ಜಾನುವಾರುಗಳು ಸಾಗಿಸುತ್ತಿದ್ದ ಬಗ್ಗೆ :
ಜೇವರ್ಗಿ ಪೋಲಿಸ ಠಾಣೆ : ಶ್ರೀ ಸಿದ್ದಲಿಂಗಯ್ಯ ಸ್ವಾಮಿ ತಂದೆ ಕರಣಯ್ಯ ಸ್ವಾಮಿ ಸಾ: ಅಂದೋಲ ರವರು ನಾನು ಮತ್ತು ಜೈಪಾಲ ಅಂಗಡಿ , ಮಲ್ಲಿಕಾರ್ಜುನ ನಾಯಕೊಡಿ , ಮೂವರು ಚಿಗರಳ್ಳಿ ಕ್ರಾಸ ಹತ್ತಿರ ದಿನಾಂಕ: 25/10/2011 ರಂದು ಮುಂಜಾನೆ ನಿಂತಿರುವಾಗ ಶರಣಪ್ಪ ತಂದೆ ಗುಂಡಪ್ಪ ಪೂಜಾರಿ ಸಾ: ಗೌನಳ್ಳಿ ಸಂಗಡ ಇನ್ನೋಬ ಸಾ || ಗೋಗಿ ಇವರು 5 ಎತ್ತುಗಳನ್ನು ನೀರು ಆಹಾರ ನೀಡದೆ ಹಿಂಸೆಕೊಡುತ್ತಾ ಕಸಾಯಿ ಖಾನೆಗೆ ಸಾಗಿಸುತ್ತಿದ್ದಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 186/2011 ಕಲಂ 8, 9, 11, ಕರ್ನಾಟಕ ಪ್ರೇವೆನೆಶನ ಅಫ ಕೌವ ಸ್ಲಾಟರ ಅಂಡ್ಯ ಕಾಟಲ್ ಪ್ರವೇನಶನ ಅಕ್ಟ 1964 ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ : ಶ್ರೀ ಭೀಮರಾವ ತಂದೆ ಭೀಮಶಪ್ಪ ರಾಮನಹಳ್ಳಿ ಸಾಃ 13 ನೇ ಕ್ರಾಸ್ ತಾರಫೇಲ್ ಗುಲಬರ್ಗಾ ರವರು ನಾನು ದಿನಾಂಕಃ 23/10/2011 ರಂದು ಬೆಳಗ್ಗೆ 09:00 ಗಂಟೆಗೆ ಹಿರೋ ಹೊಂಡಾ ಸ್ಪೆಂಡರ್ ಪ್ಲಸ್ ಮೋಟಾರ ಸೈಕಲ್ ನಂ. ಕೆ.ಎ 35 ಕೆ. 8849 ಅಃಕಿಃ 22,000/- ರೂ. ನೇದ್ದನ್ನು ಬಸವೇಶ್ವರ ಆವರಣದಲ್ಲಿ ಪ್ರತಿ ದಿನದಂತೆ ನಿಲ್ಲಿಸಿದ್ದು ನನ್ನ ಕೆಲಸ ಮುಗಿಸಿಕೊಂಡು ಮದ್ಯಾಹ್ನ 01:00 ಗಂಟೆಗೆ ಊಟಕ್ಕೆ ಮನೆಗೆ ಹೋಗಲು ಹೊರಗಡೆ ಬಂದಾಗ ನಾನು ನಿಲ್ಲಿಸಿ ಸ್ಥಳದಲ್ಲಿ ವಾಹನ ಇರಲಿಲ್ಲಾ. ಸುತ್ತ ಮುತ್ತ ಹುಡುಕಾಡಲಾಗಿ ಸಿಗಲಿಲ್ಲ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 149/2011 ಕಲಂ. 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ.ಶರಣಕುಮಾರ ತಂದೆ ವೀರಣ್ಣ ಬಿರಾದಾರ ಸಾ; ಬೇಲೂರ [ಕೆ] ತಾ;ಜಿ: ಗುಲಬರ್ಗಾ ರವರು ನಾನು ಹೊಲದಲ್ಲಿ ಕಬ್ಬಿನ ಬೆಳೆಗೆ ನೀರು ಹಾಯಿಸಲು ಬಂದಾರಿಗೊಂಟ ನೀರಿನ ಕಾಲುವೆ ಮಾಡಿದ್ದು, ಕಾಲುವೆಯಲ್ಲಿ ಹುಲ್ಲು ಗಿಡಗಂಟಿಗಳು ಬೆಳೆದು ನೀರು ಸರಿಯಾಗಿ ಹೋಗುತ್ತಿಲ್ಲವಾದ್ದರಿಂದ ಕಾಲುವೆಯಲ್ಲಿ ಬೆಳೆದ ಹುಲ್ಲು ಕಿತ್ತಿ ಗಿಡಗಂಟಿಗಳನ್ನು ಕಡಿಯುತ್ತಿದ್ದಾಗ ಮಲ್ಲಣ್ಣನು ನನಗೆ ಬಂದಾರಿಯಲ್ಲಿ ಬೆಳೆದ ಗಿಡ ಯಾಕೆ ಕಡಿಯುತ್ತಿ ಸೂಳೆ ಮಗನೆ ಅಂತಾ ಬೈಯ್ದು ಜಗಳ ತೆಗೆದಿದ್ದು, ನಾಣು ಮನೆಗೆ ಬಂದು ತಿಳಿಸಿದ್ದು ದಿನಾಂಕ:25/10/2011 ರಂದು ಬೆಳೆಗ್ಗೆ 6-30 ಗಂಟೆಗೆ ನಾನು ಕಿರಾಣಾ ಅಂಗಡಿಗೆ ಹೋದಾಗ ಮಲ್ಲಣ್ಣ ಈತನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ತೆಕ್ಕಿ ಕುಸ್ತಿ ಬಿದ್ದು ಕಲ್ಲಿನಿಂದ ತೆಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲದೇ ಬಿಡಿಸಲು ಬಂದ ವೀರಣ್ಣ ಬಿರಾದಾರ ಮತ್ತು ಅಣ್ಣ ರೇವಪ್ಪ ಇವರಿಗೂ ಸಹ ಮಲ್ಲಣ್ಣನ ಹೆಂಡತಿ ಭಾಗೀರಥಿ ಮತ್ತು ಹಣಮಂತರಾಯ ಕೂಡಿ ಕಲ್ಲಿನಿಂದ ಹೊಡೆದು ಕಾಲಿನಿಂದ ಒದ್ದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 129/2011 ಕಲಂ 341.323.324.504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment