನೇಹಿತರ ಮನೆಗೆ ಹೋಗಿ ಎಲ್ಲಾಕಡೆ ವಿಚಾರಿಸಿದ್ದು ಸಿಕ್ಕಿರುವುದಿಲ್ಲ. ಕಾರಣ ಕಾಣೆಯಾದ ನನ್ನ ಮಗಳನ್ನು ಪತ್ತೆ ಹಚ್ಚಿಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆ ಗುನ್ನೆ ನಂ 103/11 ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.

No comments: